ಭಾರತದ ಸಾರ್ವಭೌಮತ್ವಕ್ಕೆ ಟ್ರಂಪ್ ಬೆದರಿಕೆ; ಅವರ ಆಪ್ತ ಸ್ನೇಹಿತ ಮೋದಿ ಇದರ ವಿರುದ್ಧ ನಿಲ್ಲುತ್ತಾರಾ?: ಕಾಂಗ್ರೆಸ್

ಕನಿಷ್ಠ ದರಗಳು ಮತ್ತು ವ್ಯಾಪಕವಾಗಿ ಸುಧಾರಿಸಿದ ಅನುಸರಣಾ ನಿಯಮಗಳಿಗೆ ಕಾಂಗ್ರೆಸ್ ನ ಪ್ರಸ್ತಾವನೆ ಕರೆ ನೀಡಿದೆ ಎಂದು ಜೈರಾಮ್ ರಮೇಶ್ X ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
PM Modi- Donald Trump
ಪ್ರಧಾನಿ ಮೋದಿ- ಡೊನಾಲ್ಡ್ ಟ್ರಂಪ್online desk
Updated on

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರಸ್ಪರ ಸುಂಕಗಳ ಬಗ್ಗೆ ಮಾತನಾಡುತ್ತಿರುವುದು ಜಿಎಸ್‌ಟಿಯಂತಹ ತೆರಿಗೆ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವವು ಅಪಾಯದಲ್ಲಿರುವಾಗ ಟ್ರಂಪ್ ಆಪ್ತ ಸ್ನೇಹಿತ" ಇದನ್ನು ವಿರೋಧಿಸುತ್ತಾರೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕಾಂಗ್ರೆಸ್ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಮ್ಮ ಪಕ್ಷವು ಬಹಳ ಹಿಂದಿನಿಂದಲೂ ಜಿಎಸ್‌ಟಿ 2.0ಗಾಗಿ ಕರೆ ನೀಡುತ್ತಿದೆ. ಇದು ಜಿಎಸ್‌ಟಿಯನ್ನು ನಿಜವಾಗಿಯೂ ಉತ್ತಮ ಮತ್ತು ಸರಳ ತೆರಿಗೆಯನ್ನಾಗಿ ಮಾಡುತ್ತದೆ ಎಂದು ಹೇಳಿದ್ದಾರೆ.

ಕನಿಷ್ಠ ದರಗಳು ಮತ್ತು ವ್ಯಾಪಕವಾಗಿ ಸುಧಾರಿಸಿದ ಅನುಸರಣಾ ನಿಯಮಗಳಿಗೆ ಕಾಂಗ್ರೆಸ್ ನ ಪ್ರಸ್ತಾವನೆ ಕರೆ ನೀಡಿದೆ ಎಂದು ಜೈರಾಮ್ ರಮೇಶ್ X ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

"ಈಗ ಅಧ್ಯಕ್ಷ ಟ್ರಂಪ್ ಜಿಎಸ್‌ಟಿಯ ಅಸ್ತಿತ್ವಕ್ಕೇ ಬೆದರಿಕೆ ಹಾಕುತ್ತಿದ್ದಾರೆ. ಜಿಎಸ್ ಟಿಯ ರಚನೆಯಿಂದ, ತೆರಿಗೆ ಆಮದುಗಳಿಗೆ ಅನ್ವಯಿಸುತ್ತದೆ ಆದರೆ ರಫ್ತುಗಳ ಮೇಲೆ ಅಲ್ಲ. ಇದು ವಿವಾದಾತೀತವಾಗಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಈಗ ಅಮೆರಿಕ ಅಧ್ಯಕ್ಷರ ಪರಸ್ಪರ ಸುಂಕಗಳ ಬಗ್ಗೆ ಮಾತನಾಡುವುದು ಜಿಎಸ್‌ಟಿಯಂತಹ ತೆರಿಗೆಯ ವ್ಯವಸ್ಥೆಯನ್ನೇ ಪ್ರಶ್ನಿಸುತ್ತಿದೆ ಎಂದು ರಮೇಶ್ ಆರೋಪಿಸಿದ್ದಾರೆ.

"ಡಬ್ಲ್ಯುಟಿಒ ಹೊರತುಪಡಿಸಿ, ಇಲ್ಲಿ ರಾಷ್ಟ್ರೀಯ ಸಾರ್ವಭೌಮತ್ವ ಅಪಾಯದಲ್ಲಿದೆ. ತಾನು ವಿಶ್ವಗುರು ಎಂದು ನಿರಂತರವಾಗಿ ಘಂಟಾಘೋಷವಾಗಿ ಹೇಳುತ್ತಿರುವ. ಅಧ್ಯಕ್ಷ ಟ್ರಂಪ್ ಅವರ ಉತ್ತಮ ಸ್ನೇಹಿತ ಮೋದಿ ಟ್ರಂಪ್ ಬೆದರಿಕೆಗಳ ವಿರುದ್ಧ ಎದ್ದು ನಿಲ್ಲುತ್ತಾರೆಯೇ?" ಎಂದು ಕಾಂಗ್ರೆಸ್ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಾ ಪ್ರಶ್ನಿಸಿದ್ದಾರೆ.

PM Modi- Donald Trump
ವಿಶ್ವದ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತ ಕೂಡ ಒಂದು; India ಬಳಿ ಸಾಕಷ್ಟು ಹಣವಿದೆ, ನಾವೇಕೆ ಅವರಿಗೆ ಹಣ ನೀಡಬೇಕು: ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಪ್ರಸ್ತಾವಿತ ಸುಂಕಗಳ ಕುರಿತಂತೆ ಶ್ವೇತಭವನವು "ಅನ್ಯಾಯಯುತ" ತೆರಿಗೆಗಳು ಎಂದು ವಿವರಿಸುವ ಒಂದು ಲೇಖನವನ್ನು ರಮೇಶ್ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com