
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ 75 ವರ್ಷಗಳ ವಯೋಮಿತಿಗೆ ಸಂಬಂಧಿಸಿದಂತೆ ಈ ಹಿಂದೆ ತಾವು ನೀಡಿದ್ದ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಆರ್ ಎಸ್ಎಸ್ ಶತಮಾನೋತ್ಸವದ ಹಿನ್ನೆಲೆಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿರುವ ಮೋಹನ್ ಭಾಗ್ವತ್, ತಾವು ಎಂದಿಗೂ ಯಾವುದೇ ವ್ಯಕ್ತಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ ಎಂದು ತಿಳಿಸಿದ್ದಾರೆ.
ಈ ಮೂಲಕ ಆರ್ ಎಸ್ಎಸ್ ಮುಖ್ಯಸ್ಥರು ಪರೋಕ್ಷವಾಗಿ ಪ್ರಧಾನಿ ಮೋದಿ 75 ವರ್ಷಗಳ ನಂತರ ನಿವೃತ್ತಿ ಪಡೆಯಬೇಕೆಂಬ ಸಲಹೆ ನೀಡಿದ್ದಾರೆ ಎಂಬ ಊಹಾಪೋಹಗಳಿಗೆ RSS ಮುಖ್ಯಸ್ಥರು ಸ್ಪಷ್ಟನೆ ನೀಡಿದ್ದಾರೆ.
"ನಾನು ನಿವೃತ್ತಿ ಹೊಂದುತ್ತೇನೆ ಅಥವಾ ಯಾರಾದರೂ ನಿವೃತ್ತರಾಗಬೇಕು ಎಂದು ನಾನು ಎಂದಿಗೂ ಹೇಳಿಲ್ಲ. ಸಂಘದಲ್ಲಿ, ನಮಗೆ ಕೆಲಸ ಸಿಗುತ್ತದೆಯೋ ಇಲ್ಲವೋ, ಅದು ನಮಗೆ ಬೇಕಾಗಲಿ. ನನಗೆ 80 ವರ್ಷ ವಯಸ್ಸಾಗಿದ್ದರೆ, ಸಂಘವು ಹೋಗಿ 'ಶಾಖೆ' ನಡೆಸು ಎಂದು ಹೇಳಿದರೆ, ನಾನು ಅದನ್ನು ಮಾಡಬೇಕಾಗುತ್ತದೆ. ಸಂಘವು ಏನು ಹೇಳುತ್ತದೋ ಅದನ್ನು ನಾವು ಮಾಡುತ್ತೇವೆ... ಇದು ಯಾರ ನಿವೃತ್ತಿಗಾಗಿಯೂ ಅಲ್ಲ. ಸಂಘವು ನಮಗೆ ಬೇಕಾದಷ್ಟು ಕಾಲ ನಾವು ನಿವೃತ್ತಿ ಹೊಂದಲು ಅಥವಾ ಕೆಲಸ ಮಾಡಲು ಸಿದ್ಧರಿದ್ದೇವೆ." ಎಂದು ಭಾಗ್ವತ್ ತಿಳಿಸಿದ್ದಾರೆ.
Advertisement