
ಸಂಭಾಲ್: ಸಂಭಾಲ್ ಜಿಲ್ಲೆಯ ಚಂದೌಸಿ ತಹಸಿಲ್‌ನಲ್ಲಿರುವ ಸರ್ಕಾರಿ ಕೊಳದ ಮೇಲೆ ಅಕ್ರಮವಾಗಿ ನಿರ್ಮಿಸಲಾದ ಗೋರಿಯನ್ನು ಜಿಲ್ಲಾಡಳಿತ ಇಂದು ತೆರವುಗೊಳಿಸಿದೆ.
ಕಾರ್ಯಾಚರಣೆ ಬಗ್ಗೆ ಮಾತನಾಡಿರುವ ಅಧಿಕಾರಿಗಳು ಸರ್ಕಾರಿ ಕೊಳವನ್ನು ಭಾನುವಾರ ಅತಿಕ್ರಮಣದಿಂದ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಾಯ್ ಮತ್ತು ಚಂದೌಸಿ ಗ್ರಾಮಗಳ ಗಡಿಯಲ್ಲಿರುವ ಸರ್ಕಾರಿ ಕೊಳವನ್ನು 'ಮಜಾರ್' (ಸಮಾಧಿ) ಅತಿಕ್ರಮಿಸುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ದೂರು ನೀಡಲಾಗಿತ್ತು ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ ಎಂದು ಚಂದೌಸಿಯ ತಹಸೀಲ್ದಾರ್ ಧೀರೇಂದ್ರ ಸಿಂಗ್ ಹೇಳಿದ್ದಾರೆ.
ಕೆಲವು ದಿನಗಳಲ್ಲಿ 'ಮಜಾರ್'ನಲ್ಲಿ "ಮಾಟಮಂತ್ರ" ನಡೆಸಲಾಗುತ್ತಿದೆ ಎಂದು ದೂರುದಾರರು ಆರೋಪಿಸಿದ್ದರು.
ಭಾನುವಾರ, ತನಿಖೆಗೆ ಕಳುಹಿಸಲಾದ ತಂಡ ಧಾರ್ಮಿಕ ಉದ್ದೇಶಕ್ಕಾಗಿ ತಪ್ಪಾಗಿ ಬಳಸಲಾಗುತ್ತಿದ್ದ 'ಮಜಾರ್' ಅನ್ನು ಕಂಡುಹಿಡಿದಿದೆ, ಅಕ್ರಮವಾಗಿ ನಿರ್ಮಿಸಲಾದ 'ಮಜಾರ್' ಅನ್ನು ತಂಡ ತೆಗೆದುಹಾಕಿದೆ ಎಂದು ಸಿಂಗ್ ಹೇಳಿದ್ದಾರೆ.
ಈಗ ಕೊಳದ ಸೌಂದರೀಕರಣಕ್ಕಾಗಿ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
Advertisement