

ರಾಂಚಿ: ರಾಂಚಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಗ್ ವೇಳೆ ಇಂಡಿಗೋ ವಿಮಾನದ ಬಾಲ ರನ್‌ವೇಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 7.30ರ ಸುಮಾರಿಗೆ ಸುಮಾರು 70 ಪ್ರಯಾಣಿಕರಿದ್ದ ಭುವನೇಶ್ವರ-ರಾಂಚಿ ಇಂಡಿಗೋ ವಿಮಾನ ಲ್ಯಾಂಡಿಗ್ ವೇಳೆ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
"ವಿಮಾನದ ಬಾಲವು ಲ್ಯಾಂಡಿಂಗ್ ಸಮಯದಲ್ಲಿ ರನ್‌ವೇಗೆ ಸ್ಪರ್ಶಿಸಿತು. ಪ್ರಯಾಣಿಕರು ಹಠಾತ್ ಕಂಪನ ಅನುಭವಿಸಿದರು. ಆದಾಗ್ಯೂ, ಅವರೆಲ್ಲರೂ ಸುರಕ್ಷಿತ ಮತ್ತು ಯಾವುದೇ ಹಾನಿಯಿಲ್ಲದೆ ಸುರಕ್ಷಿತವಾಗಿ ಇಳಿದಿದ್ದಾರೆ" ಎಂದು ರಾಂಚಿ ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಕುಮಾರ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಈ ಘಟನೆಯ ನಂತರ ವಿಮಾನವು ತಾಂತ್ರಿಕವಾಗಿ ಟೇಕ್‌ಆಫ್‌ಗೆ ಅನರ್ಹವಾಗಿದೆ ಎಂದು ಕಂಡುಬಂದ ನಂತರ ಅದನ್ನು ಸ್ಥಗಿತಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ.
"ರಾಂಚಿಯಿಂದ ಭುವನೇಶ್ವರಕ್ಕೆ ವಿಮಾನದ ಮುಂದಿನ ನಿರ್ಗಮನವನ್ನು ರದ್ದುಗೊಳಿಸಲಾಯಿತು. ಕೆಲವು ಪ್ರಯಾಣಿಕರು ತಮ್ಮ ಪ್ರಯಾಣವನ್ನು ರದ್ದುಗೊಳಿಸಿದರು. ಆದರೆ ಕೆಲವರು ತಮ್ಮ ಪ್ರಯಾಣವನ್ನು ಮರು ನಿಗದಿಪಡಿಸಿದರು. ಕೆಲವು ಪ್ರಯಾಣಿಕರನ್ನು ರಸ್ತೆ ಮೂಲಕ ಭುವನೇಶ್ವರಕ್ಕೆ ಕಳುಹಿಸಲಾಯಿತು" ಎಂದು ಅವರು ತಿಳಿಸಿದ್ದಾರೆ.
Advertisement