ಆರೋಪಿಯ ಮನೆ ಕೆಡವಿದ ಸರ್ಕಾರ
ಆರೋಪಿಯ ಮನೆ ಕೆಡವಿದ ಸರ್ಕಾರ

ಅತ್ಯಾಚಾರ ಪ್ರಕರಣದಲ್ಲಿ ಮನೆ ಕೆಡವಿದ ಸರ್ಕಾರ; ಈಗ ಆರೋಪಿಯನ್ನು ಖುಲಾಸೆಗೊಳಿಸಿದ ಕೋರ್ಟ್!

ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 2021 ರಲ್ಲಿ ಅತ್ಯಾಚಾರ ದೂರು ದಾಖಲಾದ ಹತ್ತು ದಿನಗಳ ನಂತರ, ಅನ್ಸಾರಿ ಅವರ ಮನೆಯನ್ನು ಸ್ಥಳೀಯ ಅಧಿಕಾರಿಗಳು ಕೆಡವಿದ್ದರು.
Published on

ರಾಜ್‌ಗಢ: ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಸೆಷನ್ಸ್ ನ್ಯಾಯಾಲಯವು ಫೆಬ್ರವರಿ 14 ರಂದು ಮಾಜಿ ವಾರ್ಡ್ ಕೌನ್ಸಿಲರ್ ಶಫೀಕ್ ಅನ್ಸಾರಿ ವಿರುದ್ಧ ನಾಲ್ಕು ವರ್ಷಗಳ ಹಿಂದೆ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಮಹಿಳೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿ, ಆರೋಪಿಯನ್ನು ಖುಲಾಸೆಗೊಳಿಸಿದೆ.

ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 2021 ರಲ್ಲಿ ಅತ್ಯಾಚಾರ ದೂರು ದಾಖಲಾದ ಹತ್ತು ದಿನಗಳ ನಂತರ, ಅನ್ಸಾರಿ ಅವರ ಮನೆಯನ್ನು ಸ್ಥಳೀಯ ಅಧಿಕಾರಿಗಳು ಕೆಡವಿದ್ದರು. ಅವರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಅವರ ಮಗ ಮತ್ತು ಸಹೋದರನ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು..

"ಅಂದು ಬೆಳಗ್ಗೆ 7 ಗಂಟೆಗೆ ಅಧಿಕಾರಿಗಳು ಬುಲ್ಡೋಜರ್‌ಗಳೊಂದಿಗೆ ಬಂದು, ನನ್ನ ಕುಟುಂಬ ಸದಸ್ಯರ ಮನವಿಯನ್ನು ಅರ್ಥಮಾಡಿಕೊಳ್ಳುವ ಮೊದಲೇ ನನ್ನ ಮನೆ ಕೆಡವಿದ್ದರು" ಎಂದು ಪ್ರಸ್ತುತ ತಮ್ಮ ಸಹೋದರನ ಮನೆಯಲ್ಲಿ ವಾಸಿಸುತ್ತಿರುವ ಅನ್ಸಾರಿ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಆರೋಪಿಯ ಮನೆ ಕೆಡವಿದ ಸರ್ಕಾರ
ಮಧ್ಯಪ್ರದೇಶ: ಅತ್ಯಾಚಾರ ಆರೋಪಿಯ ಮನೆ ಧ್ವಂಸ!

"ನಮ್ಮ ಬಳಿ ಎಲ್ಲಾ ದಾಖಲೆಗಳು ಇದ್ದವು. ಮನೆಯನ್ನು ಅನುಮತಿಯಿಲ್ಲದೆ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ದಾಖಲೆಗಳನ್ನು ತೋರಿಸಲು ಅಥವಾ ಏನನ್ನೂ ಹೇಳಲು ನಮಗೆ ಅವಕಾಶ ನೀಡಲಿಲ್ಲ. ಆತುರದಲ್ಲಿ ಮನೆ ಕೆಡವಲಾಯಿತು. ನನ್ನ ಕುಟುಂಬದಲ್ಲಿ ಏಳು ಜನರಿದ್ದಾರೆ. ಅವರೆಲ್ಲರೂ ನಿರಾಶ್ರಿತರಾಗಿದ್ದಾರೆ. ನಾನು ಮೂರು ತಿಂಗಳು ಜೈಲಿಗೆ ಹೋದೆ" ಎಂದು ಅನ್ಸಾರಿ ತಮ್ಮ ಅಳಲು ಹೇಳಿಕೊಂಡಿದ್ದಾರೆ.

ಪ್ರಕರಣದಲ್ಲಿ ಅನ್ಸಾರಿಯನ್ನು ಖುಲಾಸೆಗೊಳಿಸಿದ ರಾಜ್‌ಗಢ ಜಿಲ್ಲೆಯ ಮೊದಲ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಿತ್ರೇಂದ್ರ ಸಿಂಗ್ ಸೋಲಂಕಿ, ದೂರುದಾರರ ಸಾಕ್ಷ್ಯಗಳಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಆರೋಪಿ ಶಫೀಕ್ ಅನ್ಸಾರಿ ಮನೆಯಲ್ಲಿ ಸಂತ್ರಸ್ತೆಯ ಉಪಸ್ಥಿತಿಯು ಅನುಮಾನಾಸ್ಪದವಾಗಿದೆ. ಆರೋಪಿಯು ಸಂತ್ರಸ್ತೆಯೊಂದಿಗೆ ಲೈಂಗಿಕ ದೌರ್ಜನ್ಯದ ಹೇಳಿಕೆಯು ವೈದ್ಯಕೀಯ ಅಥವಾ ವೈಜ್ಞಾನಿಕ ಪುರಾವೆಗಳಿಂದ ದೃಢೀಕರಿಸಲ್ಪಟ್ಟಿಲ್ಲ. ಘಟನೆಯ ಬಗ್ಗೆ ತನ್ನ ಪತಿಗೆ ತಿಳಿಸಲು ವಿಳಂಬ ಮಾಡಲು ಅಥವಾ ವರದಿಯನ್ನು ಸಲ್ಲಿಸುವಲ್ಲಿ ವಿಳಂಬಕ್ಕೆ ಯಾವುದೇ ತೃಪ್ತಿದಾಯಕ ಕಾರಣವನ್ನು ಸಂತ್ರಸ್ತೆ ನೀಡಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ತನ್ನ ಮನೆಯನ್ನು ಕೆಡವಿದಕ್ಕೆ ಸೇಡು ತೀರಿಸಿಕೊಳ್ಳಲು ಅನ್ಸಾರಿ ವಿರುದ್ಧ ಮಹಿಳೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಅನ್ಸಾರಿ, ಸಂತ್ರಸ್ತ ನರೆಯ ಮಹಿಳೆ ಅಕ್ರಮ ಮಾದಕವಸ್ತು ವ್ಯಾಪಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿದ ನಂತರ ಪುರಸಭೆ ಅಧಿಕಾರಿಗಳು ಆ ಮಹಿಳೆಯ ಮನೆಯನ್ನು ಕೆಡವಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com