

ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಮಸೂದೆ ಪರಿಶೀಲಿಸಲು ರಚಿಸಲಾಗಿರುವ ಸಂಸದೀಯ ಸಮಿತಿಯ ಅವಧಿಯನ್ನು ಲೋಕಸಭೆ ಗುರುವಾರ ವಿಸ್ತರಿಸಿದೆ.
ಸಂವಿಧಾನದ(129 ನೇ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು(ತಿದ್ದುಪಡಿ) ಮಸೂದೆ, 2024 ಕುರಿತ ಜಂಟಿ ಸಮಿತಿ ಅವಧಿಯನ್ನು 2026ರ ಬಜೆಟ್ ಅಧಿವೇಶನದ ಕೊನೆಯ ವಾರದ ಮೊದಲ ದಿನದವರೆಗೆ ವಿಸ್ತರಿಸುವಂತೆ ಕೋರಿ ಸಮಿತಿಯ ಅಧ್ಯಕ್ಷ ಪಿ ಪಿ ಚೌಧರಿ ಪ್ರಸ್ತಾವನೆ ಮಂಡಿಸಿದರು.
ಬಳಿಕ ಲೋಕಸಭೆಯು ಧ್ವನಿ ಮತದ ಮೂಲಕ ಪ್ರಸ್ತಾವನೆಯನ್ನು ಅಂಗೀಕರಿಸಿತು.
ಕಳೆದ ಡಿಸೆಂಬರ್‌ನಲ್ಲಿ ಸಮಿತಿಯನ್ನು ರಚಿಸಿದಾಗಿನಿಂದ, ಸಮಿತಿಯು ಸಾಂವಿಧಾನಿಕ ತಜ್ಞರು, ಅರ್ಥಶಾಸ್ತ್ರಜ್ಞರು, ಕಾನೂನು ಆಯೋಗದ ಅಧ್ಯಕ್ಷ ದಿನೇಶ್ ಮಹೇಶ್ವರಿ ಸೇರಿದಂತೆ ಇತರರನ್ನು ಭೇಟಿ ಮಾಡಿದೆ.
Advertisement