
ನವದೆಹಲಿ: ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಭಾರತ ಹೆಚ್ಚಿನ ಸುಂಕ ವಿಧಿಸಬೇಕೆಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗುರುವಾರ ಒತ್ತಾಯಿಸಿದ್ದು, ಇಡೀ ದೇಶ ಈ ನಿರ್ಧಾರವನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹತ್ತಿಯ ಮೇಲಿನ ಶೇಕಡಾ 11 ರಷ್ಟು ಸುಂಕವನ್ನು ಮನ್ನಾ ಮಾಡಲು ನಿರ್ಧರಿಸಿದೆ. ಇದು ಇಲ್ಲಿನ ಸ್ಥಳೀಯ ರೈತರ ವ್ಯವಹಾರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಆರೋಪಿಸಿದರು.
ಅರವಿಂದ್ ಕೇಜ್ರಿವಾಲ್ ಅವರ ಈ ಆರೋಪಕ್ಕೆ ಕೇಂದ್ರ ಸರ್ಕಾರದಿಂದ ತಕ್ಷಣ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಪ್ರಧಾನಿ ನರೇಂದ್ರ ಮೋದಿಯವರ ಈ ನಿರ್ಧಾರವು ಭಾರತದ ರೈತರಿಗೆ ಹಾನಿಕಾರಕವೆಂದು ಸಾಬೀತುಪಡಿಸುತ್ತೇನೆ ಎಂದು ಹೇಳಿದ ಎಎಪಿ ಮುಖ್ಯಸ್ಥ, ಅಮೆರಿಕದ ಆಮದುಗಳ ಮೇಲೆ ಭಾರತ ಹೆಚ್ಚಿನ ಸುಂಕಗಳನ್ನು ವಿಧಿಸಬೇಕೆಂದು ಒತ್ತಾಯಿಸಿದರು.
"ಅಮೆರಿಕದ ಸುಂಕಾಸ್ತ್ರಕ್ಕೆ ಇತರ ಯಾವುದೇ ದೇಶಗಳು ಮಣಿಯಲಿಲ್ಲ, ಅವು ಸಹ ಹೆಚ್ಚಿನ ಸುಂಕ ವಿಧಿಸುತ್ತಿವೆ. ನಾವು ಸಹ ಹೆಚ್ಚಿನ ಸುಂಕ ವಿಧಿಸಬೇಕು ಎಂದು ದೆಹಲಿ ಮಾಜಿ ಸಿಎಂ ಹೇಳಿದ್ದಾರೆ.
ಅಮೆರಿಕ ಶೇಕಡಾ 50 ರಷ್ಟು ಸುಂಕ ವಿಧಿಸುತ್ತಿದ್ದರೆ, ನಾವು ಅದನ್ನು ಶೇಕಡಾ 100ಕ್ಕೆ ದ್ವಿಗುಣಗೊಳಿಸಬೇಕು. ಇಡೀ ದೇಶ ಈ ನಿರ್ಧಾರವನ್ನು ಬೆಂಬಲಿಸುತ್ತದೆ. ಯಾವುದೇ ದೇಶವು ಭಾರತವನ್ನು ಅಪರಾಧಿ ಮಾಡಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.
ಅಮೆರಿಕದಲ್ಲಿ ಶೇ. 50 ರಷ್ಟು ಹೆಚ್ಚಿನ ಸುಂಕ ಎದುರಿಸುತ್ತಿರುವ ಜವಳಿ ರಫ್ತುದಾರರನ್ನು ಬೆಂಬಲಿಸಲು ಕೇಂದ್ರ ಸರ್ಕಾರ ಗುರುವಾರ ಡಿಸೆಂಬರ್ 31 ರವರೆಗೆ ಸುಂಕ ರಹಿತ ಹತ್ತಿ ಆಮದನ್ನು ಮೂರು ತಿಂಗಳು ವಿಸ್ತರಿಸಿದೆ.
ಇದಕ್ಕೂ ಮೊದಲು, ಆಗಸ್ಟ್ 18 ರಂದು, ಹಣಕಾಸು ಸಚಿವಾಲಯವು ಆಗಸ್ಟ್ 19 ರಿಂದ ಸೆಪ್ಟೆಂಬರ್ 30 ರವರೆಗೆ ಹತ್ತಿ ಆಮದಿನ ಮೇಲೆ ಸುಂಕ ವಿನಾಯಿತಿಯನ್ನು ನೀಡಿತ್ತು.
"ಭಾರತ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹತ್ತಿಯ ಮೇಲೆ ಶೇ. 11 ರಷ್ಟು ಸುಂಕವನ್ನು ವಿಧಿಸುತ್ತಿತ್ತು.
Advertisement