

ನವದೆಹಲಿ: ಕ್ರೀಡಾ ಪ್ರತಿಭೆಗಳನ್ನು ಬೆಂಬಲಿಸುವ ಮತ್ತು ಉತ್ತೇಜಿಸುವ ತನ್ನ ಸುದೀರ್ಘ ಸಂಪ್ರದಾಯವನ್ನು ಭಾರತೀಯ ರೈಲ್ವೆ ಇಲಾಖೆ ಮುಂದುವರಿಸಿದೆ.
ಏಕದಿನ ಮಹಿಳಾ ವಿಶ್ವಪ್ ವಿಜೇತೆ ಭಾರತ ಮಹಿಳಾ ತಂಡದ ಆಟಗಾರ್ತಿಯರಾದ ಸ್ನೇಹ್ ರಾಣಾ ರೇಣುಕಾ ಸಿಂಗ್ ಮತ್ತು ಪ್ರತಿಕಾ ರಾವಲ್ ಅವರಿಗೆ ರೈಲ್ವೆ ಸಚಿವಾಲಯವು 'ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ (ಕ್ರೀಡೆ)' ಹುದ್ದೆಗೆ ಬಡ್ತಿ ನೀಡಿದೆ.
ಈ ಮೂವರು ಆಟಗಾರ್ತಿಯರು ‘ಔಟ್ ಆಫ್ ಟರ್ನ್’ ಬಡ್ತಿ ಮೂಲಕ ಗ್ರೂಪ್ ಬಿ ಅಧಿಕಾರಿ ಹುದ್ದೆಯನ್ನು ಪಡೆದಿದ್ದಾರೆ. ಇದಕ್ಕೂ ಮೊದಲು ರಾವಲ್ ಅವರು ರೈಲ್ವೆನಲ್ಲಿ ಹಿರಿಯ ಗುಮಾಸ್ತರಾಗಿ, ರೇಣುಕಾ ಮತ್ತು ರಾಣಾ ಅವರು ಕ್ರಮವಾಗಿ ಉತ್ತರ ರೈಲ್ವೆಯಲ್ಲಿ ಜೂನಿಯರ್ ಗುಮಾಸ್ತ ಮತ್ತು ಟಿಕೆಟ್ ಗುಮಾಸ್ತರಾಗಿ ಕೆಲಸ ನಿರ್ವಹಿಸುತ್ತಿದ್ದರು.
7ನೇ ಸಿಪಿಸಿ ಪ್ರಕಾರ ಪೇ ಮ್ಯಾಟ್ರಿಕ್ಸ್‌ನ ಲೆವೆಲ್–8ರ ಅಡಿಯಲ್ಲಿ ಗ್ರೂಪ್ ಬಿ ಗೆಜೆಟೆಡ್ ಅಧಿಕಾರಿಯ ವೇತನ ಮತ್ತು ಸವಲತ್ತು ಪಡೆಯಲು ಅರ್ಹರಾಗಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ಕ್ರೀಡಾ ಪ್ರಚಾರ ಮಂಡಳಿಯ ಈ ಉಪಕ್ರಮವು ಮೂವರು ಮಹಿಳಾ ಕ್ರಿಕೆಟಿಗರಿಗೆ ಆರ್ಥಿಕ ಭದ್ರತೆ ಒದಗಿಸುವುದಲ್ಲದೆ, ಅವರಿಗೆ ಆಡಳಿತಾತ್ಮಕ ಜವಾಬ್ದಾರಿಗಳನ್ನು ವಹಿಸುತ್ತದೆ ಎಂದು ಹೇಳಿದೆ.
ನವೆಂಬರ್ ಆರಂಭದಲ್ಲಿ, ಮೂವರು ಕ್ರೀಡಾಪಟುಗಳನ್ನು ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಅವರು ರೈಲ್ ಭವನದಲ್ಲಿ ಸನ್ಮಾನಿಸಿದ್ದರು ಎಂಬುದನ್ನು ಸ್ಮರಿಸಬಹುದು.
ದೆಹಲಿಯಿಂದ ಬಂದಿರುವ ಪ್ರತೀಕಾ ರಾವಲ್ ಅತ್ಯಂತ ಬಲಿಷ್ಠ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಭಾರತದ ವಿಶ್ವಕಪ್ ವಿಜೇತ ಅಭಿಯಾನಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ, ಪ್ರತಿಕಾ ರಾವಲ್ ಅವರು ಉತ್ತರ ರೈಲ್ವೆಯಲ್ಲಿ ಹಿರಿಯ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ರೈಲ್ವೆ ಹೇಳಿದೆ.
Advertisement