SHANTI Bill: ಅಣು ಶಕ್ತಿಯ ಖಾಸಗೀಕರಣ, ಸುರಕ್ಷತೆ, ಹೊಣೆಗಾರಿಕೆ ಬಗ್ಗೆ ವಿಪಕ್ಷಗಳು ಕಳವಳ; 'ಬಡತನ ಕಡಿಮೆ' ಮಾಡುತ್ತದೆ ಎಂದ ಸುಧಾ ಮೂರ್ತಿ!

ಸಂಸದೆ ಸುಧಾ ಮೂರ್ತಿ ಅವರು ಮಸೂದೆಯನ್ನು ಬೆಂಬಲಿಸಿದರು. ಕ್ಷೇತ್ರದ ಖಾಸಗೀಕರಣ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಬಡತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಪ್ರತಿಪಾದಿಸಿದರು.
jairam Ramesh, Sudha Murthy
ಜೈರಾಮ್ ರಮೇಶ್, ಸುಧಾ ಮೂರ್ತಿ
Updated on

ನವದೆಹಲಿ: ಅಣು ಶಕ್ತಿಯ ಖಾಸಗೀಕರಣದಿಂದ ಸುರಕ್ಷತೆ ಮತ್ತು ಹೊಣೆಗಾರಿಕೆಯ ಬಗ್ಗೆ ಹಲವು ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸುವುದರೊಂದಿಗೆ 'ಭಾರತದ ಪ್ರಗತಿಗಾಗಿ ಅಣುಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್ ಎಚ್ ಎಎನ್ ಟಿಐ-ಶಾಂತಿ ಮಸೂದೆ -2025) ಬಗ್ಗೆ ರಾಜ್ಯಸಭೆಯಲ್ಲಿ ಗುರುವಾರ ತೀವ್ರ ಚರ್ಚೆ ನಡೆಯಿತು.

2014ರ ಹಿಂದೆಯೇ ಪ್ರಮುಖ ಬೆಳವಣಿಗೆ ಆರಂಭವಾಗಿತ್ತು. ಚರ್ಚೆ ವೇಳೆ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಪರಮಾಣು ಶಕ್ತಿಯಲ್ಲಿ ಭಾರತದ ಶ್ರೀಮಂತ ಇತಿಹಾಸವನ್ನು ನೆನಪಿಸಿಕೊಂಡರು. 2014 ರ ದಶಕಗಳ ಹಿಂದೆಯೇ ಈ ಕ್ಷೇತ್ರದಲ್ಲಿ ಪ್ರಮುಖ ಬೆಳವಣಿಗೆ ಆರಂಭವಾಗಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಂಕ್ಷಿಪ್ತ ರೂಪಗಳು ಮತ್ತು ಯೋಜನೆಗಳ ಹೆಸರು ಬದಲಾವಣೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪರಮಾಣು ಕ್ಷೇತ್ರದಲ್ಲಿನ ವೈಜ್ಞಾನಿಕ ಮತ್ತು ಸಾಂಸ್ಥಿಕ ಪ್ರಗತಿಯು ಮೋದಿ ಆಡಳಿತಕ್ಕಿಂತ ಹಿಂದಿನದು ಎಂದು ಹೇಳಿದರು.

ಮೊದಲ ಅಣು ಶಕ್ತಿ ಶಾಸನವನ್ನು ಏಪ್ರಿಲ್ 6, 1948 ರಂದು ಅಂಗೀಕರಿಸಲಾಯಿತು. ತದನಂತರ ಡಾ ಹೋಮಿ ಭಾಭಾ ಅಧ್ಯಕ್ಷರಾಗಿ ಮತ್ತು ಕೆ ಎಸ್ ಕೃಷ್ಣನ್ ಮತ್ತು ಶಾಂತಿ ಸ್ವರೂಪ್ ಭಟ್ನಾಗರ್ ಸದಸ್ಯರಾಗಿ ನೇರವಾಗಿ ಪ್ರಧಾನ ಮಂತ್ರಿಗೆ ವರದಿ ಮಾಡಿಲು ಆಗಸ್ಟ್ 15, 1948 ರಂದು ಪರಮಾಣು ಶಕ್ತಿ ಆಯೋಗವನ್ನು ಸ್ಥಾಪಿಸಲಾಯಿತು.1950 ರಲ್ಲಿ ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ ಮತ್ತು 1954 ರಲ್ಲಿ ಪರಮಾಣು ಶಕ್ತಿ ಇಲಾಖೆಯನ್ನು ರಚಿಸಲಾಯಿತು ಎಂದು ತಿಳಿಸಿದರು.

ಪರಮಾಣು ಶಕ್ತಿಯ ಶಾಂತಿಯುತ ಬಳಕೆಯ ರಾಷ್ಟ್ರೀಯ ವಿಚಾರ ಸಂಕಿರಣದ ಜೊತೆಗೆ ಭಾಭಾ ಮೂರು-ಹಂತದ ಪರಮಾಣು ವಿದ್ಯುತ್ ಕಾರ್ಯಕ್ರಮವನ್ನು ವಿವರಿಸಿದ್ದರು ಡಾ. ಹೋಮಿ ಭಾಬಾ ಯುರೇನಿಯಂ, ಪ್ಲುಟೋನಿಯಂ-ಥೋರಿಯಂ ಮತ್ತು ಥೋರಿಯಂ-ಯುರೇನಿಯಂ ಎಂದು ಮೂರು ಹಂತಗಳನ್ನು ಹೇಳಿದ್ದರು. ಇಂದು ನಾವು ಮೊದಲ ಹಂತದಲ್ಲಿ ಚಾಣಾಕ್ಷರಾಗಿದ್ದು, ಎರಡನೇ ಹಂತದಲ್ಲಿ ಸಿಲುಕಿಕೊಂಡಿದ್ದೇವೆ. ನಾವು ವಿಶ್ವದ ನಾಲ್ಕನೇ ಥೋರಿಯಂ ನಿಕ್ಷೇಪವನ್ನು ಹೊಂದಿದ್ದೇವೆ, ನಮ್ಮದು ಯುರೇನಿಯಂ ಕೊರತೆಯಿರುವ, ಥೋರಿಯಂ ಸಮೃದ್ಧವಾಗಿರುವ ದೇಶವಾಗಿದೆ ಎಂದರು.

ಭಾರತ ಮೂರನೇ ಹಂತಕ್ಕೆ ಜಿಗಿಯಲು ಮೊದಲ ಹಂತದಲ್ಲಿಯೂ ಥೋರಿಯಂ ಅನ್ನು ಬಳಸಬೇಕು ಎಂದು ಡಾ. ಅನಿಲ್ ಕಾಕೋಡ್ಕರ್ ಉಲ್ಲೇಖಿಸಿದ್ದಾರೆ. "ನಮಗೆ ಇಂಧನ ಭದ್ರತೆ ಬೇಕಾದರೆ, ನಾವು ಥೋರಿಯಂ ಮೀಸಲು ಬಳಸಬೇಕು. ಹೊರಗಿನಿಂದ ಖಾಸಗಿ ಕಂಪನಿಗಳು ಏನು ಹೇಳುತ್ತವೆ ಎಂಬುದನ್ನು ಅವಲಂಬಿಸುವ ಬದಲು ನಮ್ಮ ವಿಜ್ಞಾನಿಗಳು ಏನು ಹೇಳುತ್ತಾರೆಂದು ನಾವು ಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಸುರಕ್ಷತೆ ಕುರಿತ ಕಳವಳ ಬಗೆಹರಿಸುವಲ್ಲಿ ಬಿಲ್ ವಿಫಲ:

ಮಸೂದೆಯನ್ನು ಭಾರತದ ಪರಮಾಣು ಶಕ್ತಿ ವ್ಯವಸ್ಥೆಯ 'ಸ್ವೇಚ್ಛಾಚಾರ' ಎಂದು ಹೇಳಿದ ಟಿಎಂಸಿ ಸಂಸದ ಸಗತಿಕಾ ಘೋಸ್, ಮಸೂದೆಯು ಖಾಸಗಿ ನಿಯಂತ್ರಣವಿಲ್ಲದೆ ಸಾಕಷ್ಟು ಸುರಕ್ಷತೆಯ ಭೀತಿ ಉಂಟು ಮಾಡುತ್ತದೆ ಎಂದರು. ಸುರಕ್ಷತೆ ಕುರಿತ ಗಂಭೀರ ಕಳವಳ ಬಗೆಹರಿಸುವಲ್ಲಿ ಬಿಲ್ ವಿಫಲವಾಗಿದೆ ಎಂದು ಡಿಎಂಕೆ ಸಂಸದ ಪಿ. ವಿಲ್ಸನ್ ಹೇಳಿದರು.

ಸೈಕ್ಲೋನ್ ಹೆಚ್ಚಳ, ಪ್ರವಾಹ, ಶೀತಗಾಳಿಯಂತಹ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಪರಮಾಣು ಶಕ್ತಿಯ ನಿಯಂತ್ರಣವನ್ನು ಖಾಸಗಿಯವರಿಗೆ ವಹಿಸುವ ಮೂಲಕ ದೇಶದ ಭದ್ರತೆ ಮತ್ತು ಮಾನವ ಜೀವದೊಂದಿಗೆ ಆಟವಾಡಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.

jairam Ramesh, Sudha Murthy
ಪರಮಾಣು ಶಕ್ತಿ ಭಾರತಕ್ಕೆ ಈಗಲೂ ಸವಾಲಾಗಿದೆ: ಪಿಎಂ ಮೋದಿ

ಸೀಮಿತ ಪರಿಹಾರದ ನಂತರ ಖಾಸಗಿ ಕುಳಗಳು ನಿರ್ಗಮನ: ಮಸೂದೆಯಡಿ ಸುಮಾರು 3,600 MW ಕೇಂದ್ರೀಯ ಪರಮಾಣು ಸ್ಥಾಪನೆಗೆ ನಿರ್ವಾಹಕರ ಹೊಣೆಗಾರಿಕೆಯು ಕೇವಲ 3000 ಕೋಟಿ ರೂಪಾಯಿಗಳಿಗೆ ಸೀಮಿತವಾಗಿದೆ. ಆದರೆ ಸಣ್ಣ ರಿಯಾಕ್ಟರ್‌ಗಳಿಗೆ ಇದು ಇನ್ನೂ ಕೆಟ್ಟದಾಗಿದೆ, 100 ಕೋಟಿಗಳಷ್ಟು ಕಡಿಮೆಯಿದೆ. ಪರಮಾಣು ಅಪಘಾತಗಳಿಗೆ ಒಟ್ಟು ಗರಿಷ್ಟ ಹೊಣೆಗಾರಿಕೆಯನ್ನು ರೂ. 300 ಶತಕೋಟಿ ಎಂದು ನಿಗದಿಪಡಿಸಲಾಗಿದೆ ಮತ್ತು ಅದಕ್ಕಿಂತ ಹೆಚ್ಚಿನ ವೆಚ್ಚವನ್ನು ಸರ್ಕಾರವು ಭರಿಸಬೇಕಾಗುತ್ತದೆ, ಅಂದರೆ ತೆರಿಗೆದಾರರು ಖಾಸಗಿ ಕಂಪನಿಗಳ ನಿರ್ಲಕ್ಷ್ಯದ ವೆಚ್ಚವನ್ನು ಭರಿಸಬೇಕಾಗುತ್ತದೆ. ಸೀಮಿತ ಪರಿಹಾರದ ನಂತರ ಖಾಸಗಿ ಕುಳಗಳು ನಿರ್ಗಮಿಸಲು ಇದು ಪರಿಣಾಮಕಾರಿಯಾಗಿ ಅನುವು ಮಾಡಿಕೊಡುತ್ತದೆ. ಆದರೆ ದೀರ್ಘಾವಧಿಯ ಹೊರೆ ರೈತರು, ಮೀನುಗಾರರು, ಕಾರ್ಮಿಕರು, ಭವಿಷ್ಯದ ಪೀಳಿಗೆಗಳು ಮತ್ತು ತೆರಿಗೆದಾರರ ಮೇಲೆ ಬೀಳುತ್ತದೆ ಎಂದು ಅವರು ವಾದಿಸಿದರು.

ಪ್ರಸ್ತಾವಿತ ಕಾನೂನಿನಿಂದ ರಾಜ್ಯಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ಸ್ಪಷ್ಟ ಪ್ರಯೋಜನಗಳ ಕೊರತೆಯ ಬಗ್ಗೆ ವೈಎಸ್‌ಆರ್‌ಸಿಪಿ ಸಂಸದ ಅಯೋಧ್ಯಾ ರಾಮಿ ರೆಡ್ಡಿ ಅಲ್ಲಾ ಕಳವಳ ವ್ಯಕ್ತಪಡಿಸಿದರು.

jairam Ramesh, Sudha Murthy
ಲೋಕಸಭೆಯಲ್ಲಿ G Ram G ಮಸೂದೆ ಅಂಗೀಕಾರ; ಪ್ರತಿಪಕ್ಷಗಳಿಂದ ಪ್ರತಿ ಹರಿದು ಹಾಕಿ ಆಕ್ರೋಶ

ಖಾಸಗೀಕರಣದಿಂದ ಉದ್ಯೋಗ ಸೃಷ್ಟಿ

ಇದಕ್ಕೆ ವ್ಯತಿರಿಕ್ತವಾಗಿ, ಸಂಸದೆ ಸುಧಾ ಮೂರ್ತಿ ಅವರು ಮಸೂದೆಯನ್ನು ಬೆಂಬಲಿಸಿದರು. ಕ್ಷೇತ್ರದ ಖಾಸಗೀಕರಣ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಬಡತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಪ್ರತಿಪಾದಿಸಿದರು. "ಪರಮಾಣು ಶಕ್ತಿಯು ಯಾವಾಗಲೂ ಹಿರೋಷಿಮಾ ಅಥವಾ ನಾಗಾಸಾಕಿಯೊಂದಿಗೆ ಸಂಬಂಧ ಹೊಂದಿದೆ. ಆದರೆ ಪರಮಾಣು ಶಕ್ತಿಯನ್ನು ಶಾಂತಿಯುತ ವಿಧಾನಗಳಲ್ಲಿ ಬಳಸಬಹುದು. ಅದಕ್ಕಾಗಿಯೇ ಈ ಮಸೂದೆಯನ್ನು ಶಾಂತಿ ಮಸೂದೆ ಎಂದು ಕರೆಯಲಾಗುತ್ತದೆ. ಭಾರತದ ಹೆಚ್ಚುತ್ತಿರುವ ಇಂಧನ ಅಗತ್ಯಗಳನ್ನು ಪೂರೈಸುವಲ್ಲಿ ಪರಮಾಣು ಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸುಧಾ ಮೂರ್ತಿ ಹೇಳಿದರು.

ಬುಧವಾರ ಲೋಕಸಭೆಯಲ್ಲಿ ಶಾಂತಿ ಮಸೂದೆ ಅಂಗೀಕಾರವಾದ ನಂತರ ರಾಜ್ಯಸಭೆಯು ಅದರ ಮೇಲಿನ ಚರ್ಚೆಯನ್ನು ಕೈಗೆತ್ತಿಕೊಂಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com