
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಕೇಂದ್ರ ಬಜೆಟ್ 2025ರಲ್ಲಿ ಜನಸಾಮಾನ್ಯರು ಹಾಗೂ ಮಧ್ಯಮ ವರ್ಗದವರಿಗೆ ಏನು ಸಿಕ್ಕಿಲ್ಲ. ಮುಂಬರುವ ಬಿಹಾರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ದಾಖಲೆ ತೋರಿಸಿದೆ ಎಂದು ವಿರೋಧ ಪಕ್ಷದ ನಾಯಕರು ಶನಿವಾರ ಹೇಳಿದ್ದಾರೆ.
ಬಜೆಟ್‌ನಲ್ಲಿ ಪಶ್ಚಿಮ ಬಂಗಾಳಕ್ಕೆ ಏನೂ ಇಲ್ಲ ಎಂದು ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಲೋಕಸಭೆ ಸಂಸದ ಅಭಿಷೇಕ್ ಬ್ಯಾನರ್ಜಿ ತಿಳಿಸಿದ್ದಾರೆ. ಕಳೆದ ಬಾರಿಯೂ ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಎಲ್ಲಾ ಘೋಷಣೆಗಳು ಆಗಿದ್ದವು. ಆಂಧ್ರಪ್ರದೇಶ ಚುನಾವಣೆ ಮುಗಿದಿದ್ದು, ಇದೀಗ ಬಿಹಾರ ಚುನಾವಣೆ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಪಶ್ಚಿಮ ಬಂಗಾಳದ ಮಟ್ಟಿಗೆ ಕಳೆದ ಹತ್ತು ವರ್ಷಗಳಲ್ಲಿ ಏನನ್ನೂ ನೀಡಿಲ್ಲ. ಇಂದು ಕೂಡಾ ಏನೂ ಸಿಕ್ಕಿಲ್ಲ. ಇದು ದುರದೃಷ್ಟಕರ" ಎಂದು ಅವರು ಹೇಳಿದರು.
ಡಿಎಂಕೆ ಲೋಕಸಭೆ ಸಂಸದ ದಯಾನಿಧಿ ಮಾರನ್ ದೊಡ್ಡ ನಿರಾಸದಾಯಕ ಬಜೆಟ್ ಎಂದಿದ್ದಾರೆ. 12 ಲಕ್ಷ ರೂಪಾಯಿಗಳವರೆಗೆ ತೆರಿಗೆ ವಿನಾಯಿತಿ ನೀಡುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ. ಆದರೆ 8 ರಿಂದ 10 ಕ್ಷ ಆದಾಯ ಹೊಂದಿರುವವವರಿಗೆ ಶೇ.10 ರಷ್ಟು ತೆರಿಗೆ ವಿಧಿಸುವುದರಿಂದ ಮಧ್ಯಮ ವರ್ಗದವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಹಾರಕ್ಕೆ ಸಾಕಷ್ಟು ಘೋಷಣೆ ಮಾಡಲಾಗಿದ್ದು, ಅಲ್ಲಿನ ಜನರನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಅವರು ಹೇಳಿದರು.
Advertisement