
ನವದೆಹಲಿ: ಚುನಾವಣಾ ಆಯೋಗವನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನಡೆಸುತ್ತಿದ್ದಾರೆ ಎಂಬ ಆಮ್ ಆದ್ಮಿ ಪಕ್ಷದಿಂದ ಬಂದ ಆರೋಪಗಳ ನಡುವೆ, ಮಂಗಳವಾರ ಚುನಾವಣಾ ಆಯೋಗ ತಿರುಗೇಟು ನೀಡಿದೆ.
ದೆಹಲಿ ಚುನಾವಣೆಯಲ್ಲಿ ಚುನಾವಣಾ ಪ್ರಾಧಿಕಾರವನ್ನು ಕೆಣಕಲು ಪುನರಾವರ್ತಿತ ಉದ್ದೇಶಪೂರ್ವಕ ಒತ್ತಡ ತಂತ್ರಗಳನ್ನು ಮಾಡಲಾಗುತ್ತಿದೆ ಎಂದಿದೆ.
ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಆಯೋಗವು ಸಾಂವಿಧಾನಿಕ ಸಂಯಮವನ್ನು ಹೊಂದಿದೆ. ಅಂತಹ ಪ್ರಕೋಪಗಳನ್ನು ಚಾಣಾಕ್ಷತನದಿಂದ, ನಿಷ್ಠುರವಾಗಿ ಮತ್ತು ಅಂತಹ ಪ್ರಚೋದನೆಗಳಿಂದ ಪ್ರಭಾವಿತವಾಗುವುದಿಲ್ಲ ಎಂದು ಹೇಳಿದೆ.
ಬಿಜೆಪಿಯ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯನ್ನು ಚುನಾವಣಾ ಆಯೋಗ ನಿರ್ಲಕ್ಷಿಸುತ್ತಿದೆ ಎಂದು ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಎಎಪಿಯ ಉನ್ನತ ನಾಯಕರು ಆರೋಪಿಸಿದ್ದರು.
ನಿವೃತ್ತಿಯ ನಂತರದ ಹುದ್ದೆಯನ್ನು ಪಡೆಯಲು ಕುಮಾರ್ ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದ್ದರು. ಕುಮಾರ್ ಫೆಬ್ರವರಿ 18 ರಂದು 65 ವರ್ಷ ತುಂಬಿದ ನಂತರ ಅಧಿಕಾರದಿಂದ ಕೆಳಗಿಳಿಯುತ್ತಾರೆ. ಜ್ಞಾನೇಶ್ ಕುಮಾರ್ ಮತ್ತು ಸುಖ್ಬೀರ್ ಸಿಂಗ್ ಸಂಧು ಇತರ ಚುನಾವಣಾ ಆಯುಕ್ತರು.
ದೆಹಲಿ ಚುನಾವಣೆಯಲ್ಲಿ ಇಸಿಐ ನ್ನು ಒಂದೇ ಸದಸ್ಯ ಸಂಸ್ಥೆ ಎಂಬಂತೆ ಕೆಣಕಲು ಪದೇ ಪದೇ ಉದ್ದೇಶಪೂರ್ವಕ ಒತ್ತಡ ತಂತ್ರಗಳನ್ನು ಮಾಡುತ್ತಿರುವುದನ್ನು 3 ಸದಸ್ಯರ ಆಯೋಗವು ಒಟ್ಟಾಗಿ ಗಮನಿಸಿದೆ. ಇಂತಹ ಹೇಳಿಕೆಗಳಿಗೆ ನಿಷ್ಠುರವಾಗಿ ಪ್ರತಿಕ್ರಿಯಿಸುತ್ತಿದ್ದು ಪ್ರಚೋದನೆಗಳಿಗೆ ಒಳಗಾಗುವುದಿಲ್ಲ ಎಂದು ಹೇಳಿದೆ.
ನಾಳೆ ದೆಹಲಿಯಲ್ಲಿ ಚುನಾವಣೆ ನಡೆಯಲಿದೆ, ಎಎಪಿ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಬಿಜೆಪಿ ಮುಂದಿನ ಸರ್ಕಾರವನ್ನು ರಚಿಸಲು ಪ್ರಯತ್ನಿಸುತ್ತಿದೆ.
Advertisement