
ಮಹೋ: ಭಾರತದ ಮಿಲಿಟರಿ ಪುನರ್ ರಚನೆ ಬಗ್ಗೆ ಹೆಚ್ಚಾದ ಚರ್ಚೆಗಳು ನಡೆಯುತ್ತಿರುವಂತೆಯೇ ಏಕೀಕೃತ ಥಿಯೇಟರ್ ಕಮಾಂಡ್‌ಗಳ (ITC) ರಚನೆ "ಮಹತ್ವದ ಪ್ರಯತ್ನವಾಗಿದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಡಿ ಕೆ ತ್ರಿಪಾಠಿ ಹೇಳಿದ್ದಾರೆ.
ಮಧ್ಯಪ್ರದೇಶದ ಡಾ.ಅಂಬೇಡ್ಕರ್ ನಗರದಲ್ಲಿರುವ ಆರ್ಮಿ ವಾರ್ ಕಾಲೇಜಿನಲ್ಲಿ ನಡೆದ ಯುದ್ಧ ಕುರಿತ ಸಂವಾದದಲ್ಲಿ ಮಾತನಾಡಿದ ಅಡ್ಮಿರಲ್ ತ್ರಿಪಾಠಿ, ಥಿಯೇಟರ್ ಕಮಾಂಡ್‌ಗಳ (ITC) ರಚನೆ ಅಂತಿಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಭಾರತೀಯ ಸೇನಾ ಪಡೆಗಳ ನಡುವಿನ ಉತ್ತಮ ಸಮನ್ವಯತೆ ಹಾಗೂ ಸಂವಹನಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ ಮೂರು ಪಡೆಗಳು ಸೇರಿದ ಜಾಯಿಂಟ್ ಥಿಯೇಟರ್ ಕಮಾಂಡ್ ರಚಿಸಲು ನಾವು ಬದ್ದರಾಗಿದ್ದೇವೆ ಎಂದು ಅವರು ಹೇಳಿದರು.
ಆರಂಭಿಕ ಹಂತವಾಗಿ ಮಾನವ ಮಟ್ಟದಲ್ಲಿರುವ ಏಕೀಕೃತವನ್ನು ಉಲ್ಲೇಖಿಸಿದ ಅವರು, ಎಲ್ಲಾ ಹಂತದಲ್ಲಿ ಗರಿಷ್ಠ ಮಾತುಕತೆಗೆ ಸೇನಾಪಡೆ ಗಮನಹರಿಸಿದೆ. ಹೀಗಾಗಿ ಈಗ ನಾನು ಸೇನಾ ಸಹಚರ ಡಿ-ಕ್ಯಾಂಪ್ (ADC) ಹೊಂದಿದ್ದೇನೆ. ವಾಯು ಪಡೆ ಮುಖ್ಯಸ್ಥರು ನೌಕಪಡೆಯ ಲೆಫ್ಟಿನೆಂಟ್ ಪಡೆದಿದ್ದಾರೆ ಎಂದು ತಿಳಿಸಿದರು.
ಥಿಯೇಟರ್ ಕಮಾಂಡ್ ರಚನೆಯನ್ನು ಅಂತಿಮ ಗುರಿಯಾಗಿಟ್ಟುಕೊಂಡು ಏಕೀಕೃತ ಯೋಜನೆ, ಸಾಮಾನ್ಯ ಚಿತ್ರ ಮತ್ತು ಸಮಗ್ರ ಕಾರ್ಯಾಚರಣೆಯ ಉದ್ದೇಶದೊಂದಿಗೆ ಮುನ್ನಡೆಯುತ್ತಿದ್ದೇವೆ. ಈ ಒಗ್ಗಟ್ಟಿಗಾಗಿ ಕೌಶಲ್ಯ, ಸಾಮರ್ಥ್ಯ ಮತ್ತು ಟೀಮ್‌ವರ್ಕ್ ಪಡೆಯುವಾಗ ನಾಯಕತ್ವವು ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
Advertisement