ಎರಡು ಮರಿಗಳಿಗೆ ಜನ್ಮ ನೀಡಿದ ಚೀತಾ ವೀರಾ
ಎರಡು ಮರಿಗಳಿಗೆ ಜನ್ಮ ನೀಡಿದ ಚೀತಾ ವೀರಾ

ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಮರಿಗಳಿಗೆ ಜನ್ಮ ನೀಡಿದ ಚೀತಾ ವೀರಾ

ಇಂದು ಜನಿಸಿದ ಎರಡು ಮರಿಗಳು ಸೇರಿದಂತೆ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಮರಿಗಳು ಸಂಖ್ಯೆ 14ಕ್ಕೆ ಮತ್ತು ಒಟ್ಟು ಚೀತಾಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
Published on

ಭೋಪಾಲ್: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮಂಗಳವಾರ ಚೀತಾ ವೀರ ಎರಡು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಹೇಳಿದ್ದಾರೆ.

ಇಂದು ಜನಿಸಿದ ಎರಡು ಮರಿಗಳು ಸೇರಿದಂತೆ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಮರಿಗಳು ಸಂಖ್ಯೆ 14ಕ್ಕೆ ಮತ್ತು ಒಟ್ಟು ಚೀತಾಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಿಎಂ ಯಾದವ್ ಅವರು, "ಮಧ್ಯಪ್ರದೇಶದ ಜಂಗಲ್ ಬುಕ್‌ಗೆ ಎರಡು ಚಿರತೆ ಮರಿಗಳು ಸೇರಿವೆ. ರಾಜ್ಯದಲ್ಲಿ ಚಿರತೆಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಇಂದು, ಹೆಣ್ಣು ಚಿರತೆ ವೀರಾ ಎರಡು ಮರಿಗಳಿಗೆ ಜನ್ಮ ನೀಡಿದೆ" ಎಂದು ತಿಳಿಸಿದ್ದಾರೆ.

ಎರಡು ಮರಿಗಳಿಗೆ ಜನ್ಮ ನೀಡಿದ ಚೀತಾ ವೀರಾ
ಕುನೊ ರಾಷ್ಟ್ರೀಯ ಉದ್ಯಾನದಲ್ಲಿ 4 ತಿಂಗಳಲ್ಲಿ 8 ಚಿರತೆ ಸಾವು ಉತ್ತಮ ಬೆಳವಣಿಗೆಯಲ್ಲ: ಸುಪ್ರೀಂ ಕೋರ್ಟ್ ಕಳವಳ

ಚಿರತೆ ಯೋಜನೆಯಲ್ಲಿ ತೊಡಗಿರುವ ಅಧಿಕಾರಿಗಳು, ವೈದ್ಯರು ಮತ್ತು ಕ್ಷೇತ್ರ ಸಿಬ್ಬಂದಿಯನ್ನು ಯಾದವ್ ಅಭಿನಂದಿಸಿದ್ದು, ಅವರ ದಣಿವರಿಯದ ಕೆಲಸದ ಪರಿಣಾಮವಾಗಿ, ಮಧ್ಯಪ್ರದೇಶವನ್ನು "ಚಿರತೆಗಳ ನಾಡು" ಎಂದೂ ಕರೆಯಲಾಗುತ್ತಿದೆ ಎಂದಿದ್ದಾರೆ.

X

Advertisement

X
Kannada Prabha
www.kannadaprabha.com