
ನವದೆಹಲಿ: ಇತ್ತೀಚಿಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಉತ್ಸಾಹದಲ್ಲಿರುವ ಬಿಜೆಪಿ, ರಾಷ್ಟ್ರ ರಾಜಧಾನಿಯಲ್ಲಿ ಮೇಯರ್ ಹುದ್ದೆ ಪಡೆಯುವ ಮೂಲಕ ತ್ರಿಬಲ್ ಇಂಜಿನ್ ಸರ್ಕಾರದ ಮೇಲೆ ಕಣ್ಣಿಟ್ಟಿದೆ. ಏಪ್ರಿಲ್ ತಿಂಗಳಲ್ಲಿ ಮೇಯರ್ ಚುನಾವಣೆ ನಡೆಯಲಿದೆ.
ನವೆಂಬರ್ ನಲ್ಲಿ ನಡೆದ ಕಳೆದ ಮೇಯರ್ ಚುನಾವಣೆಯಲ್ಲಿ ಎಎಪಿ ಮೂರು ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಬಿಜೆಪಿ ಕೌನ್ಸಿಲರ್ ಸುಲಭವಾಗಿ ಮೇಯರ್ ಆಗಬಹುದು ಎಂದು ಪಕ್ಷದ ನಾಯಕರೊಬ್ಬರು ಬುಧವಾರ ಹೇಳಿದ್ದಾರೆ.
ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ 48 ಸ್ಥಾನಗಳನ್ನು ಪಡೆದಿರುವ ಬಿಜೆಪಿ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ (MCD) ನಲ್ಲಿ 14 ನಾಮನಿರ್ದೇಶಿತ ಸದಸ್ಯರ ಪೈಕಿ 10 ಸದಸ್ಯರನ್ನು ಹೊಂದಲಿದ್ದು, ಎಎಪಿಯ ನಾಲ್ಕು ಸದಸ್ಯರು ಇರಲಿದ್ದಾರೆ. ಇದಲದ್ದೇ ಅನೇಕ AAP ಕೌನ್ಸಿಲರ್ ಗಳು, ಹೊಸ ಸರ್ಕಾರದಲ್ಲಿ ತಮ್ಮ ವಾರ್ಡ್ ಗಳ ಅಭಿವೃದ್ಧಿಗಾಗಿ ಬಿಜೆಪಿ ಸೇರಲು ಸಿದ್ಧರಿದ್ದಾರೆ ಎಂದು ದೆಹಲಿಯ ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, MCD ಯಲ್ಲಿನ AAP ಯ 121 ಕೌನ್ಸಿಲರ್‌ಗಳಲ್ಲಿ ಮೂವರು ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ ಮತ್ತು ಬಿಜೆಪಿಯ 120 ಕೌನ್ಸಿಲರ್‌ಗಳಲ್ಲಿ ಎಂಟು ಜನರು ಶಾಸಕರಾಗಿ ಆಯ್ಕೆಯಾಗಿದ್ದಾರೆ.
2022 ರ MCD ಚುನಾವಣೆಯಲ್ಲಿ ಎಎಪಿ 134, ಬಿಜೆಪಿ 104, ಕಾಂಗ್ರೆಸ್ ಒಂಬತ್ತು ಮತ್ತು ಸ್ವತಂತ್ರರು ಮೂರು ವಾರ್ಡ್‌ಗಳನ್ನು ಗೆದ್ದಿದ್ದರು. ಮೇಯರ್ ಚುನಾವಣೆಯು ದೆಹಲಿಯ ಜನರಿಗೆ ಸೇವೆ ಸಲ್ಲಿಸಲು ತ್ರಿಬಲ್ ಇಂಜಿನ್ ಸರ್ಕಾರ'ವನ್ನು ಹೊಂದಲು ಪಕ್ಷಕ್ಕೆ ಅವಕಾಶವನ್ನು ಒದಗಿಸುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
ಫೆಬ್ರವರಿ 5 ರಂದು ನಡೆದ ಚುನಾವಣೆಯಲ್ಲಿ 70 ವಿಧಾನಸಭಾ ಸ್ಥಾನಗಳ ಪೈಕಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ 26 ವರ್ಷಗಳ ನಂತರ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದೆ. ಮುಂದಿನ ವಾರ ಅದು ಸರ್ಕಾರ ರಚಿಸುವ ಸಾಧ್ಯತೆಯಿದೆ.
Advertisement