'ದಿ ಬೆಂಗಾಲ್ ಫೈಲ್ಸ್' ಟ್ರೇಲರ್ ಬಿಡುಗಡೆಗೆ ಕೋಲ್ಕತ್ತಾ ಪೊಲೀಸರ ತಡೆ

ಇಂದು ಮಧ್ಯಾಹ್ನ ಮಹಾನಗರದ ಪಂಚತಾರಾ ಹೋಟೆಲ್‌ನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು.
The Bengal Files
ಚಿತ್ರದ ಪೋಸ್ಟರ್
Updated on

ಕೋಲ್ಕತ್ತಾ: 1946ರ ಕೋಲ್ಕತ್ತ ಗಲಭೆಯ ಕುರಿತ ನೈಜ ಘಟನೆಯಾಧಾರಿತ ಸಿನಿಮಾ 'ದಿ ಬೆಂಗಾಲ್ ಫೈಲ್ಸ್‌'ನ ಟ್ರೈಲರ್‌ ಬಿಡುಗಡೆ ಕಾರ್ಯಕ್ರಮವನ್ನು ಶನಿವಾರ ಕೋಲ್ಕತ್ತಾ ಪೊಲೀಸರು ತಡೆದಿದ್ದಾರೆ ಎಂದು ಸಿನಿಮಾ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು ಹೇಳಿದ್ದಾರೆ.

ಇಂದು ಮಧ್ಯಾಹ್ನ ಮಹಾನಗರದ ಪಂಚತಾರಾ ಹೋಟೆಲ್‌ನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಪೊಲೀಸರು ಇದನ್ನು ತಡೆದಿದ್ದಾರೆ ಎಂದು ಸಿನಿಮಾ ನಿರ್ದೇಶಕರು ಆರೋಪಿಸಿದ್ದಾರೆ.

ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

The Bengal Files
69 ನೇ ರಾಷ್ಟ್ರೀಯ ಪ್ರಶಸ್ತಿಗಳು: 'ದಿ ಕಾಶ್ಮೀರ್ ಫೈಲ್ಸ್' ಆಯ್ಕೆಗೆ ತಮಿಳುನಾಡು ಸಿಎಂ ಸ್ಟಾಲಿನ್ ಕಿಡಿ!

ಸೆನ್ಸಾರ್ ಮಂಡಳಿ ಚಿತ್ರಕ್ಕೆ ಅನುಮತಿ ನೀಡಿದ್ದರಿಂದ ಮತ್ತು "ಕಲ್ಕತ್ತಾ ಹೈಕೋರ್ಟ್ ಅದರ ಮೇಲಿನ ನಿಷೇಧಕ್ಕೆ ತಡೆ ನೀಡಿದೆ". ಹಾಗಿದ್ದರೂ ಕಾರ್ಯಕ್ರಮದ ಮೇಲೆ ನಿರ್ಬಂಧ ವಿಧಿಸಿರುವುದು ಜನರ ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಅಗ್ನಿಹೋತ್ರಿ ಕಿಡಿ ಕಾರಿದ್ದಾರೆ.

1940ರ ದಶಕದಲ್ಲಿ ಅವಿಭಜಿತ ಬಂಗಾಳದಲ್ಲಿ ನಡೆದ ಕೋಮು ಹಿಂಸಾಚಾರವನ್ನು ಆಧರಿಸಿ ದಿ ಬೆಂಗಾಲ್ ಫೈಲ್ಸ್ ಸಿನಿಮಾ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com