ಪಶ್ಚಿಮ ಬಂಗಾಳವನ್ನು 'ಬಾಂಗ್ಲಾ' ಎಂದು ಮರುನಾಮಕರಣ ಮಾಡುವಂತೆ ಟಿಎಂಸಿ ಒತ್ತಾಯ

ಇಂದು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಟಿಎಂಸಿ ಸಂಸದ ರಿತಬ್ರತ ಬ್ಯಾನರ್ಜಿ, ಪಶ್ಚಿಮ ಬಂಗಾಳ ವಿಧಾನಸಭೆ ಜುಲೈ 2018 ರಲ್ಲಿ ಹೆಸರು ಬದಲಾವಣೆಗೆ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತ್ತು.
ರಿತಬ್ರತ ಬ್ಯಾನರ್ಜಿ
ರಿತಬ್ರತ ಬ್ಯಾನರ್ಜಿ
Updated on

ನವದೆಹಲಿ: ಪಶ್ಚಿಮ ಬಂಗಾಳವನ್ನು 'ಬಾಂಗ್ಲಾ' ಎಂದು ಮರುನಾಮಕರಣ ಮಾಡಬೇಕು ಎಂಬ ಬೇಡಿಕೆ ಮಂಗಳವಾರ ರಾಜ್ಯಸಭೆಯಲ್ಲಿ ಕೇಳಿಬಂದಿದ್ದು, ಹೊಸ ಹೆಸರು ರಾಜ್ಯದ ಇತಿಹಾಸ ಮತ್ತು ಸಂಸ್ಕೃತಿಯನ್ನು ಉತ್ತಮವಾಗಿ ಪ್ರತಿಬಿಂಬಿಸುತ್ತದೆ ಎಂದು ಪ್ರತಿಪಾದಿಸಿದೆ.

ಇಂದು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಟಿಎಂಸಿ ಸಂಸದ ರಿತಬ್ರತ ಬ್ಯಾನರ್ಜಿ, ಪಶ್ಚಿಮ ಬಂಗಾಳ ವಿಧಾನಸಭೆ ಜುಲೈ 2018 ರಲ್ಲಿ ಹೆಸರು ಬದಲಾವಣೆಗೆ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತ್ತು. ಆದರೆ ಕೇಂದ್ರ ಸರ್ಕಾರ ಇದುವರೆಗೂ ಅದನ್ನು ಇನ್ನೂ ಅನುಮೋದಿಸಿಲ್ಲ ಎಂದು ಎತ್ತಿ ತೋರಿಸಿದರು.

ಈ ಸಂಬಂಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಮರುನಾಮಕರಣವು ರಾಜ್ಯದ ಇತಿಹಾಸ, ಸಂಸ್ಕೃತಿ ಮತ್ತು ಗುರುತಿನೊಂದಿಗೆ ಹೊಂದಿಕೆಯಾಗುತ್ತದೆ ಮತ್ತು ಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಒತ್ತಾಯಿಸಿದರು.

ರಿತಬ್ರತ ಬ್ಯಾನರ್ಜಿ
ಪಶ್ಚಿಮ ಬಂಗಾಳ ಅಲ್ಲ, 'ಬಾಂಗ್ಲಾ'; ರಾಜ್ಯದ ಹೆಸರು ಬದಲಾವಣೆಗೆ ಮುಂದಾದ ಮಮತಾ ಸರ್ಕಾರ

1947 ರ ವಿಭಜನೆಯು ಬಂಗಾಳವನ್ನು ವಿಭಜಿಸಿತು. ಈ ವೇಳೆ ಭಾರತದ ಭಾಗವನ್ನು ಪಶ್ಚಿಮ ಬಂಗಾಳ ಎಂದು ಕರೆಯಲಾಯಿತು ಮತ್ತು ಇನ್ನೊಂದು ಭಾಗವನ್ನು ಪೂರ್ವ ಪಾಕಿಸ್ತಾನ ಎಂದು ಹೆಸರಿಸಲಾಯಿತು. 1971ರಲ್ಲಿ, ಪೂರ್ವ ಪಾಕಿಸ್ತಾನ ಸ್ವಾತಂತ್ರ್ಯ ಘೋಷಿಸಿತು ಮತ್ತು ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರ ರಚನೆಯಾಯಿತು.

“ಇಂದು, ಪೂರ್ವ ಪಾಕಿಸ್ತಾನವಿಲ್ಲ. ನಮ್ಮ ರಾಜ್ಯದ ಹೆಸರನ್ನು ಬದಲಾಯಿಸಬೇಕಾಗಿದೆ. ಪಶ್ಚಿಮ ಬಂಗಾಳದ ಜನರ ಆದೇಶವನ್ನು ಗೌರವಿಸಬೇಕಾಗಿದೆ.” ಎಂದು ಅವರು ಹೇಳಿದ್ದಾರೆ.

2011 ರಲ್ಲಿ ಒರಿಸ್ಸಾ ರಾಜ್ಯದ ಹೆಸರನ್ನು ಒಡಿಶಾ ಎಂದು ಬದಲಾಯಿಸಲಾಯಿತು. ಅದಾದ ಬಳಿಕ ಯಾವುದೇ ರಾಜ್ಯದ ಹೆಸರನ್ನು ಬದಲಾಯಿಸಲಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com