

ಇಂದು ಬುಧವಾರ ಬೆಳಗ್ಗೆ ಉತ್ತರ ಪ್ರದೇಶದ ಅಮೇಥಿ ಬಳಿ ವಾರಣಾಸಿ-ಲಕ್ನೋ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿ ದೈಹಿಕ ಹಲ್ಲೆಗೆ ತಿರುಗಿ ಪ್ರಯಾಣಿಕರು ತೀವ್ರ ಆತಂಕಕ್ಕೀಡಾದ ಘಟನೆ ನಡೆಯಿತು.
ಕುಳಿತುಕೊಳ್ಳುವ ಸೀಟಿನ ವಿಚಾರವಾಗಿ ಆರಂಭವಾದ ವಾಗ್ಯುದ್ಧ ನಂತರ ದೈಹಿಕ ಹಲ್ಲೆಗೆ ತಿರುಗಿತು. ಪರಸ್ಪರ ಹೊಡೆದಾಟ-ಬಡಿದಾಟ ನಡೆಯಿತು. ರೈಲಿನ ಇಡೀ ಬೋಗಿಯಲ್ಲಿ ಪರಿಸ್ಥಿತಿ ಹದಗೆಟ್ಟು ಹೋಯಿತು. ರೈಲು ಅಮೇಥಿ ರೈಲು ನಿಲ್ದಾಣ ಪ್ರದೇಶದ ಮೂಲಕ ಹಾದುಹೋಗುವಾಗ ಈ ಘಟನೆ ನಡೆದಿದ್ದು ಸಹ ಪ್ರಯಾಣಿಕರು ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು ವೈರಲ್ ಆಗಿದೆ.
ಸರ್ಕಾರಿ ರೈಲ್ವೆ ಪೊಲೀಸರು (GRP) ಮತ್ತು ರೈಲ್ವೆ ರಕ್ಷಣಾ ಪಡೆ (RPF) ಗಮನಕ್ಕೆ ಬಂದಿದ್ದು ಪ್ರಯಾಣಿಕರನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ. ಘಟನೆಯಲ್ಲಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾದ ವರದಿಯಾಗಿಲ್ಲ. ಆದರೆ ಈ ಘಟನೆಯು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಳವಳ ಉಂಟಾಗಿದೆ.
Advertisement