
ನವದೆಹಲಿ: ಹಿಂದಿನ ವರ್ಷಗಳಂತೆಯೇ 2025-26 ರ ಪೂರ್ಣ ಬಜೆಟ್ ನ್ನು ಕಾಗದರಹಿತ ರೂಪದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಇಂದು ಬೆಳಗ್ಗೆ ಸಂಸತ್ತಿನ ಹಣಕಾಸು ಸಚಿವಾಲಯ ಆವರಣದಲ್ಲಿ ನಿರ್ಮಲಾ ಸೀತಾರಾಮನ್ ಮತ್ತೊಮ್ಮೆ ಸಾಂಪ್ರದಾಯಿಕ 'ಬಾಹಿ-ಖಾತಾ' ಶೈಲಿಯ ಪೌಚ್‌ನಲ್ಲಿ ಸುತ್ತಿದ ಡಿಜಿಟಲ್ ಟ್ಯಾಬ್ಲೆಟ್ ನ್ನು ಪ್ರದರ್ಶಿಸಿದ್ದಾರೆ.
ಬಿಳಿ ಬಣ್ಣದ ಒಡಿಶಾ ಪಟ್ಟಚಿತ್ರ ರೇಷ್ಮೆ ಸೀರೆಯನ್ನು ಧರಿಸಿ, ರಾಷ್ಟ್ರಪತಿಗಳನ್ನು ಭೇಟಿ ಮಾಡಲು ಹೋಗುವ ಮುನ್ನ ಅವರು ತಮ್ಮ ಅಧಿಕಾರಿಗಳ ತಂಡದೊಂದಿಗೆ ತಮ್ಮ ಕಚೇರಿಯ ಹೊರಗೆ ಸಾಂಪ್ರದಾಯಿಕ ಬ್ರೀಫ್ ಕೇಸ್ ನೊಂದಿಗೆ ಮಾಧ್ಯಮ ಪ್ರತಿನಿಧಿಗಳಿಗೆ ಪೋಸ್ ನೀಡಿದರು.
ಬ್ರೀಫ್‌ಕೇಸ್ ಬದಲಿಗೆ ಚಿನ್ನದ ಬಣ್ಣದ ರಾಷ್ಟ್ರೀಯ ಲಾಂಛನವನ್ನು ಹೊಂದಿರುವ ಕೆಂಪು ಕವರ್‌ನೊಳಗೆ ಟ್ಯಾಬ್ಲೆಟ್ ನ್ನು ಭದ್ರತೆಯಿಂದ ಇರಿಸಲಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿ ಮಾಡಲಿದ್ದಾರೆ.
ಭಾರತದ ಮೊದಲ ಪೂರ್ಣ ಅವಧಿಯ ಮಹಿಳಾ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಜುಲೈ 2019 ರಲ್ಲಿ ಕೇಂದ್ರ ಬಜೆಟ್ ಪ್ರತಿಗಳನ್ನು ಸಾಗಿಸಲು ಬ್ರಿಟಿಷರ ಕಾಲದ ಬ್ರೀಫ್ ಕೇಸ್ ಗೆ ಬದಲು ಸಾಂಪ್ರದಾಯಿಕ 'ಬಹಿ-ಖಾತಾ'ಕ್ಕೆ ವರ್ಗಾಯಿಸಿದ್ದರು.
ನಂತರ 2021 ರಲ್ಲಿ, ತಮ್ಮ ಭಾಷಣ ಮತ್ತು ಇತರ ಬಜೆಟ್ ದಾಖಲೆಗಳನ್ನು ಸಾಗಿಸಲು ಸಾಂಪ್ರದಾಯಿಕ ಪತ್ರಿಕೆಗಳನ್ನು ಡಿಜಿಟಲ್ ಟ್ಯಾಬ್ಲೆಟ್‌ನೊಂದಿಗೆ ಬದಲಾಯಿಸಿದರು. ಆ ಸಂಪ್ರದಾಯ ಇಂದಿಗೂ ಮುಂದುವರೆದಿದೆ.
Advertisement