
ನವಾಡಾ: ಬಿಹಾರದ ನವಾಡಾದಲ್ಲಿ ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಮಹಾಘಟಬಂಧನ್ ನಾಯಕರು ಪ್ರಯಾಣಿಸುತ್ತಿದ್ದ ಜೀಪ್ ಪೊಲೀಸ್ ಅಧಿಕಾರಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದು, ತಕ್ಷಣ ಕಾಂಗ್ರೆಸ್ ಮುಖಂಡರು ಅಧಿಕಾರಿಯನ್ನು ತಮ್ಮ ವಾಹನದಲ್ಲಿ ಕೂರಿಸಿ ಅವರ ಯೋಗಕ್ಷೇಮ ವಿಚಾರಿಸಿದರು.
ನವಾಡಾದಲ್ಲಿ ರಾಹುಲ್ ಗಾಂಧಿಯವರ "ಮತದಾರ ಅಧಿಕಾರ ಯಾತ್ರೆ"ಗೆ ಸೇರಿದ್ದ ಭಾರೀ ಜನಸಂದಣಿಯಿಂದಾಗಿ ನಿಧಾನವಾಗಿ ಚಲಿಸುತ್ತಿದ್ದ ವಾಹನ ಆಕಸ್ಮಿಕವಾಗಿ ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದು, ಅವರು ಕೆಳಗೆ ಬಿದ್ದರು. ಜನ ತಕ್ಷಣ ಅವರನ್ನು ಎತ್ತಿಕೊಂಡರು.
ಘಟನೆಯಲ್ಲಿ ಪೊಲೀಸ್ ಅಧಿಕಾರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಮತ್ತು ಅವರು ತಕ್ಷಣವೇ ಎದ್ದು ನಿಂತರು ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿಯವರು ಆ ಪೊಲೀಸ್ ಸಿಬ್ಬಂದಿಯನ್ನು ತಮ್ಮ ಜೀಪಿನಲ್ಲಿ ಕೂರಿಸಲು ಕೇಳಿಕೊಂಡರು ಮತ್ತು ನಂತರ ಅವರಿಗೆ ನೀರು ನೀಡಿ, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಯಾತ್ರೆ ಮುಂದಕ್ಕೆ ಸಾಗುತ್ತಿದ್ದಂತೆ ಪೊಲೀಸ್ ಅಧಿಕಾರಿ, ರಾಹುಲ್ ಗಾಂಧಿಯವರ ಜೀಪಿನಲ್ಲಿ ಕುಳಿತಿರುವುದು ಕಂಡುಬಂದಿದೆ.
Advertisement