'CEC ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ'; SIR ಕುರಿತು ನಮ್ಮ ಕಳವಳ ಪರಿಹರಿಸಿಲ್ಲ: ಅಭಿಷೇಕ್ ಬ್ಯಾನರ್ಜಿ

ಟಿಎಂಸಿ ನಿಯೋಗ ಇಂದು ಕೇಂದ್ರ ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದು, ಅಭಿಷೇಕ್ ಬ್ಯಾನರ್ಜಿ ಸಹ ಪಕ್ಷದ ನಿಯೋಗದ ಭಾಗವಾಗಿದ್ದರು.
Abhishek Banerjee
ಅಭಿಷೇಕ್ ಬ್ಯಾನರ್ಜಿ
Updated on

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ಕುರಿತು ಚುನಾವಣಾ ಆಯೋಗ ತಮ್ಮ ಆತಂಕಗಳನ್ನು ಪರಿಹರಿಸಿಲ್ಲ ಎಂದು ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.

ಟಿಎಂಸಿ ನಿಯೋಗ ಇಂದು ಕೇಂದ್ರ ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದು, ಅಭಿಷೇಕ್ ಬ್ಯಾನರ್ಜಿ ಸಹ ಪಕ್ಷದ ನಿಯೋಗದ ಭಾಗವಾಗಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ಪಕ್ಷವು ಚುನಾವಣಾ ಆಯೋಗದ ಮುಂದೆ ಹಲವಾರು ಕಳವಳಗಳನ್ನು ಎತ್ತಿದೆ. ಅವುಗಳಲ್ಲಿ ಕರಡು ಪಟ್ಟಿಯಿಂದ 58 ಲಕ್ಷ ಮತದಾರರನ್ನು ಡಿಲೀಟ್ ಮತ್ತು SIR ವಿಚಾರಣೆಗೆ 1.36 ಕೋಟಿಗೂ ಹೆಚ್ಚು ಮತದಾರರಿಗೆ ಸಮನ್ಸ್ ನೀಡಿರುವುದು ಸಹ ಸೇರಿದೆ ಎಂದರು.

ಈ ಕಳವಳಗಳನ್ನು ಪರಿಹರಿಸಲಾಗಿಲ್ಲ ಮತ್ತು ರಾಜ್ಯದ ಮುಖ್ಯ ಚುನಾವಣಾ ಆಯುಕ್ತರು ಸಭೆಯ ಸಮಯದಲ್ಲಿ "ಆಕ್ರಮಣಕಾರಿ"ಯಾಗಿ ವರ್ತಿಸಿದರು ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.

Abhishek Banerjee
ಪಶ್ಚಿಮ ಬಂಗಾಳ ಬಿಟ್ಟು ಇನ್ನುಳಿದ 6 ರಾಜ್ಯಗಳಿಗೆ SIR ಗಡುವು ವಿಸ್ತರಿಸಿದ ಚುನಾವಣಾ ಆಯೋಗ!

"ನಾವು ಮಾತನಾಡಲು ಪ್ರಾರಂಭಿಸಿದಾಗ, ಅವರು(CEC) ತಾಳ್ಮೆ ಕಳೆದುಕೊಳ್ಳಲು ಪ್ರಾರಂಭಿಸಿದರು... ನೀವು ನಾಮನಿರ್ದೇಶನಗೊಂಡಿದ್ದೀರಿ. ಆದರೆ ನಾನು ಜನರಿಂದ ಆಯ್ಕೆಯಾಗಿದ್ದೇನೆ.. ನಿಮಗೆ ಧೈರ್ಯವಿದ್ದರೆ, ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿ" ಎಂದು ಅವರಿಗೆ ಹೇಳಿದೆ ಎಂದರು.

ಅಂತಿಮ ಮತದಾರರ ಪಟ್ಟಿಯಲ್ಲಿ ವ್ಯತ್ಯಾಸಗಳಿದ್ದರೆ ಪಕ್ಷವು ಕಾನೂನು ಹೋರಾಟ ಆರಂಭಿಸುತ್ತದೆ ಎಂದು ಟಿಎಂಸಿ ಸಂಸದ ತಿಳಿಸಿದ್ದಾರೆ.

"ಒಳನುಸುಳುವಿಕೆ ಬುಟ್ಟಿ"ಯನ್ನು ಎತ್ತಿ ತೋರಿಸುವ ಮೂಲಕ ಪಶ್ಚಿಮ ಬಂಗಾಳವನ್ನು ಕೆಣಕಲು "ಪಿತೂರಿ" ನಡೆದಿದೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಡಿಲೀಟ್ ಮಾಡಲಾದ 58 ಲಕ್ಷ ಮತದಾರರಲ್ಲಿರುವ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳ ಪಟ್ಟಿಯನ್ನು ಬಹಿರಂಗ ಮಾಡುವಂತೆ ಬ್ಯಾನರ್ಜಿ, ಚುನಾವಣಾ ಆಯೋಗಕ್ಕೆ ಸವಾಲು ಹಾಕಿದ್ದಾರೆ.

Abhishek Banerjee
AI ಬಳಸಿಕೊಂಡು ನಡೆಸುತ್ತಿರುವ ದೊಡ್ಡ ಹಗರಣವೇ SIR: ಮಮತಾ ಬ್ಯಾನರ್ಜಿ

"ಪಶ್ಚಿಮ ಬಂಗಾಳವನ್ನು ಕೆಣಕಲು ಒಳನುಸುಳುವಿಕೆ ಅಸ್ತ್ರ ಬಳಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎಷ್ಟು ಬಾಂಗ್ಲಾದೇಶಿಗಳು ಅಥವಾ ರೋಹಿಂಗ್ಯಾಗಳು ಕಂಡುಬಂದಿದ್ದಾರೆ ಎಂಬುದರ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ನಾವು CECಯನ್ನು ಕೇಳಿದ್ದೇವೆ" ಎಂದು ಅವರು ಹೇಳಿದರು.

"ತಾರ್ಕಿಕ ವ್ಯತ್ಯಾಸಗಳು" ಎಂಬ ಹೊಸ ಕಾರಣವನ್ನು ಸೃಷ್ಟಿಸಿರುವ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿದ ಅವರು, ತಂದೆಯ ಹೆಸರಿನ ಹೊಂದಾಣಿಕೆಯಿಲ್ಲದಿರುವುದು, ಪೋಷಕರು ಮತ್ತು ಮಕ್ಕಳ ನಡುವಿನ ಪ್ರಶ್ನಾರ್ಹ ವಯಸ್ಸಿನ ಅಂತರ ಮುಂತಾದ ವಿಷಯಗಳು ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ, 1.36 ಕೋಟಿ ಮತದಾರರನ್ನು ವಿಚಾರಣೆಗೆ ಕರೆಯಲಾಗಿದೆ ಎಂದರು.

ರಾಜ್ಯದಲ್ಲಿ SIR ಆರಂಭವಾದ ನಂತರ ಡಿಸೆಂಬರ್ 16 ರಂದು ಪ್ರಕಟವಾದ ಕರಡು ಪಟ್ಟಿಯಿಂದ 58 ಲಕ್ಷಕ್ಕೂ ಹೆಚ್ಚು ಮತದಾರರನ್ನು ಡಿಲೀಟ್ ಮಾಡಲಾಗಿದೆ. ಒಟ್ಟು 7.6 ಕೋಟಿ ಮತದಾರರಲ್ಲಿ, ಚುನಾವಣಾ ಆಯೋಗವು ಸುಮಾರು 1.36 ಕೋಟಿ ಮತದಾರರ "ಪ್ರಾಮಾಣಿಕತೆ"ಯ ಬಗ್ಗೆ ಪ್ರಶ್ನೆ ಎತ್ತಿದೆ ಮತ್ತು ಅವರಿಗೆ ತಮ್ಮ ದಾಖಲೆಗಳನ್ನು ಪರಿಶೀಲಿಸಲು ವಿಚಾರಣೆಗೆ ಕರೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com