ಭಾರತದ ಚುನಾವಣೆಗಳಲ್ಲಿ 'ವಿದೇಶಿ ಪ್ರಭಾವ'ದ ಬಗ್ಗೆ ಮಾಯಾವತಿ ಕಳವಳ
ಲಖನೌ: ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಭಾರತದ ಚುನಾವಣೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಬಗ್ಗೆ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
"ಭಾರತದಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನೆಪದಲ್ಲಿ ಅಮೆರಿಕದ ಏಜೆನ್ಸಿಯೊಂದು 21 ಮಿಲಿಯನ್ ಡಾಲರ್ ಬೃಹತ್ ಪ್ರಮಾಣದ ಹಣ ನೀಡಿದೆ ಎಂದು ವರದಿಯಾಗಿರುವುದು ತುಂಬಾ ಆಘಾತಕಾರಿಯಾಗಿದೆ" ಎಂದು ಇಂದು ಬಿಎಸ್ ಪಿ ಬಿಡುಗಡೆ ಮಾಡಿದ ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
"ದೇಶದ ಜನರು ಜಾಗರೂಕರಾಗಿರಬೇಕು ಮತ್ತು ಇದು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಲ್ಲಿ ಹಸ್ತಕ್ಷೇಪವೇ? ಎಂದು ಪ್ರಶ್ನಿಸಬೇಕು ಮತ್ತು ನಿಜವಾಗಿದ್ದರೆ ಇದರಿಂದ ಯಾರು ಲಾಭ ಪಡೆಯುತ್ತಿದ್ದಾರೆ" ಎಂದು ಕೇಳಿದ್ದಾರೆ.mus
ಬಿಲಿಯನೇರ್ ಎಲೋನ್ ಮಸ್ಕ್ ನೇತೃತ್ವದ ಯುಎಸ್ ಸರ್ಕಾರಿ ದಕ್ಷತೆ ಇಲಾಖೆ(DOGE) "ಭಾರತದಲ್ಲಿ ಮತದಾರರ ಮತದಾನ ಹೆಚ್ಚಿಸಲು 21 ಮಿಲಿಯನ್ ಡಾಲರ್ ಹಂಚಿಕೆ ಸೇರಿದಂತೆ ಹಲವಾರು ವೆಚ್ಚ ಕಡಿತ ಘೋಷಿಸಿದ ನಂತರ ಮಾಯಾವತಿ ಅವರ ಈ ಪ್ರತಿಕ್ರಿಯೆ ಬಂದಿದೆ.
ಶನಿವಾರ X ನಲ್ಲಿ ಪೋಸ್ಟ್ ಮಾಡಿದ DOGE ನೂರಾರು ಮಿಲಿಯನ್ ತೆರಿಗೆದಾರರ ಡಾಲರ್ ವೆಚ್ಚವಾಗುವ ಅನೇಕ ಕಾರ್ಯಕ್ರಮಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. ಅದರಲ್ಲಿ ಇಲಾಖೆ ಹೇಳುವಂತೆ, "ಭಾರತದಲ್ಲಿ ಮತದಾರರ ಮತದಾನ ಹೆಚ್ಚಿಸಲು ನೀಡಲಾಗಿದ್ದ 21 ಮಿಲಿಯನ್ ಡಾಲರ್ ಸಹ ಸೇರಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ