Manish Sisodia
ಮನೀಶ್ ಸಿಸೋಡಿಯಾ

ಮಾಜಿ ಡಿಸಿಎಂ, AAP ನಾಯಕ ಮನೀಶ್ ಸಿಸೋಡಿಯಾ ಸೋಲು

ಫಲಿತಾಂಶ ಪ್ರಕಟಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮನೀಶ್ ಸಿಸೋಡಿಯಾ, ಪಕ್ಷದ ಕಾರ್ಯಕರ್ತರು ಚುನಾವಣೆಯಲ್ಲಿ ಶಕ್ತಿಮೀರಿ ಕೆಲಸ ಮಾಡಿದ್ದಾರೆ. ಸಾಕಷ್ಟು ಪ್ರಚಾರ ನಡೆಸಿದ್ದರು. ನಾವೆಲ್ಲರೂ ಕಷ್ಟಪಟ್ಟು ಕೆಲಸ ಮಾಡಿದ್ದೇವೆ ಎಂದರು.
Published on

ನವದೆಹಲಿ: ದೆಹಲಿ ಮಾಜಿ ಉಪ ಮುಖ್ಯಮಂತ್ರಿ, ಜಂಗ್ ಪುರಾ ಕ್ಷೇತ್ರದ ಆಪ್ ಅಭ್ಯರ್ಥಿ ಮನೀಶ್ ಸಿಸೋಡಿಯಾ ಬಿಜೆಪಿಯ ತರವಿಂದರ್ ಸಿಂಗ್ ಮಾರ್ವಾ ಎದುರು 636ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.

ಫಲಿತಾಂಶ ಪ್ರಕಟಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮನೀಶ್ ಸಿಸೋಡಿಯಾ, ಪಕ್ಷದ ಕಾರ್ಯಕರ್ತರು ಚುನಾವಣೆಯಲ್ಲಿ ಶಕ್ತಿಮೀರಿ ಕೆಲಸ ಮಾಡಿದ್ದಾರೆ. ಸಾಕಷ್ಟು ಪ್ರಚಾರ ನಡೆಸಿದ್ದರು. ನಾವೆಲ್ಲರೂ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಜನರು ಕೂಡ ನಮ್ಮನ್ನು ಬೆಂಬಲಿಸಿದ್ದಾರೆ. ನಾನು 636 ಮತಗಳ ಅಂತರದಿಂದ ಸೋತಿದ್ದೇನೆ. ಗೆದ್ದ ಅಭ್ಯರ್ಥಿಯನ್ನು ಅಭಿನಂದಿಸುತ್ತೇನೆ. ಅವರು ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತಾರೆಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಎಎಪಿ ಸರ್ಕಾರದ ಮೊದಲ ಅವಧಿಯಲ್ಲಿ ದೆಹಲಿಯ ಸರ್ಕಾರಿ ಶಾಲೆಗಳ ಉದ್ಧಾರದಲ್ಲಿ ಸಿಸೋಡಿಯಾ ಪಾತ್ರ ಪ್ರಮುಖವಾಗಿತ್ತು. ಎರಡನೇ ಅವಧಿ ಅವರಿಗೆ ಕಠಿಣವಾಗಿತ್ತು. ದೆಹಲಿಯ ಈಗ ರದ್ದಾದ ಮದ್ಯ ನೀತಿಯಲ್ಲಿ ಭ್ರಷ್ಟಾಚಾರದ ಆರೋಪದ ನಡುವೆ ಅವರು ಫೆಬ್ರವರಿ 2023 ರಲ್ಲಿ ಬಂಧನಕ್ಕೊಳಗಾದರು. ಶೀಘ್ರದಲ್ಲೇ, ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ತಮ್ಮ ಇತರ ಖಾತೆಗಳನ್ನು ತ್ಯಜಿಸಿದರು.

ಸುಮಾರು ಒಂದೂವರೆ ವರ್ಷಗಳ ಜೈಲುವಾಸದ ನಂತರ, ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತು. ಬಿಡುಗಡೆಯಾದ ನಂತರ, ಸಿಸೋಡಿಯಾ ಅವರು 'ಜನರ ನ್ಯಾಯಾಲಯ'ದಲ್ಲಿ ತೀರ್ಪಿನ ನಂತರವೇ ಸರ್ಕಾರಕ್ಕೆ ಮರಳುವುದಾಗಿ ಹೇಳಿದರು.

ಈ ಬಾರಿ ಪಟ್ಪರ್ಗಂಜ್ ಕ್ಷೇತ್ರದ ಬದಲಿಗೆ ಜಂಗ್ಪುರನಲ್ಲಿ ಸ್ಪರ್ಧಿಸಿದರು. ಚುನಾವಣಾ ಆಯೋಗದ ಪ್ರಕಾರ, ದೆಹಲಿಯ 70 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ 43 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಎಎಪಿ 27 ಸ್ಥಾನಗಳಲ್ಲಿ ಮುಂದಿದೆ. ಇಂದಿನ ಚುನಾವಣೆಯಲ್ಲಿ ಆಪ್ ನ ಮುಂಚೂಣಿ ನಾಯಕರಾದ ಮಾಜಿ ಸಿಎಂ ಸಂಚಾಲಕ ಅರವಿಂದ್ ಕೇಜ್ರಿವಾಲ್, ಆಪ್ ನಾಯಕ ಸತ್ಯೇಂದ್ರ ಜೈನ್ ಸೋಲು ಕಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com