

ಅಹಮದಾಬಾದ್: ಪಾಕಿಸ್ತಾನಿ ಏಜೆಂಟ್‌ಗಳೊಂದಿಗೆ ಭಾರತದ ಮಿಲಿಟರಿ ಬಗ್ಗೆ ಮತ್ತು ಸಿಬ್ಬಂದಿಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ನಿವೃತ್ತ ಸೇನಾ ಅಧಿಕಾರಿ ಮತ್ತು ಮಹಿಳೆಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಭಾರತೀಯ ಸೇನೆಯ ರೆಜಿಮೆಂಟ್‌ಗಳ ಚಲನವಲನ ಮತ್ತು ಪ್ರಮುಖ ಮಿಲಿಟರಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ ಮಾಹಿತಿ ನೀಡುವಂತೆ ಪಾಕಿಸ್ತಾನದ ಗುಪ್ತಚರ ಅಧಿಕಾರಿಯೊಬ್ಬರು ಬಂಧಿತ ಆರೋಪಿ ಅಜಯ್ ಕುಮಾರ್ ಸಿಂಗ್ ಅವರನ್ನು ಸಂಪರ್ಕಿಸಿದ್ದಾರೆ. ಈ ಸಂಬಂಧ ಮತ್ತೊಬ್ಬ ಆರೋಪಿ ರಶ್ಮಣಿ ಪಾಲ್ ಅವರನ್ನು ಕೆಲವು ವ್ಯಕ್ತಿಗಳನ್ನು ಹನಿಟ್ರ್ಯಾಪ್ ಮಾಡುವಂತೆ ಹೇಳಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
2022 ರಲ್ಲಿ ನಿವೃತ್ತಿ ಹೊಂದಿದ ಬಿಹಾರ ಮೂಲದ ಸಿಂಗ್(47) ಅವರನ್ನು ಗೋವಾದಲ್ಲಿ ಬಂಧಿಸಲಾಗಿದೆ. ಅಲ್ಲಿ ಅವರು ಡಿಸ್ಟಿಲರಿಯಲ್ಲಿ ಕೆಲಸ ಮಾಡುತ್ತಿದ್ದರು.
ಇನ್ನು ಉತ್ತರ ಪ್ರದೇಶದ ಪಾಲ್(35) ಅವರನ್ನು ಕೇಂದ್ರಾಡಳಿತ ಪ್ರದೇಶವಾದ ದಮನ್‌ನಲ್ಲಿ ಬಂಧಿಸಿ ಕರೆದೊಯ್ಯಲಾಯಿತು. ಅಲ್ಲಿ ಅವರು ಖಾಸಗಿ ಟ್ಯೂಷನ್ ತೆಗೆದುಕೊಳ್ಳುತ್ತಿದ್ದರು ಎಂದು ಎಟಿಎಸ್ ಹೇಳಿದೆ.
'ಅಂಕಿತಾ ಶರ್ಮಾ' ಎಂದು ತನ್ನನ್ನು ತಾನು ಗುರುತಿಸಿಕೊಂಡ ಪಾಕಿಸ್ತಾನಿ ಗುಪ್ತಚರ ಅಧಿಕಾರಿಯೊಬ್ಬರು, ಸಿಂಗ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಎನ್ಐಎ ತಿಳಿಸಿದೆ.
'ಪ್ರಿಯಾ ಠಾಕೂರ್' ಎಂಬ ನಕಲಿ ಗುರುತಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಲ್, ತನ್ನ ಪಾಕಿಸ್ತಾನಿ ನಿರ್ವಾಹಕರ ಆದೇಶದ ಮೇರೆಗೆ ಮಿಲಿಟರಿ ಸಿಬ್ಬಂದಿಯೊಂದಿಗೆ ಸ್ನೇಹ ಬೆಳೆಸುವ ಮೂಲಕ ಅವರಿಂದ ಮಾಹಿತಿಯನ್ನು ಹೊರತೆಗೆಯಲು ಯತ್ನಿಸಿದ್ದಾರೆ ಎಂದು ಎಟಿಎಸ್ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಕೊರುಕೊಂಡ ಅವರು ಹೇಳಿದ್ದಾರೆ.
2022 ರಲ್ಲಿ ನಾಗಾಲ್ಯಾಂಡ್‌ನ ದಿಮಾಪುರದಲ್ಲಿ ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿದ್ದಾಗ ಸಿಂಗ್ ಅವರನ್ನು 'ಅಂಕಿತಾ ಶರ್ಮಾ' ಸಂಪರ್ಕಿಸಿದ್ದರು ಎಂದು ಎಟಿಎಸ್ ಅಧಿಕಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
Advertisement