

ಜವಾಹರಲಾಲ್ ನೆಹರು ಅವರು ಸಾರ್ವಜನಿಕ ನಿಧಿಯನ್ನು ಬಳಸಿಕೊಂಡು ಬಾಬರಿ ಮಸೀದಿಯನ್ನು ನಿರ್ಮಿಸಲು ಬಯಸಿದ್ದರು ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯ ಯಾವುದೇ ಉಲ್ಲೇಖವಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಪ್ರತಿಪಾದಿಸಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ ಅವರು ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ವಲ್ಲಭಭಾಯಿ ಪಟೇಲ್ ಅವರ ಪುತ್ರಿ ಮಣಿಬೆನ್ ಪಟೇಲ್ ಅವರ ಗುಜರಾತಿ ಭಾಷೆಯಲ್ಲಿನ ಮೂಲ ಡೈರಿ ನಮೂದುಗಳ ಪ್ರತಿಯನ್ನು ರಾಜನಾಥ್ ಸಿಂಗ್ ಅವರಿಗೆ ತೋರಿಸಿದರು.
ಇಂದು ಜೈರಾಂ ರಮೇಶ್ ಅವರು ಸಂಸತ್ತಿನ ಮಕರ ದ್ವಾರದ ಹೊರಗೆ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಹಿಂದಿ ಅನುವಾದದ ಜೊತೆಗೆ ಗುಜರಾತಿ ಭಾಷೆಯ ಡೈರಿ ಪುಟಗಳನ್ನು ನೀಡಿದರು.
ಜೈರಾಂ ರಮೇಶ್ ಅವರು ಡೈರಿಯಲ್ಲಿನ ಬರಹಗಳನ್ನು ಓದಲು ಒತ್ತಾಯಿಸಿದಾಗ ನಮಸ್ಕಾರನಗೆ ಗುಜರಾತಿ ಭಾಷೆ ಬರುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು. ಬಿಜೆಪಿ ಪಕ್ಷದ ಬಳಿ ಈಗಾಗಲೇ ಇಂಗ್ಲಿಷ್ ಆವೃತಿ ಇದೆ ಎಂದು ಹೇಳಿದರು.
ಕಳೆದ ವಾರ ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಸಾರ್ವಜನಿಕ ಭಾಷಣದ ಸಂದರ್ಭದಲ್ಲಿ, ಜವಹರಲಾಲ್ ನೆಹರೂ ಅವರು ಬಾಬರಿ ಮಸೀದಿಗೆ ರಾಜ್ಯ ನಿಧಿಯನ್ನು ಕೊಡುಗೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದರು ಆದರೆ ಸರ್ದಾರ್ ವಲ್ಲಭಬಾಯಿ ಪಟೇಲ್ ಆ ಸಮಯದಲ್ಲಿ ಅವರನ್ನು ತಡೆದಿದ್ದರು ಎಂದು ರಾಜನಾಥ್ ಸಿಂಗ್ ಹೇಳಿದ್ದರು. ಅದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ರಕ್ಷಣಾ ಸಚಿವರು ಸುಳ್ಳು ಹಬ್ಬಿಸುತ್ತಿದ್ದಾರೆ, ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದರು.
ಸಿ.ಎ. ಆರ್.ಎಸ್. ಪಟೇಲ್ ("ಆರೇಶ್") ಬರೆದ 2025 ರ ಪುಸ್ತಕ ಸಮರ್ಪಿತ್ ಪದ್ಚಾಯೊ ಸರ್ದಾರ್ನೋದಲ್ಲಿ ಪ್ರಕಟವಾದ ಡೈರಿ ನಮೂದುಗಳು ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಜೈರಾಂ ರಮೇಶ್ ಹೇಳಿದ್ದಾರೆ. ಮೂಲ ಡೈರಿ ನಮೂದು, ರಾಜನಾಥ್ ಸಿಂಗ್ ಮತ್ತು ಅವರ ಸಹವರ್ತಿಗಳು ಪ್ರಚಾರ ಮಾಡುತ್ತಿರುವ ವಿಷಯ ನಡುವೆ ಅಗಾಧ ವ್ಯತ್ಯಾಸವಿದೆ ಎಂದು ಅವರು ಜೈರಾಂ ರಮೇಶ್ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಬಿಜೆಪಿ ಮಾತ್ರ ರಾಜನಾಥ್ ಸಿಂಗ್ ಪರವಾಗಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ, ಮತ್ತೊಂದು ಪ್ರಕಟಣೆಯಾದ 'ಇನ್‌ಸೈಡ್ ಸ್ಟೋರಿ ಆಫ್ ಸರ್ದಾರ್ ಪಟೇಲ್' 'ಡೈರಿ ಆಫ್ ಮಣಿಬೆನ್ ಪಟೇಲ್' ನ್ನು ಉಲ್ಲೇಖಿಸಿ, ನೆಹರು ಬಾಬರಿ ಮಸೀದಿ ವಿಷಯವನ್ನು ಎತ್ತಿದ್ದರು. ಆಗ ವಲ್ಲಭಬಾಯಿ ಪಟೇಲ್ ಮಸೀದಿ ನಿರ್ಮಾಣಕ್ಕಾಗಿ ಸರ್ಕಾರಿ ವೆಚ್ಚವನ್ನು ನಿರಾಕರಿಸಿದರು ಎಂದು ಅದು ಹೇಳುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಈ ಹೇಳಿಕೆಗಳನ್ನು ಕಟ್ಟುಕಥೆ ಎಂದು ತಳ್ಳಿಹಾಕಿದೆ. ನೆಹರೂ ಅವರನ್ನು ಗುರಿಯಾಗಿಸಲು ಮತ್ತು ಐತಿಹಾಸಿಕ ದಾಖಲೆಗಳನ್ನು ವಿರೂಪಗೊಳಿಸಲು ಬಿಜೆಪಿ ವಾಟ್ಸಾಪ್ ವಿಶ್ವವಿದ್ಯಾಲಯ ನಿರೂಪಣೆಗಳನ್ನು ಅವಲಂಬಿಸಿದೆ ಎಂದು ಆರೋಪಿಸಿದೆ.
Advertisement