

ಚೆನ್ನೈ: ಬಿಜೆಪಿಯಲ್ಲಿ ಪ್ರಧಾನ ಮಂತ್ರಿ ಹುದ್ದೆಗೆ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುತ್ತದೆ. ಆದರೆ ಆ ಬಗ್ಗೆ ಮಾತನಾಡಲು ನಿರಾಕರಿಸಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಈ ವಿಷಯದ ಬಗ್ಗೆ ಪ್ರಧಾನಿ ಮತ್ತು ಬಿಜೆಪಿ ಚರ್ಚಿಸಿ ನಿರ್ಧರಿಸಬೇಕು ಎಂದು ಹೇಳಿದ್ದಾರೆ.
ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಭಾಗವತ್ ಈ ಹೇಳಿಕೆ ನೀಡಿರುವುದು ಸುದ್ದಿಯಾಗಿದೆ.
RSS 100 years: ಚೆನ್ನೈಯಲ್ಲಿ ನಡೆದ ಸಾಗಾ ಆಫ್ ಆರ್‌ಎಸ್‌ಎಸ್ ಎನ್ವಿಶಿನಿಂಗ್ ದಿ ವೇ ಫಾರ್ವರ್ಡ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವು ಪ್ರಶ್ನೆಗಳು ನನ್ನ ವ್ಯಾಪ್ತಿಯಿಂದ ಹೊರಗಿವೆ. ಆದ್ದರಿಂದ, ಅವುಗಳಲ್ಲಿ ನನಗೆ ಯಾವುದೇ ಪಾತ್ರವಿಲ್ಲ. ನಾನು ಶುಭ ಹಾರೈಸಬಲ್ಲೆ ಮತ್ತು ಬೇರೇನೂ ಇಲ್ಲ. ಮೋದಿಯವರ ನಂತರ ಯಾರು? ಅದು ಬಿಜೆಪಿ ಮತ್ತು ಮೋದಿಯವರು ನಿರ್ಧರಿಸಬೇಕು ಎಂದು ಹೇಳಿದರು.
ಕಳೆದ ನಾಲ್ಕು ತಿಂಗಳಲ್ಲಿ ಎರಡನೇ ಬಾರಿಗೆ ಮೋಹನ್ ಭಾಗವತ್ ಅವರ ಹೇಳಿಕೆ ಮಹತ್ವದ್ದಾಗಿವೆ. ಬಿಜೆಪಿಯಲ್ಲಿ 75 ವರ್ಷ ತುಂಬಿದ ನಂತರ ನಿವೃತ್ತಿ ಹೊಂದುವ 'ಅಲಿಖಿತ ನಿಯಮ'ಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮತ್ತು ಮೋದಿ ನಂತರ ಯಾರು ಎಂಬುದರ ಕುರಿತು ಪ್ರತಿಕ್ರಿಯಿಸಲು ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ, ಭಾಗವತ್ ಅವರು ತಾವು ಅಥವಾ ಯಾರೂ 75 ನೇ ವಯಸ್ಸಿನಲ್ಲಿ ನಿವೃತ್ತರಾಗಬಾರದು ಎಂದು ಎಂದಿಗೂ ಪ್ರತಿಪಾದಿಸಿಲ್ಲ ಎಂದು ಹೇಳಿದ್ದರು. ಈ ಹಿಂದೆ ಬೇರೆ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದ್ದರು.
ಕಳೆದ ಸೆಪ್ಟೆಂಬರ್‌ನಲ್ಲಿ ನರೇಂದ್ರ ಮೋದಿಯವರಿಗೆ 75 ವರ್ಷ ತುಂಬಿದ ನಂತರ ನಿವೃತ್ತಿಯ ಕುರಿತಾದ ಚರ್ಚೆ ಮಹತ್ವ ಪಡೆದುಕೊಂಡಿತು. ನಿರ್ದಿಷ್ಟ ವಯಸ್ಸಿನಲ್ಲಿ ನಿವೃತ್ತಿ ಹೊಂದಬೇಕೆಂದು ಪಕ್ಷದಲ್ಲಿ ಯಾವುದೇ ನಿಯಮವಿಲ್ಲ ಎಂದು ಬಿಜೆಪಿ ಆಗ ಸ್ಪಷ್ಟಪಡಿಸಿತ್ತು. ತಮ್ಮ ಸಂವಾದದ ಸಂದರ್ಭದಲ್ಲಿ, ಆರ್‌ಎಸ್‌ಎಸ್ ಮುಖ್ಯಸ್ಥರು ಜನರು ಮತ್ತು ನ್ಯಾಯಾಂಗ ವಿಷಯ ನೋಡಿದಾಗ ದೇವಾಲಯ ನಿರ್ವಹಣೆಯನ್ನು ಭಕ್ತರೇ ನಿರ್ವಹಿಸಬೇಕು ಎಂಬ ಸಾಮಾನ್ಯ ಒಮ್ಮತವಿದೆ ಎಂದು ಹೇಳಿದರು, ಇದು ಪ್ರಸ್ತುತ ಸರ್ಕಾರದಿಂದ ನಿರ್ವಹಿಸಲ್ಪಡುವ ಪದ್ಧತಿಯಿಂದ ಭಿನ್ನವಾಗಿದೆ ಎಂದು ಮೋಹನ್ ಭಾಗವತ್ ಹೇಳಿದರು.
ಕೆಲವು ದೇವಾಲಯಗಳನ್ನು ಖಾಸಗಿ ವ್ಯಕ್ತಿಗಳು ಉತ್ತಮವಾಗಿ ನಿರ್ವಹಿಸುತ್ತಾರೆ, ಕೆಲವು ಅಲ್ಲ. ಅದೇ ರೀತಿ, ಕೆಲವು ದೇವಾಲಯಗಳನ್ನು ಸರ್ಕಾರಗಳು ಉತ್ತಮವಾಗಿ ನಿರ್ವಹಿಸುತ್ತವೆ, ಕೆಲವು ಅಲ್ಲ. ಈ ಸಮಸ್ಯೆಯನ್ನು ನಿಭಾಯಿಸಲು ಈಗಿನ ಅಗತ್ಯವೆಂದರೆ ಅಖಿಲ ಭಾರತ ಸಮಿತಿ, ಪ್ರಾಂತೀಯ ಸಮಿತಿ, ಜಿಲ್ಲಾ ಸಮಿತಿ ಮತ್ತು ಸ್ಥಳೀಯ ಸಮಿತಿ,” ಎಂದು ಭಾಗವತ್ ಹೇಳಿದರು.
ತಮಿಳುನಾಡಿನ ಯುವಕರಲ್ಲಿ ರಾಷ್ಟ್ರೀಯತಾವಾದಿ ಭಾವನೆಯನ್ನು ಹುಟ್ಟುಹಾಕುವ ಕುರಿತು ಮತ್ತೊಂದು ಪ್ರಶ್ನೆಗೆ, ಭಾಗವತ್ ರಾಷ್ಟ್ರೀಯತೆ ಮತ್ತು ಆರ್‌ಎಸ್‌ಎಸ್ ಬಗ್ಗೆ ರಾಜ್ಯದ ಯುವಕರಲ್ಲಿ ಯಾವುದೇ ತಪ್ಪು ತಿಳುವಳಿಕೆ ಇದೆ ಎಂದು ನನಗೆ ಅನಿಸುವುದಿಲ್ಲ ಎಂದರು.
ನಮ್ಮ ಕೆಲಸದ ಬಗ್ಗೆ ಅವರಿಗೆ ಒಮ್ಮೆ ತಿಳಿದರೆ, ಎಲ್ಲಾ ತಪ್ಪು ಕಲ್ಪನೆಗಳು ದೂರವಾಗುತ್ತವೆ. ಅವರು ನಮ್ಮ ಕೆಲಸದ ಬಗ್ಗೆ ತಿಳಿದುಕೊಂಡ ಎರಡು ದಿನಗಳಲ್ಲಿ ಎಲ್ಲವೂ ಮಾಯವಾಗುತ್ತದೆ. ನಾವು ಅವರಿಗೆ ಒಳಗಿನಿಂದ ನೋಡಲು ಅವಕಾಶ ನೀಡಬೇಕು. ನಾವು ಮಾಡಬೇಕಾಗಿರುವುದು ತಮಿಳುನಾಡು ಯುವಕರು ಕೃತಕ ಅಡೆತಡೆಗಳನ್ನು ಮುರಿಯುವ ಮೂಲಕ ತಮ್ಮ ರಾಷ್ಟ್ರೀಯತಾವಾದಿ ಭಾವನೆಗಳನ್ನು ವ್ಯಕ್ತಪಡಿಸಲು ಸರಿಯಾದ ವಾತಾವರಣವನ್ನು ಸೃಷ್ಟಿಸುವುದು ಎಂದು ಹೇಳಿದರು.
Advertisement