

ನವದೆಹಲಿ: ಇಂಡಿಗೋ ವಿಮಾನಯಾನ ಕಾರ್ಯಾಚರಣೆಯಲ್ಲಿ ಭಾರಿ ಅವ್ಯವಸ್ಥೆಯ ನಂತರ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ವು ಶುಕ್ರವಾರ ಪೈಲಟ್ಗಳ ರಜಾ ನಿಯಮಗಳನ್ನು ಸಡಿಲಿಸಿದ್ದು, ವಾರದ ವಿಶ್ರಾಂತಿ ಅವಧಿಯನ್ನು ಅನುಮತಿಸಿದೆ ಎಂದು ಮೂಲಗಳು ತಿಳಿಸಿವೆ.
ಪರಿಷ್ಕೃತ ವಿಮಾನ ಸಿಬ್ಬಂದಿ ಕರ್ತವ್ಯ ಸಮಯ ಮಿತಿಗಳು(FDTL) ಮಾನದಂಡಗಳ ಪ್ರಕಾರ, "ವಾರದ ವಿಶ್ರಾಂತಿ ಜೊತೆ ಯಾವುದೇ ರಜೆಯನ್ನು ಹೊಂದಾಣಿಕೆ ಮಾಡಿಕೊಳ್ಳಲಾಗುವುದಿಲ್ಲ", ಅಂದರೆ ವಾರದ ವಿಶ್ರಾಂತಿ ಅವಧಿ ಮತ್ತು ರಜೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ.
ಪೈಲಟ್‌ಗಳಲ್ಲಿನ ಹೆಚ್ಚಿನ ಕೆಲಸದ ಒತ್ತಡವನ್ನು ಪರಿಹರಿಸುವ ಪ್ರಯತ್ನಗಳ ಭಾಗವಾಗಿ ಈ ಬದಲಾವಣೆ ಮಾಡಲಾಗಿದೆ.
ಇಂಡಿಗೋ ವಿಮಾನದ ಅಡಚಣೆಗಳನ್ನು ಉಲ್ಲೇಖಿಸಿ, FDTL ಮಾನದಂಡಗಳಿಂದ 'ವಾರದ ವಿಶ್ರಾಂತಿಗೆ ಜೊತೆ ಯಾವುದೇ ರಜೆಯನ್ನು ಬದಲಾಯಿಸಬಾರದು' ಎಂಬ ನಿಬಂಧನೆಯನ್ನು ಹಿಂತೆಗೆದುಕೊಳ್ಳಲು DGCA ನಿರ್ಧರಿಸಿದೆ ಎಂದು ಮೂಲಗಳು PTI ಗೆ ತಿಳಿಸಿವೆ.
FDTL ಮಾನದಂಡಗಳ ಪ್ರಕಾರ ಒಂದು ವಾರಕ್ಕೆ ಎರಡು ದಿನ ಪೈಲಟ್ ಗಳಿಗೆ ವಿಶ್ರಾಂತಿ ನೀಡಬೇಕಾಗಿತ್ತು. ಈಗ ಈ ನಿಯಮ ಕಡ್ಡಾಯ ಜಾರಿಯಿಂದ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ಪೈಲಟ್ ಗಳ ಕೊರತೆಯ ಸಮಸ್ಯೆಯು ಸ್ಪಲ್ಪ ಮಟ್ಟಿಗೆ ಬಗೆಹರಿದು ಪ್ರಯಾಣಿಕರ ಸಂಕಷ್ಟ ಸ್ಪಲ್ಪ ಕಡಿಮೆಯಾಗುವ ನಿರೀಕ್ಷೆ ಇದೆ.
ನವೆಂಬರ್ 1 ರಿಂದ ಜಾರಿಗೆ ಬಂದ ಎರಡನೇ ಹಂತದ ಪರಿಷ್ಕೃತ ಎಫ್‌ಡಿಟಿಎಲ್ ಅನುಷ್ಠಾನಕ್ಕೆ ಮುಂಚಿತವಾಗಿ ಯೋಜನೆಯಲ್ಲಿನ ಅಂತರವು ಇಂಡಿಗೋದಲ್ಲಿ ಸಿಬ್ಬಂದಿ ಕೊರತೆಗೆ ಕಾರಣವಾಗಿದೆ ಮತ್ತು ಇದು ಪ್ರಸ್ತುತ ಅಡಚಣೆಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎನ್ನಲಾಗಿದೆ.
Advertisement