ನಾಪತ್ತೆಯಾಗಿದ್ದ 1 ವರ್ಷದ ನಂತರ ಕೇದಾರನಾಥ ದೇವಾಲಯ ಬಳಿ ತೆಲಂಗಾಣ ವ್ಯಕ್ತಿಯ ಅಸ್ಥಿಪಂಜರ ಅವಶೇಷ! ಪತ್ತೆಯಾದದ್ದು ಹೇಗೆ?

ಶವದ ಬಳಿ ಪತ್ತೆಯಾದ ಬ್ಯಾಗ್‌ನಲ್ಲಿದ್ದ ಫೋನ್ ಮತ್ತು ಗುರುತಿನ ಕಾರ್ಡ್ ಮೂಲಕ ಆ ವ್ಯಕ್ತಿಯನ್ನು ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ರಾಜೇಶ್ವರ ರಾವ್‌ಪೇಟ್ ಗ್ರಾಮದ ನಿವಾಸಿ ನೋಮುಲಾ ರೋಶ್ವಂತ್ ಎಂದು ಗುರುತಿಸಲಾಗಿದೆ.
Kedarnath temple
ಕೇದಾರನಾಥ ದೇವಾಲಯ
Updated on

ರುದ್ರಪ್ರಯಾಗ: ಸುಮಾರು ಒಂದು ವರ್ಷದಿಂದ ನಾಪತ್ತೆಯಾಗಿದ್ದ ತೆಲಂಗಾಣದ ವ್ಯಕ್ತಿಯೊಬ್ಬರ ಅಸ್ಥಿಪಂಜರದ ಅವಶೇಷಗಳು ಕೇದಾರನಾಥ ದೇವಾಲಯದ ಮೇಲಿರುವ ಚೋರಬರಿ ಹಿಮನದಿಯ ಬಳಿ ಪತ್ತೆಯಾಗಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಚೌರಾಬರಿ ಹಿಮನದಿ ಪ್ರದೇಶಕ್ಕೆ ಬಂದಿದ್ದ ವ್ಯಾಪಾರಿಗಳು ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ, ಶವದ ಬಳಿ ಪತ್ತೆಯಾದ ಬ್ಯಾಗ್‌ನಲ್ಲಿದ್ದ ಫೋನ್ ಮತ್ತು ಗುರುತಿನ ಕಾರ್ಡ್ ಮೂಲಕ ಆ ವ್ಯಕ್ತಿಯನ್ನು ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ರಾಜೇಶ್ವರ ರಾವ್‌ಪೇಟ್ ಗ್ರಾಮದ ನಿವಾಸಿ ನೋಮುಲಾ ರೋಶ್ವಂತ್ ಎಂದು ಗುರುತಿಸಲಾಗಿದೆ.

ತೆಲಂಗಾಣದ ಪೊಲೀಸ್ ಠಾಣೆಯಲ್ಲಿ ಕುಟುಂಬದವರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಕಳೆದ ವರ್ಷ ಆಗಸ್ಟ್ 30 ರಂದು ಕೊನೆಯದಾಗಿ ತಮ್ಮ ಕುಟುಂಬದವರೊಂದಿಗೆ ಮಾತನಾಡಿದ್ದ ಅವರು, ಉತ್ತರಾಖಂಡ್‌ನಲ್ಲಿದ್ದು, ದೆಹಲಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದರು ಎನ್ನಲಾಗಿದೆ.

ಕೇದಾರನಾಥದಲ್ಲಿ ನಿಯೋಜಿಸಲಾದ ಜಿಲ್ಲಾಡಳಿತದ ಪೊಲೀಸರ ತಂಡ ಮತ್ತು ಯಾತ್ರಾ ನಿರ್ವಹಣಾ ಪಡೆ (ವೈಎಂಎಫ್) ಕಾರ್ಯಕರ್ತರು ಶವ ಪತ್ತೆಯಾದ ಸ್ಥಳಕ್ಕೆ ತಲುಪಿ ಅವಶೇಷಗಳನ್ನು ಕೇದಾರನಾಥಕ್ಕೆ ತಂದರು. ನಂತರ ಅದನ್ನು ರುದ್ರಪ್ರಯಾಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು, ಅದನ್ನು ಅವರ ಕುಟುಂಬ ಮತ್ತು ಸ್ಥಳೀಯ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ.

Kedarnath temple
ಜಮ್ಮು: ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ; ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಪತ್ತೆಯಾದ ಗುರುತಿನ ಚೀಟಿಯ ಆಧಾರದ ಮೇಲೆ ತೆಲಂಗಾಣ ಪೊಲೀಸರು ಮತ್ತು ಭಕ್ತನ ಕುಟುಂಬವನ್ನು ಸಂಪರ್ಕಿಸಲಾಗಿದೆ ಎಂದು ಕೇದಾರನಾಥದಲ್ಲಿ ನಿಯೋಜನೆಗೊಂಡಿರುವ ಯಾತ್ರಾ ಇನ್ಸ್‌ಪೆಕ್ಟರ್ ರಾಜೀವ್ ಚೌಹಾಣ್ ಹೇಳಿದ್ದಾರೆ. ಕಳೆದ ವರ್ಷ ಆಗಸ್ಟ್ 31 ರಂದು ವ್ಯಕ್ತಿ ಕಾಣೆಯಾಗಿರುವುದು ಪತ್ತೆಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com