ಲೋಕಸಭೆಯಲ್ಲಿ ಡಿ. 9 ರಂದು SIR ಕುರಿತು ಚರ್ಚೆ; ಚರ್ಚೆಗೆ 10 ಗಂಟೆ ಸಮಯ ನಿಗದಿ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆ ಮತ್ತು ಕಲಾಪ ಸಲಹಾ ಸಮಿತಿ(BAC) ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
Lok Sabha to take up debate on electoral reforms on December 9; 10 hours allotted to discussion
ಪ್ರತಿಪಕ್ಷಗಳ ಪ್ರತಿಭಟನೆ
Updated on

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳು ಕಳೆದ ಎರಡು ದಿನಗಳಿಂದ ಸಂಸತ್ತಿನಲ್ಲಿ ನಿರಂತರ ಪ್ರತಿಭಟನೆಯ ನಂತರ, ಡಿಸೆಂಬರ್ 9 ರಂದು ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಂಗಳವಾರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ 'ವಂದೇ ಮಾತರಂಗೆ 150 ವರ್ಷ' ಕುರಿತ ಚರ್ಚೆಯನ್ನು ಹಿಂದಿನ ದಿನ ಕೆಳಮನೆಯಲ್ಲಿ ನಡೆಸಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದರು.

ಎರಡೂ ಚರ್ಚೆಗಳಿಗೆ ತಲಾ 10 ಗಂಟೆಗಳ ಸಮಯವನ್ನು ನಿಗದಿಪಡಿಸಲಾಗಿದೆ. ಸದನವು ಸೂಕ್ತವೆಂದು ಭಾವಿಸಿದರೆ ಸಮಯ ವಿಸ್ತರಣೆ ಮಾಡುವ ಆಯ್ಕೆಯನ್ನು ಹೊಂದಿದೆ ಎಂದು ರಿಜಿಜು ಹೇಳಿದರು.

Lok Sabha to take up debate on electoral reforms on December 9; 10 hours allotted to discussion
SIR ಚರ್ಚೆಗೆ ಕೇಂದ್ರ ಸಿದ್ಧ, 'ಯಾವುದೇ ಷರತ್ತು ಹಾಕಬೇಡಿ' ಎಂದ ಸಚಿವ ರಿಜಿಜು; ಪ್ರತಿಪಕ್ಷಗಳ ಸಭಾತ್ಯಾಗ!

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆ ಮತ್ತು ಕಲಾಪ ಸಲಹಾ ಸಮಿತಿ(BAC) ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

"ಇಂದು ಲೋಕಸಭಾ ಸ್ಪೀಕರ್ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ, ಡಿಸೆಂಬರ್ 8 ರ ಸೋಮವಾರ ಮಧ್ಯಾಹ್ನ 12 ಗಂಟೆಯಿಂದ ರಾಷ್ಟ್ರೀಯ ಗೀತೆ 'ವಂದೇ ಮಾತರಂ' ನ 150ನೇ ವಾರ್ಷಿಕೋತ್ಸವದ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಮತ್ತು ಡಿಸೆಂಬರ್ 9 ರಂದು ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆ ನಡೆಸಲು ನಿರ್ಧರಿಸಲಾಗಿದೆ" ಎಂದು ಕಿರಣ್ ರಿಜಿಜು ಅವರು X ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಚುನಾವಣಾ ಸುಧಾರಣೆಗಳ ಕುರಿತಾದ ಚರ್ಚೆಯು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿರುತ್ತದೆ. ತೆಗೆದುಕೊಂಡ ಈ ನಿರ್ಧಾರಕ್ಕೆ "ಸಂಪೂರ್ಣವಾಗಿ ಸಹಕರಿಸುವಂತೆ" ವಿರೋಧ ಪಕ್ಷಗಳಿಗೆ ಸಚಿವರು ಮನವಿ ಮಾಡಿದ್ದಾರೆ.

"ಅಂತಿಮವಾಗಿ, ಎಲ್ಲರೂ ಚರ್ಚೆಗೆ ಒಪ್ಪಿಕೊಂಡಿದ್ದಾರೆ ಮತ್ತು ಎಲ್ಲಾ ಸದಸ್ಯರಿಗೆ, ವಿಶೇಷವಾಗಿ ವಿರೋಧ ಪಕ್ಷಗಳಿಗೆ ನನ್ನ ವಿಶೇಷ ಮನವಿಯೆಂದರೆ ತೆಗೆದುಕೊಂಡ ಈ ನಿರ್ಧಾರಕ್ಕೆ ಸಂಪೂರ್ಣವಾಗಿ ಸಹಕರಿಸುವುದು. ನಾವೆಲ್ಲರೂ ಭಾಗವಹಿಸುತ್ತೇವೆ ಮತ್ತು ಚರ್ಚೆಗಳು ನಡೆಯುವಾಗ ಗಣನೀಯ ಮತ್ತು ಪ್ರಮುಖ ಕೊಡುಗೆಗಳನ್ನು ನೀಡುವ ಮೂಲಕ ಸಂಸತ್ತಿನ ಕಲಾಪಗಳನ್ನು ಉತ್ಕೃಷ್ಟಗೊಳಿಸಬೇಕು..." ಎಂದು ಬಿಎಸಿ ಸಭೆ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com