
ಬಿಹಾರದಲ್ಲಿ 'ಮತದಾರರ ಹಕ್ಕುಗಳ ಯಾತ್ರೆ'ಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿಯ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ವಿಡಿಯೋವನ್ನು ವೈರಲ್ ಆಗಿದ್ದು ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಅವರಿಗೆ ಮರ್ಯಾದೆ ಉಳಿದಿದ್ದರೆ ಕ್ಷಮೆ ಕೇಳಲಿ ಎಂದು ಹೇಳಿದ್ದಾರೆ. ಬಿಹಾರದಲ್ಲಿ ತಮ್ಮ 'ಒಳನುಸುಳುಕೋರ ಬಚಾವೋ ಯಾತ್ರೆ'ಯೊಂದಿಗೆ ಗಾಂಧಿಯವರ ರಾಜಕೀಯವು 'ಕೆಳಮಟ್ಟ'ವನ್ನು ತಲುಪಿದೆ ಎಂದು ಶಾ ಹೇಳಿದ್ದಾರೆ.
ಬ್ರಹ್ಮಪುತ್ರದಲ್ಲಿ ಹೊಸದಾಗಿ ನಿರ್ಮಿಸಲಾದ ರಾಜಭವನದ ಘಟಕವನ್ನು ಉದ್ಘಾಟಿಸಿದ ನಂತರ, 'ರಾಹುಲ್ ಗಾಂಧಿಗೆ ಮರ್ಯಾದೆ ಉಳಿದಿದ್ದರೆ, ಕೂಡಲೇ ಕ್ಷಮೆಯಾಚಿಸಬೇಕು. ದೇಶವು ಅವರನ್ನು ಮತ್ತು ಅವರ ಪಕ್ಷವನ್ನು ದ್ವೇಷದಿಂದ ನೋಡುತ್ತಿದೆ ಎಂದು ಶಾ ಮತ್ತು ಇತರ ಹಿರಿಯ ಬಿಜೆಪಿ ನಾಯಕರು ಗುರುವಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡಿದ್ದರು.
ದರ್ಭಾಂಗಾ ನಗರದಲ್ಲಿ ಯಾತ್ರೆಯ ಸಮಯದಲ್ಲಿ ಮೋದಿ ವಿರುದ್ಧ ಅಪರಿಚಿತ ವ್ಯಕ್ತಿಯೊಬ್ಬ ನಿಂದನೀಯ ಪದಗಳನ್ನು ಬಳಸುತ್ತಿರುವ ವೀಡಿಯೊವೊಂದು ಕಾಣಿಸಿಕೊಂಡಿತ್ತು. ಇಲ್ಲಿಂದಲೇ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಮೋಟಾರ್ ಸೈಕಲ್‌ನಲ್ಲಿ ಮುಜಫರ್‌ಪುರಕ್ಕೆ ತೆರಳಿದರು.
ಮತದಾರರ ಹಕ್ಕುಗಳ ಯಾತ್ರೆ ಕಾಂಗ್ರೆಸ್‌ನ ಮತಬ್ಯಾಂಕ್ ಅನ್ನು ರಕ್ಷಿಸುವುದು, ಚುನಾವಣೆಗಳು ಯಾವುದೇ ಪ್ರಜಾಪ್ರಭುತ್ವದ ಆತ್ಮ. ಆದರೆ ಒಳನುಸುಳುವವರಿಗೆ ವ್ಯವಸ್ಥೆಯನ್ನು ಹಾಳು ಮಾಡಲು ಅವಕಾಶ ನೀಡಿದರೆ ದೇಶ ಹೇಗೆ ಸುರಕ್ಷಿತವಾಗಿರಲು ಸಾಧ್ಯ?' ಎಂದು ಶಾ ಹೇಳಿದರು. ಗೃಹ ಸಚಿವರು, 'ಕಾಂಗ್ರೆಸ್' ರಾಜಕೀಯವು ನಕಾರಾತ್ಮಕವಾಗಿದೆ... ಬಿಹಾರದಲ್ಲಿ ಯಾತ್ರೆಯ ವೇದಿಕೆಯಿಂದಲೇ ಪ್ರಧಾನಿ ಮತ್ತು ಅವರ ದಿವಂಗತ ತಾಯಿಯ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸುವ ಮೂಲಕ ಅದು ಎಲ್ಲಾ ಮಿತಿಗಳನ್ನು ಮೀರಿದೆ ಎಂದು ಹೇಳಿದರು.
ಮೋದಿಯನ್ನು ಪ್ರಪಂಚದಾದ್ಯಂತ ಹೊಗಳಲಾಗುತ್ತಿದೆ. ಈ ರೀತಿಯ ನಿಂದನೆಗಳು ಕಮಲ ಅರಳುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಶಾ ಹೇಳಿದರು. ಇದಕ್ಕೂ ಮೊದಲು, ಶಾ ತಮ್ಮ ಎರಡು ದಿನಗಳ ಅಸ್ಸಾಂ ಭೇಟಿಯ ಎರಡನೇ ದಿನದಂದು ರಾಜಭವನದ ಹೊಸದಾಗಿ ನಿರ್ಮಿಸಲಾದ ಬ್ರಹ್ಮಪುತ್ರ ಘಟಕವನ್ನು ಉದ್ಘಾಟಿಸಿದರು.
Advertisement