ದೆಹಲಿ ವಿಧಾನಸಭೆ ಚುನಾವಣೆ: ಸಂಜೆ 5 ಗಂಟೆಯವರೆಗೆ ಶೇ. 57 ರಷ್ಟು ಮತದಾನ

ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ಇಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದು, ಬೆಳಗ್ಗೆ 7.00 ಗಂಟೆಗೆ ಮತದಾನ ಪ್ರಾರಂಭವಾಯಿತು.
ಮತದಾನ
ಮತದಾನ
Updated on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಬುಧವಾರ ಸಂಜೆ 6 ಗಂಟೆಗೆ ಮುಕ್ತಾಯವಾಗಿದ್ದು, ಸಂಜೆ 5 ಗಂಟೆಯವರೆಗೆ ಶೇ. 57.70 ರಷ್ಟು ಮತದಾನ ದಾಖಲಾಗಿದೆ.

ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ಇಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದು, ಬೆಳಗ್ಗೆ 7.00 ಗಂಟೆಗೆ ಮತದಾನ ಪ್ರಾರಂಭವಾಯಿತು ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಬಿಗಿ ಭದ್ರತೆಯ ನಡುವೆ ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಿದೆ.

ಬೆಳಗ್ಗೆಯಿಂದಲೇ ನೀರಸವಾಗಿ ಸಾಗುತ್ತಿದ್ದ ಮತದಾನ ಮಧ್ಯಾಹ್ನದ ವೇಳೆಗೆ ತುಸು ಚುರುಕು ಪಡೆದುಕೊಂಡಿದೆ. ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿ, ರಾಷ್ಟ್ರ ರಾಜಧಾನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವುದಕ್ಕೆ ಆಮ್ ಅದ್ಮಿ ಪಕ್ಷ ಸಜ್ಜಾಗಿದೆ.

ಮತದಾನ
ದೆಹಲಿ ವಿಧಾನಸಭಾ ಚುನಾವಣೆ 2025: ಈವರೆಗೂ ಶೇ.33.31ರಷ್ಟು ಮತದಾನ, ರಾಷ್ಟ್ರಪತಿ ದ್ರೌಪದಿ ಮುರ್ಮು, ಸಿಎಂ ಅತಿಶಿ ಮತದಾನ

ಇನ್ನು ಬಿಜೆಪಿ ಈ ಬಾರಿಯಾದರೂ ಅಧಿಕಾರ ಪಡೆಯುವ ಉತ್ಸಾಹದಲ್ಲಿದೆ. ಇದರ ಮಧ್ಯೆ ಆಮ್‌ ಆದ್ಮಿಯಿಂದ ದೂರ ಸರಿದು, ಪ್ರತ್ಯೇಕವಾಗಿ ಸ್ಪರ್ಧಿಸಿರುವ ಕಾಂಗ್ರೆಸ್ ಕೂಡ ಸರ್ಕಾರ ರಚಿಸೋ ಕನಸು ಕಾಣುತ್ತಿದೆ.

70 ಸ್ಥಾನಗಳಿಗೆ ಒಟ್ಟು 699 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮತದಾನಕ್ಕಾಗಿ ಒಟ್ಟು 13766 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com