ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರ ಸ್ಕಾಲರ್‌ಶಿಪ್‌ ಕಡಿತ: ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

ನರೇಂದ್ರ ಮೋದಿ ಅವರೇ, ನಿಮ್ಮ ಸರ್ಕಾರ ದೇಶದ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ವರ್ಗಗಳ ಯುವಕರ ವಿದ್ಯಾರ್ಥಿವೇತನವನ್ನು ಕಿತ್ತುಕೊಂಡಿದೆ
Mallikarjuna Kharge
ಮಲ್ಲಿಕಾರ್ಜುನ ಖರ್ಗೆ
Updated on

ನವದೆಹಲಿ: ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಯುವ ಜನಾಂಗದ ವಿದ್ಯಾರ್ಥಿ ವೇತನವನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ “ಸಬ್ಕಾ ಸಾಥ್, ಸಬ್ಕಾ ವಿಕಾಸ್” ಘೋಷಣೆಯು ದುರ್ಬಲ ವರ್ಗಗಳ ಆಶೋತ್ತರಗಳನ್ನು ಅಣಕಿಸುತ್ತದೆ ಎಂದು ಹೇಳಿದ್ದಾರೆ. ದೇಶದ ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಅವಕಾಶಗಳು ಸಿಗುವವರೆಗೆ ಮತ್ತು ಅವರ ಕೌಶಲ್ಯಗಳನ್ನು ಪ್ರೋತ್ಸಾಹಿಸುವವರೆಗೆ ಯುವಕರಿಗೆ ಉದ್ಯೋಗಗಳನ್ನು ಹೇಗೆ ಹೆಚ್ಚಿಸಲಾಗುತ್ತದೆ ಎಂದು ಅವರು ಕೇಳಿದ್ದಾರೆ.

"ನರೇಂದ್ರ ಮೋದಿ ಅವರೇ, ನಿಮ್ಮ ಸರ್ಕಾರ ದೇಶದ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ವರ್ಗಗಳ ಯುವಕರ ವಿದ್ಯಾರ್ಥಿವೇತನವನ್ನು ಕಿತ್ತುಕೊಂಡಿದೆ ಎಂದು ಖರ್ಗೆ ಹಿಂದಿಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Mallikarjuna Kharge
ಮೆಟ್ರಿಕ್ ನಂತರದ ಎಸ್ ಸಿ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಉಚಿತ ಸ್ಕಾಲರ್ ಶಿಪ್ ಇ-ಕಾರ್ಡ್ ವಿತರಣೆ

ಈ ನಾಚಿಕೆಗೇಡಿನ ಸರ್ಕಾರಿ ಅಂಕಿಅಂಶಗಳು ಮೋದಿ ಸರ್ಕಾರ ಎಲ್ಲಾ ಸ್ಕಾಲರ್ ಶಿಪ್ ಗಳಲ್ಲಿ ಫಲಾನುಭವಿಗಳನ್ನು ಗಮನಾರ್ಹವಾಗಿ ಇಳಿಕೆ ಮಾಡಿರುವುದು ಮಾತ್ರವಲ್ಲದೇ ವರ್ಷದಿಂದ ವರ್ಷಕ್ಕೆ ಸರಾಸರಿ ಶೇ. 25 ರಷ್ಟು ಕಡಿಮೆ ಹಣವನ್ನು ಖರ್ಚು ಮಾಡಿದೆ ಎಂದು ಆರೋಪಿಸಿದ್ದಾರೆ.

SC, ST, OBC ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕಡಿಮೆಯಾಗಿರುವ ವಿದ್ಯಾರ್ಥಿ ವೇತನದ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com