
ದುಮ್ಕಾ: ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ 17 ವರ್ಷದ ಬುಡಕಟ್ಟು ಬಾಲಕಿ ಮೇಲೆ ನಾಲ್ಕರಿಂದ ಐದು ಜನ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಮತ್ತು ಆಕೆಯ ಬಾಯ್ಫ್ರೆಂಡ್ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ಕಾಥಿಕುಂಡ್ ಪೊಲೀಸ್ ಠಾಣೆ ಪ್ರದೇಶದ ಗುಮ್ರಾ ಕಾಡಿನಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
"ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪಿಗೆ(ಪಿವಿಟಿಜಿ) ಸೇರಿದ ಈ ಹುಡುಗಿ, ತಾನು ಸಂಬಂಧ ಹೊಂದಿದ್ದ ವಾಹನದ ಕ್ಲೀನರ್ ಜೊತೆಗೆ ಕಲ್ಲಿದ್ದಲು ತುಂಬಿದ ಟ್ರಕ್‌ನಲ್ಲಿ ಬಂದಿದ್ದಳು" ಎಂದು ಕಾಥಿಕುಂಡ್ ಪೊಲೀಸ್ ಠಾಣೆಯ ಅಧಿಕಾರಿ ತ್ರಿಪುರಾರಿ ಕುಮಾರ್ ಅವರು ತಿಳಿಸಿದ್ದಾರೆ.
"ದುಮ್ಕಾದಲ್ಲಿ ಕಲ್ಲಿದ್ದಲು ಇಳಿಸಿ ಹಿಂತಿರುಗಲು ಚಾಲಕನಿಗೆ ಸೂಚಿಸಲಾಗಿತ್ತು. ಈ ವೇಳೆ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ನಾಲ್ಕೈದು ಯುವಕರು ಅವರನ್ನು ಅಡ್ಡಗಟ್ಟಿದರು" ಎಂದು ಅವರು ಹೇಳಿದ್ದಾರೆ.
ಈ ಯುವಕರು ಬಾಲಕಿಯ ಗೆಳೆಯನನ್ನು ಥಳಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
"ಇಂದು ಬೆಳಗ್ಗೆ, ಹುಡುಗಿ ತನ್ನ ಗೆಳೆಯನೊಂದಿಗೆ ಪೊಲೀಸ್ ಠಾಣೆಗೆ ಬಂದು ಘಟನೆಯನ್ನು ವಿವರಿಸಿದ್ದು, ಆಕೆಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ" ಎಂದು ಅಧಿಕಾರಿ ಹೇಳಿದ್ದಾರೆ.
Advertisement