ಮಾಜಿ ಯೋಧ ಹತ್ಯೆ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ನಲ್ಲಿ ಸೇನಾಪಡೆಯಿಂದ ಬೃಹತ್ ಕಾರ್ಯಾಚರಣೆ, ಹಲವರ ವಶ

ಮೊನ್ನೆ ಸೋಮವಾರ ಮಧ್ಯಾಹ್ನ ಉಗ್ರರು ಮಂಜೂರ್ ಅಹ್ಮದ್ ವಾಗೆ ಮೇಲೆ ದಾಳಿ ಮಾಡಿ ಕೊಂದು ಹಾಕಿದ ನಂತರ ಪೊಲೀಸರು ಸಿಆರ್‌ಪಿಎಫ್ ಮತ್ತು ಸೇನಾಧಿಕಾರಿಗಳು ಬೆಹಿಬಾಗ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದಾಳಿಯಲ್ಲಿ ಅವರ ಪತ್ನಿ ಮತ್ತು ಸೊಸೆ ಕೂಡ ಗಾಯಗೊಂಡಿದ್ದಾರೆ.
ಮಾಜಿ ಯೋಧ ಹತ್ಯೆ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ನಲ್ಲಿ ಸೇನಾಪಡೆಯಿಂದ ಬೃಹತ್ ಕಾರ್ಯಾಚರಣೆ, ಹಲವರ ವಶ
Updated on

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಮಾಜಿ ಸೈನಿಕರೊಬ್ಬರನ್ನು ಅವರ ನಿವಾಸದ ಬಳಿ ಉಗ್ರರು ಹತ್ಯೆ ಮಾಡಿದ ನಂತರ ಭದ್ರತಾ ಪಡೆಗಳು ದೊಡ್ಡ ಪ್ರಮಾಣದ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಆರಂಭಿಸಿವೆ. ಘಟನೆಗೆ ಕಾರಣರಾದವರನ್ನು ಪತ್ತೆಹಚ್ಚಲು ಅಧಿಕಾರಿಗಳು ಪ್ರಯತ್ನಗಳನ್ನು ತೀವ್ರಗೊಳಿಸುತ್ತಿರುವುದರಿಂದ, ವಿಚಾರಣೆಗಾಗಿ ಡಜನ್ ಗಟ್ಟಲೆ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ.

ಮೊನ್ನೆ ಸೋಮವಾರ ಮಧ್ಯಾಹ್ನ ಉಗ್ರರು ಮಂಜೂರ್ ಅಹ್ಮದ್ ವಾಗೆ ಮೇಲೆ ದಾಳಿ ಮಾಡಿ ಕೊಂದು ಹಾಕಿದ ನಂತರ ಪೊಲೀಸರು ಸಿಆರ್‌ಪಿಎಫ್ ಮತ್ತು ಸೇನಾಧಿಕಾರಿಗಳು ಬೆಹಿಬಾಗ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದಾಳಿಯಲ್ಲಿ ಅವರ ಪತ್ನಿ ಮತ್ತು ಸೊಸೆ ಕೂಡ ಗಾಯಗೊಂಡಿದ್ದಾರೆ.

ಭದ್ರತಾ ಸಿಬ್ಬಂದಿ ಡ್ರೋನ್‌ ಮತ್ತು ಇತರ ಸುಧಾರಿತ ಕಣ್ಗಾವಲು ಸಾಧನಗಳನ್ನು ಬಳಸಿಕೊಂಡು ಪ್ರದೇಶವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸ್ಥಳೀಯ ಓವರ್ ಗ್ರೌಂಡ್ ವರ್ಕರ್ಸ್ (OJW) ನಿಂದ ಉಗ್ರಗಾಮಿಗಳು ಲಾಜಿಸ್ಟಿಕ್ ಬೆಂಬಲವನ್ನು ಪಡೆದಿದ್ದಾರೆ ಎಂದು ತನಿಖಾಧಿಕಾರಿಗಳು ನಂಬಿರುವುದರಿಂದ, ಸೇನಾಧಿಕಾರಿಗಳು ಮನೆ ಮನೆಗೆ ತೆರಳಿ ಶೋಧ ನಡೆಸುತ್ತಿವೆ,

ಮಾಜಿ ಯೋಧ ಹತ್ಯೆ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ನಲ್ಲಿ ಸೇನಾಪಡೆಯಿಂದ ಬೃಹತ್ ಕಾರ್ಯಾಚರಣೆ, ಹಲವರ ವಶ
ಜಮ್ಮು ಮತ್ತು ಕಾಶ್ಮೀರ: ಕುಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ನಿವೃತ್ತ ಸೇನಾ ಯೋಧ ಸಾವು

ಉಗ್ರಗಾಮಿಗಳ ಬದುಕುಳಿಯುವಿಕೆ ಮತ್ತು ಚಲನೆಗೆ ಅಗತ್ಯವಾದ ಒಜಿಡಬ್ಲ್ಯೂಗಳನ್ನು ಗುರುತಿಸುವುದು ಮತ್ತು ಬಂಧಿಸುವುದು ಕಾರ್ಯಾಚರಣೆಯ ಪ್ರಾಥಮಿಕ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಲ್ಗಾಮ್‌ನಾದ್ಯಂತ ದಾಳಿ ನಡೆಸಲಾಗಿದ್ದು, ಶಂಕಿತ ಒಜಿಡಬ್ಲ್ಯೂಗಳು ಮತ್ತು ಉಗ್ರಗಾಮಿತ್ವದೊಂದಿಗೆ ಹಿಂದಿನ ಸಂಪರ್ಕ ಹೊಂದಿರುವವರು ಸೇರಿದಂತೆ ಹಲವಾರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಕೆಲವರನ್ನು ವಿಚಾರಣೆಯ ನಂತರ ಬಿಡುಗಡೆ ಮಾಡಲಾಗಿದೆ, ಇನ್ನು ಕೆಲವರು ಹೆಚ್ಚಿನ ತನಿಖೆಗಾಗಿ ಬಂಧನದಲ್ಲಿದ್ದಾರೆ.

ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸುತ್ತಿದ್ದಾರೆ. ದಾಳಿಯಲ್ಲಿ ಭಾಗಿಯಾಗಿರುವವರ ಚಲನವಲನಗಳನ್ನು ಪತ್ತೆಹಚ್ಚಲು ತಾಂತ್ರಿಕ ಗುಪ್ತಚರವನ್ನು ಬಳಸುತ್ತಿದ್ದಾರೆ.

2021 ರಲ್ಲಿ ನಿವೃತ್ತರಾದ ವಾಗೆ, ತಮ್ಮ ಕುಟುಂಬವನ್ನು ಪೋಷಿಸಲು ಕುರಿ ಸಾಕಣೆಯಲ್ಲಿ ತೊಡಗಿದ್ದರು. ಅವರಿಗೆ ಪತ್ನಿ, ನಾಲ್ವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಸಾವಿಗೆ ನ್ಯಾಯ ಕೊಡಿಸುವಂತೆ ಅವರ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ. 2025 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿಗಳು ನಡೆಸಿದ ಮೊದಲ ಗುರಿ ಹತ್ಯೆ ಇದಾಗಿದೆ.

ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ ಕಾಶ್ಮೀರ (CIK) ಘಟಕವು ರಾಷ್ಟ್ರ ವಿರೋಧಿ ಅಂಶಗಳನ್ನು ಒಳಗೊಂಡ ಕ್ರಿಮಿನಲ್ ಪಿತೂರಿಯ ಸಂಬಂಧ ವಿಚಾರಣೆಗಾಗಿ ಐವರನ್ನು ಬಂಧಿಸಿದೆ. ಶಂಕಿತರ ಮೇಲೆ ಶ್ರೀನಗರದ ಕೇಂದ್ರ ಕಾರಾಗೃಹದೊಳಗೆ ಉಗ್ರಗಾಮಿತ್ವ ಮತ್ತು ಮಾದಕವಸ್ತು ಭಯೋತ್ಪಾದನೆಗೆ ಸಂಬಂಧಿಸಿದ ಕೈದಿಗಳ ಬಳಕೆಯ ಸಿಮ್ ಕಾರ್ಡ್‌ಗಳನ್ನು ಸಂಗ್ರಹಿಸಿ, ಸಾಗಿಸಿ ಮತ್ತು ಕಳ್ಳಸಾಗಣೆ ಮಾಡಿದ ಆರೋಪವಿದೆ.

ಸಿಐಕೆ ಅಧಿಕಾರಿಗಳು ಈ ಹಿಂದೆ ಜೈಲಿನ ಆವರಣದೊಳಗೆ ಶೋಧ ನಡೆಸಿದ್ದರು. ಕೆಲವು ಕೈದಿಗಳೊಂದಿಗೆ ಪಾಲುದಾರಿಕೆ ಹೊಂದಿರುವ ಶಂಕಿತರು ವಿವಿಧ ಭಯೋತ್ಪಾದನಾ ಸಂಬಂಧಿತ ಚಟುವಟಿಕೆಗಳಿಗಾಗಿ ಸಿಮ್ ಕಾರ್ಡ್‌ಗಳನ್ನು ಕಳ್ಳಸಾಗಣೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಿಮ್ ಕಾರ್ಡ್‌ಗಳನ್ನು ನೀಡಿದ ವಿವಿಧ ಟೆಲಿಕಾಂ ಸೇವಾ ಪೂರೈಕೆದಾರರಿಂದ ಪಿಒಎಸ್ ಮಾರಾಟಗಾರರ ಪಾತ್ರವನ್ನು ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com