

ಹೈದರಾಬಾದ್: ಲಂಡನ್‌ನಿಂದ ಹೈದರಾಬಾದ್‌ಗೆ ತೆರಳುವ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದು, ಸುರಕ್ಷಿತವಾಗಿ ವಿಮಾನ ಲ್ಯಾಂಡಿಂಗ್ ಆಗಿರುವುದಾಗಿ ವಿಮಾನ ನಿಲ್ದಾಣದ ಮೂಲಗಳು ಮಂಗಳವಾರ ತಿಳಿಸಿವೆ.
ಸೋಮವಾರ ಹೀಥ್ರೂದಿಂದ ಹೈದರಾಬಾದ್‌ಗೆ ಹೊರಟಿದ್ದ ಬಿಎ 277 ವಿಮಾನಕ್ಕೆ ಬಾಂಬ್ ಇಡಲಾಗಿದೆ ಎಂದು ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗ್ರಾಹಕ ಸೇವಾ ಕೇಂದ್ರಕ್ಕೆ ಬೆದರಿಕೆಯ ಮೇಲ್ ಬಂದಿತ್ತು.
ಸುರಕ್ಷತಾ ಮಾನದಂಡಗಳನ್ನು ಅನುಸರಿಸಿದ ನಂತರ ಸುರಕ್ಷಿತವಾಗಿ ವಿಮಾನ ಲ್ಯಾಂಡಿಂಗ್ ಆಯಿತು ಎಂದು ಮೂಲಗಳು ಹೇಳಿವೆ.
ವಿಮಾನದ ಪ್ರತ್ಯೇಕತೆ, ಲಗ್ಗೇಜು, ಪ್ರಯಾಣಿಕರ ತಪಾಸಣೆ, ಅಗ್ನಿಶಾಮಕ ವಾಹನಗಳು ಹಾಗೂ ಶ್ವಾನದಳವನ್ನು ಸಿದ್ಧವಾಗಿಟ್ಟುಕೊಳ್ಳುವುದು ಸುರಕ್ಷತಾ ನಿಯಮಗಳಲ್ಲಿ ಸೇರಿದೆ.
ಈ ತಿಂಗಳ ಆರಂಭದಲ್ಲಿ ಇಂಡಿಗೋದ ಮದೀನಾ-ಹೈದರಾಬಾದ್ ಮತ್ತು ಶಾರ್ಜಾ-ಹೈದರಾಬಾದ್ ವಿಮಾನಗಳನ್ನು ಗುರಿಯಾಗಿಸಿ ಎರಡು ರೀತಿಯ ಇಮೇಲ್ ಕಳುಹಿಸಲಾಗಿತ್ತು. ಬಳಿಕ ಮದೀನಾ-ಹೈದರಾಬಾದ್ ವಿಮಾನವನ್ನು ಅಹಮದಾಬಾದ್ ವಿಮಾನ ನಿಲ್ದಾಣ ಕಡೆಗೆ ತಿರುಗಿಸಲಾಗಿತ್ತು.
Advertisement