
ನವದೆಹಲಿ: ತೆರಿಗೆ ಪಾವತಿಸುವವರಿಗೆ ಕೇಂದ್ರ ಬಜೆಟ್ 2025 ರಲ್ಲಿ ನಿರ್ಮಲಾ ಸೀತಾರಾಮನ್ ಭರಪೂರ ಕೊಡುಗೆಗಳನ್ನು ಘೋಷಿಸಿದ್ದಾರೆ.
12 ಲಕ್ಷದವರೆಗಿನ ಆದಾಯ ತೆರಿಗೆ ವಿನಾಯಿತಿಯ ಜೊತೆಗೆ ಬಾಡಿಗೆ ಮೇಲಿನ ಟಿಡಿಎಸ್ ಮಿತಿಯನ್ನು ವಾರ್ಷಿಕ 6 ಲಕ್ಷದವರೆಗೆ ಏರಿಕೆ ಮಾಡಿದ್ದಾರೆ. ಈ ವರೆಗೆ ಬಾಡಿಗೆ ಮೇಲಿನ ಟಿಡಿಎಸ್ ಮಿತಿ 2.40 ಲಕ್ಷದವರೆಗೆ ಇತ್ತು. 2025-26 ನೇ ಆರ್ಥಿಕ ವರ್ಷದಿಂದ ಈ ಮಿತಿ ವಾರ್ಷಿಕ 6 ಲಕ್ಷಕ್ಕೆ ಏರಿಕೆಯಾಗಲಿದೆ.
"ಸರ್ಕಾರದ ಈ ಕ್ರಮದಿಂದಾಗಿ ಟಿಡಿಎಸ್‌ಗೆ ಒಳಪಡುವ ವಹಿವಾಟುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ, ಹೀಗಾಗಿ ಸಣ್ಣ ಪಾವತಿಗಳನ್ನು ಪಡೆಯುವ ಸಣ್ಣ ತೆರಿಗೆ ಪಾವತಿದಾರರಿಗೆ ಪ್ರಯೋಜನವಾಗುತ್ತದೆ." ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
"ಇದು ಬಾಡಿಗೆಯ ಮೇಲಿನ ಟಿಡಿಎಸ್ ಕಡಿತದ ಮಾಸಿಕ ಮಿತಿಯನ್ನು 20,000 ರೂ.ಗಳಿಂದ 50,000 ರೂ.ಗಳಿಗೆ ಪರಿಣಾಮಕಾರಿಯಾಗಿ ಹೆಚ್ಚಿಸಿದ್ದು, ಸಣ್ಣ ತೆರಿಗೆದಾರರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಅನುಸರಣೆಯ ಹೊರೆಗಳನ್ನು ಕಡಿಮೆ ಮಾಡುತ್ತದೆ"
"ಹಿರಿಯ ನಾಗರಿಕರಿಗೆ ಬಡ್ಡಿಯ ಮೇಲಿನ ತೆರಿಗೆ ಕಡಿತದ ಮಿತಿಯನ್ನು ಪ್ರಸ್ತುತ 50,000 ರೂ.ಗಳಿಂದ 1,00,000 ರೂ.ಗಳಿಗೆ ದ್ವಿಗುಣಗೊಳಿಸಲಾಗುತ್ತಿದೆ" ಎಂದು ಅವರು ಹೇಳಿದರು. ಹೊಸ ಕ್ರಮವು ಟಿಡಿಎಸ್‌ಗೆ ಒಳಪಡುವ ವಹಿವಾಟುಗಳ ಸಂಖ್ಯೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ, ಇದು ಬಾಡಿಗೆ ಪಾವತಿಸುವ ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಸುಲಭವಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
Advertisement