
ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂಗೆ (TTD) ಸೇರಿದ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಒಬೆರಾಯ್ ಹೋಟೆಲ್‌ಗಳಿಗೆ ಹಸ್ತಾಂತರಿಸಲು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಪಿತೂರಿ ನಡೆಸುತ್ತಿದ್ದಾರೆ ಎಂದು ವೈಎಸ್‌ಆರ್‌ಸಿಪಿ ನಾಯಕ ಬಿ ಕರುಣಾಕರ್ ರೆಡ್ಡಿ ಭಾನುವಾರ ಆರೋಪಿಸಿದ್ದಾರೆ.
TTD ಒಡೆತನದ ರೂ. 1,500 ಕೋಟಿ ಮೌಲ್ಯದ 20 ಎಕರೆ ಪ್ರಮುಖವಾದ ಭೂಮಿಯನ್ನು ಕಡಿಮೆ ಮೌಲ್ಯದ ಗ್ರಾಮೀಣ ಭೂಮಿಗೆ ವಿನಿಮಯ (exchanged) ಮಾಡಿಕೊಳ್ಳಲಾಗಿದೆ. ಇದರಿಂದಾಗಿ ರೂ. 1,000 ಕೋಟಿ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
ಭೂ ವಿನಿಮಯದ ನೆಪದಲ್ಲಿ ಒಬೆರಾಯ್ ಹೋಟೆಲ್‌ಗಳಿಗೆ TTDಯ ಬೆಲೆಬಾಳುವ ಆಸ್ತಿ ನೀಡುವ ಪಿತೂರಿ ಹಿಂದೆ ನಾಯ್ಡು ಮಾಸ್ಟರ್ ಮೈಂಡ್ ಆಗಿದ್ದಾರೆ ಎಂದು ಟಿಟಿಡಿ ಮಾಜಿ ಅಧ್ಯಕ್ಷರು ಸುದ್ದಿಗಾರರಿಗೆ ತಿಳಿಸಿದರು. ಈ ಒಪ್ಪಂದ ಅನುಮೋದಿಸಲು ಮೇ 7 ರಂದು TTD ವಿಶೇಷ ಸಭೆ ನಡೆಸಿದ್ದು, ತದನಂತರ ಆಗಸ್ಟ್ 7 ರಂದು ಸರ್ಕಾರ ಆದೇಶ ಹೊರಡಿಸಿದೆ.
ದೇವಾಲಯದ ನಗರದಲ್ಲಿ ಒಬೆರಾಯ್ ಹೋಟೆಲ್ ಗಳಿಗೆ ನಾಯ್ಡು ಪ್ರಮುಖವಾದ ಸ್ಥಾನದ ಗಿಫ್ಟ್ ನೀಡಿದ್ದು, ಇದು "ಹಗಲು ದರೋಡೆ" ಎಂದು ಕರುಣಕಾರೆಡ್ಡಿ ಕರೆದಿದ್ದಾರೆ.
ಟಿಡಿಪಿ ನೇತೃತ್ವದ ಸರ್ಕಾರ ಉದ್ದೇಶಪೂರ್ವಕವಾಗಿ ಭೂಮಿ ಮೌಲ್ಯಮಾಪನವನ್ನು ಅಜೆಂಡಾದಿಂದ ಕೈಬಿಟ್ಟಿದೆ. ವಿನಿಮಯ ಕಾನೂನುಬದ್ಧ ಎಂದು ತೋರಿಸಲು ದೇವಾಲಯದ ಭೂಮಿಯನ್ನು ಇನಾಮು ಭೂಮಿ ಎಂದು ಉಲ್ಲೇಖಿಸಲಾಗಿದೆ.
ತಿರುಪತಿ ಬಳಿಯ ರೇಣಿಗುಂಟಾ ಮತ್ತು ಇತರ ಪ್ರದೇಶಗಳಲ್ಲಿ ಸಾರ್ವಜನಿಕ ಭೂಮಿ ಲಭ್ಯವಿದ್ದಾಗ ಸರ್ಕಾರ ಯೋಜನೆಗೆ ದೇವಾಲಯದ ಭೂಮಿಯನ್ನು ಏಕೆ ಆಯ್ಕೆ ಮಾಡಿದೆ ಎಂದು ಪ್ರಶ್ನಿಸಿದ ಅವರು, ಇದು ಸರ್ಕಾರದ ಪೂರ್ವ ಸಂಚು ಆಗಿದೆ ಎಂದು ಆರೋಪಿಸಿದರು.
ಇದನ್ನು ಹಿಂದೂ ಧರ್ಮದ ಮೇಲಿನ "ನೇರ ದಾಳಿ ಎಂದು ವಾಗ್ದಾಳಿ ನಡೆಸಿದ ಕರುಣಾಕರ್ ರೆಡ್ಡಿ, ನಾಯ್ಡು ನೇತೃತ್ವದ ಎನ್‌ಡಿಎ ಸಮ್ಮಿಶ್ರ ಸರ್ಕಾರವು ಸನಾತನ ಧರ್ಮವನ್ನು ಹಾಳುಮಾಡುವ ಮೂಲಕ ಪ್ರವಾಸೋದ್ಯಮದ ಹೆಸರಿನಲ್ಲಿ ದೇವಾಲಯದ ಆಸ್ತಿಗಳನ್ನು ಹರಾಜು ಮಾಡಿದೆ ಎಂದು ಆರೋಪಿಸಿದರು.
ಇದಕ್ಕೆ ನಾಯ್ಡು, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು ಅವರನ್ನು ಹೊಣೆಗಾರರನ್ನಾಗಿಸಿರುವ ರೆಡ್ಡಿ, ಕೂಡಲೇ ಸರ್ಕಾರ ತನ್ನ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದರು. ಇದು ಕೇವಲ ಭೂಮಿಗೆ ಸಂಬಂಧಿಸಿದ್ದಲ್ಲ; ಇದು ಜಗತ್ತಿನಾದ್ಯಂತ ಇರುವ ವೆಂಕಟೇಶ್ವರ ಸ್ವಾಮಿ ಭಕ್ತರ ನಂಬಿಕೆ, ವಿಶ್ವಾಸ ಮತ್ತು ಘನತೆಗೆ ಸಂಬಂಧಿಸಿದೆ ಎಂದು ಅವರು ಹೇಳಿದರು.
Advertisement