Guruvayur ದೇವಸ್ಥಾನದ ಕೊಳದಲ್ಲಿ ಪಾದ ತೊಳೆದ ಜಾಸ್ಮಿನ್ ಜಾಫರ್: ಮಂಗಳವಾರ 'ಶುದ್ಧೀಕರಣ' ; ಭಕ್ತರ ಪ್ರವೇಶಕ್ಕೆ ನಿರ್ಬಂಧ!

ಹಿಂದೂಯೇತರ ಮಹಿಳೆಯೊಬ್ಬರು ಕೊಳದ ಆವರಣ ಪ್ರವೇಶಿಸಿ ವಿಡಿಯೋ ಮಾಡಿ ದೇವಾಲಯದ ಸಂಪ್ರದಾಯಗಳನ್ನು ಮುರಿದಿದ್ದಾರೆ. ಹೀಗಾಗಿ ಆಗಸ್ಟ್ 26 ರಂದು ಶುದ್ಧೀಕರಣ ಕಾರ್ಯ ನಡೆಸಲಾಗುವುದು.
Jasmin Jaffar
ಜಾಸ್ಮಿನ್ ಜಾಫರ್
Updated on

ತಿರುವನಂತಪುರ: ಮುಸ್ಲಿಂ ಮಹಿಳೆಯೊಬ್ಬರು ಪ್ರವೇಶಿಸಿದ್ದಕ್ಕೆ ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗುರವಾಯೂರು ಶ್ರೀ ಕೃಷ್ಣ ದೇಗುಲದ ಕೊಳದಲ್ಲಿ ಮಂಗಳವಾರ 'ಶುದ್ದೀಕರಣ' ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ.

ಇದೇ ಕಾರಣ: ಸಾಮಾಜಿಕ ಮಾಧ್ಯಮ ಇನ್ ಫ್ಲುಯೆನ್ಸರ್ ಜಾಸ್ಮಿನ್ ಜಾಫರ್ ದೇವಸ್ಥಾನದ ಕೊಳದಲ್ಲಿ ತಮ್ಮ ಪಾದಗಳನ್ನು ತೊಳೆಯುತ್ತಿರುವ ದೃಶ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಅವರು ಪೋಸ್ಟ್ ಡಿಲೀಟ್ ಮಾಡಿ, ಕ್ಷಮೆಯಾಚಿಸಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ ಶುದ್ದೀಕರಣ ಕಾರ್ಯದ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.

ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಹಿಂದೂಯೇತರ ಮಹಿಳೆಯೊಬ್ಬರು ಕೊಳದ ಆವರಣ ಪ್ರವೇಶಿಸಿ ವಿಡಿಯೋ ಮಾಡಿ ದೇವಾಲಯದ ಸಂಪ್ರದಾಯಗಳನ್ನು ಮುರಿದಿದ್ದಾರೆ. ಹೀಗಾಗಿ ಆಗಸ್ಟ್ 26 ರಂದು ಶುದ್ಧೀಕರಣ ಕಾರ್ಯ ನಡೆಸಲಾಗುವುದು. ಅಂದು ಬೆಳಿಗ್ಗೆ 5 ರಿಂದ ಮಧ್ಯಾಹ್ನದವರೆಗೂ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ.

ದೇವಾಲಯದ ಆವರಣದಲ್ಲಿ ರೀಲ್ಸ್ ಮಾಡುವುದಕ್ಕೆ ನಿರ್ಬಂಧವಿದ್ದರೂ ಅದನ್ನು ಉಲ್ಲಂಘಿಸಲಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ನ್ಯಾಯಾಲಯ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Jasmin Jaffar
ದಲಿತ ಕಾಂಗ್ರೆಸ್ ಶಾಸಕ ಭೇಟಿ ನೀಡಿದ್ದಕ್ಕೆ ದೇವಾಲಯದ ಶುದ್ಧೀಕರಣ: ಬಿಜೆಪಿ ನಾಯಕ ಪಕ್ಷದಿಂದ ಕಿಕ್ ಔಟ್!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com