
ನವದೆಹಲಿ: ಬಾಂಗ್ಲಾದೇಶದ ಅವಾಮಿ ಲೀಗ್ ಸದಸ್ಯರು ಭಾರತದ ನೆಲದಿಂದ ಬಾಂಗ್ಲಾದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಆರೋಪಗಳನ್ನು ಭಾರತ ತಿರಸ್ಕರಿಸಿದೆ. 'ನಮ್ಮ ನೆಲದಿಂದ ಯಾವುದೇ ದೇಶದ ವಿರುದ್ಧ ರಾಜಕೀಯ ಚಟುವಟಿಕೆಗಳನ್ನು ಅನುಮತಿಸಲಾಗುವುದಿಲ್ಲ' ಎಂದು ಭಾರತ ಹೇಳಿದೆ. ಅವಾಮಿ ಲೀಗ್ ಪಕ್ಷದ ಮುಖ್ಯಸ್ಥೆ ಮತ್ತು ಮಾಜಿ ಪ್ರಧಾನಿ ಶೇಖ್ ಹಸೀನಾ ಪ್ರಸ್ತುತ ಭಾರತದಲ್ಲಿ ಆಶ್ರಯಪಡೆದಿದ್ದಾರೆ.
ಭಾರತದಲ್ಲಿ ಅವಾಮಿ ಲೀಗ್ ಸದಸ್ಯರು ನಡೆಸುತ್ತಿರುವ ಯಾವುದೇ ಬಾಂಗ್ಲಾದೇಶ ವಿರೋಧಿ ಚಟುವಟಿಕೆಯ ಬಗ್ಗೆ ನವದೆಹಲಿಗೆ ತಿಳಿದಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. 'ಭಾರತದ ನೆಲದಿಂದ ಇತರ ದೇಶಗಳ ವಿರುದ್ಧ ರಾಜಕೀಯ ಚಟುವಟಿಕೆಗಳನ್ನು ಸರ್ಕಾರ ಅನುಮತಿಸುವುದಿಲ್ಲ. ಆದ್ದರಿಂದ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಪತ್ರಿಕಾ ಹೇಳಿಕೆ ತಪ್ಪಾಗಿದೆ' ಎಂದು ಅವರು ಹೇಳಿದರು. ವಾಸ್ತವವಾಗಿ, ನವದೆಹಲಿ ಮತ್ತು ಕೋಲ್ಕತ್ತಾದಲ್ಲಿ ಅವಾಮಿ ಲೀಗ್ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ತಕ್ಷಣವೇ ಅವುಗಳನ್ನು ಮುಚ್ಚುವಂತೆ ಒತ್ತಾಯಿಸಿತ್ತು. ಬಾಂಗ್ಲಾದೇಶ ಯಾವುದೇ ಪುರಾವೆಗಳಿಲ್ಲದೆ ಹೇಳಿಕೊಂಡಿದೆ MEA ತಿಳಿಸಿದೆ.
ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯವು ಹೇಳಿಕೆಯಲ್ಲಿ 'ಬಾಂಗ್ಲಾದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಯಾವುದೇ ರೀತಿಯ ರಾಜಕೀಯ ಚಟುವಟಿಕೆಯನ್ನು ಯಾವುದೇ ಬಾಂಗ್ಲಾದೇಶದ ನಾಗರಿಕರು ನಡೆಸುವುದು, ವಿಶೇಷವಾಗಿ ನಿಷೇಧಿತ ರಾಜಕೀಯ ಪಕ್ಷದ ಕಾರ್ಯಕರ್ತರು ಭಾರತದ ನೆಲದಲ್ಲಿ ಕಾನೂನುಬದ್ಧವಾಗಿ ಅಥವಾ ಅಕ್ರಮವಾಗಿ ವಾಸಿಸುತ್ತಿದ್ದಾರೆ. ಅಲ್ಲದೆ ಕಚೇರಿಗಳನ್ನು ಸ್ಥಾಪಿಸುವುದು, ಬಾಂಗ್ಲಾದೇಶದ ಜನರು ಮತ್ತು ರಾಷ್ಟ್ರದ ವಿರುದ್ಧದ ಸ್ಪಷ್ಟ ಅವಮಾನವಾಗಿದೆ' ಎಂದು ಆರೋಪಿಸಿದೆ. ನವದೆಹಲಿ ಮತ್ತು ಕೋಲ್ಕತ್ತಾದಲ್ಲಿ ಸ್ಥಾಪಿಸಲಾಗಿದೆ ಎನ್ನಲಾದ ಅವಾಮಿ ಲೀಗ್‌ಗೆ ಸಂಬಂಧಿಸಿದ ಕಚೇರಿಗಳನ್ನು ಹೇಳಿಕೆಯಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದ್ದು ಅವುಗಳನ್ನು ಮುಚ್ಚಲು ಭಾರತವನ್ನು ಒತ್ತಾಯಿಸಿತ್ತು.
ಮೇ 2025 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಮುಖಾಮುಖಿಯ ಮಧ್ಯೆ, ನಿವೃತ್ತ ಬಾಂಗ್ಲಾದೇಶದ ಮೇಜರ್ ಜನರಲ್ ಎಎಲ್ಎಂ ಫಜ್ಲುರ್ ರೆಹಮಾನ್ ಅವರು ಪ್ರಚೋದನಕಾರಿ ಪೋಸ್ಟ್‌ನಲ್ಲಿ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಬಾಂಗ್ಲಾದೇಶವು ಚೀನಾದ ಬೆಂಬಲದೊಂದಿಗೆ ಭಾರತದ ಈಶಾನ್ಯದ ಏಳು ರಾಜ್ಯಗಳನ್ನು ಆಕ್ರಮಿಸಿಕೊಳ್ಳಬೇಕು ಎಂದು ಹೇಳಿದ್ದರು.
Advertisement