ಕೊಹಿಮಾ, ವಿಶಾಖಪಟ್ಟಣಂ, ಭುವನೇಶ್ವರ ಮಹಿಳೆಯರಿಗೆ ಸುರಕ್ಷಿತ ನಗರ; ಪಾಟ್ನಾ, ಜೈಪುರ ಅಸುರಕ್ಷಿತ!

ಪಾಟ್ನಾ, ಜೈಪುರ, ಫರಿದಾಬಾದ್, ದೆಹಲಿ, ಕೋಲ್ಕತ್ತಾ, ಶ್ರೀನಗರ ಮತ್ತು ರಾಂಚಿ ಹೆಚ್ಚು ಸುರಕ್ಷಿತವಲ್ಲ ಎಂದು ಮಹಿಳಾ ಸುರಕ್ಷತೆಯ ರಾಷ್ಟ್ರೀಯ ವಾರ್ಷಿಕ ವರದಿ ಮತ್ತು ಸೂಚ್ಯಂಕ(NARI) 2025 ತಿಳಿಸಿದೆ.
Chairperson of NCW Vijaya Kishore Rahatkar, addresses launch of NARI 2025 National Annual Report & Index on Women’s Safety
ಎನ್‌ಸಿಡಬ್ಲ್ಯೂ ಅಧ್ಯಕ್ಷೆ ವಿಜಯ ಕಿಶೋರ್ ರಹತ್ಕರ್ ಅವರಿಂದ NARI 2025 ರ ಮಹಿಳಾ ಸುರಕ್ಷತೆಯ ರಾಷ್ಟ್ರೀಯ ವಾರ್ಷಿಕ ವರದಿ ಮತ್ತು ಸೂಚ್ಯಂಕ ಬಿಡುಗಡೆ
Updated on

ನವದೆಹಲಿ: ಕೊಹಿಮಾ, ವಿಶಾಖಪಟ್ಟಣಂ, ಭುವನೇಶ್ವರ, ಐಜ್ವಾಲ್, ಗ್ಯಾಂಗ್ಟಾಕ್, ಇಟಾನಗರ ಮತ್ತು ಮುಂಬೈ ಮಹಿಳೆಯರಿಗೆ ದೇಶದ ಅತ್ಯಂತ ಹೆಚ್ಚು ಸುರಕ್ಷಿತ ನಗರಗಳಾಗಿ ಹೊರಹೊಮ್ಮಿವೆ. ಆದರೆ ಪಾಟ್ನಾ, ಜೈಪುರ, ಫರಿದಾಬಾದ್, ದೆಹಲಿ, ಕೋಲ್ಕತ್ತಾ, ಶ್ರೀನಗರ ಮತ್ತು ರಾಂಚಿ ಹೆಚ್ಚು ಸುರಕ್ಷಿತವಲ್ಲ ಎಂದು ಮಹಿಳಾ ಸುರಕ್ಷತೆಯ ರಾಷ್ಟ್ರೀಯ ವಾರ್ಷಿಕ ವರದಿ ಮತ್ತು ಸೂಚ್ಯಂಕ(NARI) 2025 ತಿಳಿಸಿದೆ.

31 ನಗರಗಳ 12,770 ಮಹಿಳೆಯರ ಸಮೀಕ್ಷೆಯ ಆಧಾರದ ಮೇಲೆ ಗುರುವಾರ ಬಿಡುಗಡೆಯಾದ ರಾಷ್ಟ್ರವ್ಯಾಪಿ ಸೂಚ್ಯಂಕವು ರಾಷ್ಟ್ರೀಯ ಸುರಕ್ಷತಾ ಅಂಕವನ್ನು ಶೇಕಡಾ 65 ರಷ್ಟು ಇದೆ ಎಂದು ಹೇಳಿದೆ.

ಕೊಹಿಮಾ ಮತ್ತು ಇತರ ನಗರಗಳು ಬಲವಾದ ಲಿಂಗ ಸಮಾನತೆ, ನಾಗರಿಕ ಭಾಗವಹಿಸುವಿಕೆ, ಪೊಲೀಸ್ ವ್ಯವಸ್ಥೆ ಮತ್ತು ಮಹಿಳಾ ಸ್ನೇಹಿ ಮೂಲಸೌಕರ್ಯದೊಂದಿಗೆ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿವೆ.

Chairperson of NCW Vijaya Kishore Rahatkar, addresses launch of NARI 2025 National Annual Report & Index on Women’s Safety
ಕೋಲ್ಕತ್ತಾ ಭಾರತದ ಅತ್ಯಂತ ಸುರಕ್ಷಿತ ನಗರ, 2ನೇ ನಗರ ಯಾವುದು ಗೊತ್ತಾ?

ಪಾಟ್ನಾ ಮತ್ತು ಜೈಪುರದಂತಹ ನಗರಗಳು ದುರ್ಬಲ ಸಾಂಸ್ಥಿಕ ಸ್ಪಂದಿಸುವಿಕೆ, ಪಿತೃಪ್ರಧಾನ ಮಾನದಂಡಗಳು ಮತ್ತು ನಗರ ಮೂಲಸೌಕರ್ಯದಲ್ಲಿನ ಕೊರತೆಯಿಂದಾಗಿ ಪಟ್ಟಿಯಲ್ಲಿ ತೀವ್ರ ಕಳಪೆ ಸ್ಥಾನ ಪಡೆದಿವೆ.

"ಕೊಹಿಮಾ, ವಿಶಾಖಪಟ್ಟಣಂ, ಭುವನೇಶ್ವರ, ಐಜ್ವಾಲ್, ಗ್ಯಾಂಗ್ಟಾಕ್, ಇಟಾನಗರ, ಮುಂಬೈ ರಾಷ್ಟ್ರೀಯ ಸುರಕ್ಷತಾ ಶ್ರೇಯಾಂಕದಲ್ಲಿ ಮುಂಚೂಣಿಯಲ್ಲಿವೆ. ಇವು ಹೆಚ್ಚಾಗಿ ಹೆಚ್ಚಿನ ಲಿಂಗ ಸಮಾನತೆ, ಮೂಲಸೌಕರ್ಯ, ಪೊಲೀಸ್ ವ್ಯವಸ್ಥೆ ಅಥವಾ ನಾಗರಿಕ ಭಾಗವಹಿಸುವಿಕೆಯೊಂದಿಗೆ ಪರಸ್ಪರ ಉತ್ತಮ ಸಂಬಂಧ ಹೊಂದಿವೆ. ಆದರೆ ರಾಂಚಿ, ಶ್ರೀನಗರ, ಕೋಲ್ಕತ್ತಾ, ದೆಹಲಿ, ಫರಿದಾಬಾದ್, ಪಾಟ್ನಾ ಮತ್ತು ಜೈಪುರ ಕಡಿಮೆ ಅಂಕಗಳನ್ನು ಗಳಿಸಿವೆ.

ಒಟ್ಟಾರೆಯಾಗಿ, ಸಮೀಕ್ಷೆಗೆ ಒಳಗಾದ ಹತ್ತು ಮಹಿಳೆಯರಲ್ಲಿ ಆರು ಮಂದಿ ತಮ್ಮ ನಗರ "ಸುರಕ್ಷಿತ" ಎಂದು ಭಾವಿಸಿದರೆ, ಶೇಕಡಾ 40 ರಷ್ಟು ಜನ ಇನ್ನೂ "ಅಷ್ಟು ಸುರಕ್ಷಿತವಾಗಿಲ್ಲ" ಅಥವಾ "ಅಸುರಕ್ಷಿತ" ಎಂದು ಪರಿಗಣಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com