ಐಐಐಟಿ ಭಾಷಣದ ವೇಳೆ 'ಅಶ್ಲೀಲ ವಿಡಿಯೋ' ಪ್ರಸಾರ: ರಾಹುಲ್ ಆಪ್ತ ಸ್ಯಾಮ್ ಪಿತ್ರೋಡಾಗೆ ಮುಜುಗರ, Video Viral!

ಇತ್ತೀಚೆಗೆ ನಾನು ಐಐಟಿ ರಾಂಚಿಯ ವಿದ್ಯಾರ್ಥಿಗಳೊಂದಿಗೆ (ಆನ್‌ಲೈನ್) ಮಾತನಾಡುತ್ತಿದ್ದೆ. ಇದ್ದಕ್ಕಿದ್ದಂತೆ ಯಾರೋ ಅದನ್ನು ಹ್ಯಾಕ್ ಮಾಡಿ ಅಶ್ಲೀಲ ವಿಷಯವನ್ನು ತೋರಿಸಲು ಪ್ರಾರಂಭಿಸಿದರು. ಅದನ್ನು ನಿಲ್ಲುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇರಲಿಲ್ಲ.
ಸ್ಯಾಮ್ ಪಿತ್ರೋಡಾ
ಸ್ಯಾಮ್ ಪಿತ್ರೋಡಾ
Updated on

ಹಿರಿಯ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು ರಾಂಚಿಯ ಐಐಐಟಿಯ ವಿದ್ಯಾರ್ಥಿಗಳನ್ನು ವರ್ಚುವಲ್ ವಿಡಿಯೋ ಮೂಲಕ ಭಾಷಣ ಮಾತನಾಡುತ್ತಿದ್ದಾಗ, ಯಾರೋ ಅವರ ಲಿಂಕ್ ಅನ್ನು ಹ್ಯಾಕ್ ಮಾಡಿ ಅಶ್ಲೀಲ ವಿಷಯವನ್ನು ಪ್ರಸಾರ ಮಾಡಿದ್ದಾರೆ. ಇದರಿಂದಾಗಿ ಆಯೋಜಕರು ಅದನ್ನು ಸ್ಥಗಿತಗೊಳಿಸಬೇಕಾಯಿತು ಎಂದು ಆರೋಪಿಸಿದ್ದಾರೆ. 'ಸ್ಯಾಮ್ ಜೊತೆ ಸಂವಾದ: ಗೊಂದಲದಲ್ಲಿ ಗಾಂಧಿಯವರ ಪ್ರಸ್ತುತತೆ' ಎಂಬ ಆನ್‌ಲೈನ್ ಚರ್ಚೆಯ ಸಂದರ್ಭದಲ್ಲಿ ಪಿಟ್ರೋಡಾ ಈ ಹೇಳಿಕೆ ನೀಡಿದ್ದಾರೆ. ಈ ಚರ್ಚೆಯನ್ನು ಶನಿವಾರ 'X' ನಲ್ಲಿ ಪೋಸ್ಟ್ ಮಾಡಲಾಗಿದೆ.

'ಇತ್ತೀಚೆಗೆ ನಾನು ಐಐಟಿ ರಾಂಚಿಯ ವಿದ್ಯಾರ್ಥಿಗಳೊಂದಿಗೆ (ಆನ್‌ಲೈನ್) ಮಾತನಾಡುತ್ತಿದ್ದೆ. ಇದ್ದಕ್ಕಿದ್ದಂತೆ ಯಾರೋ ಅದನ್ನು ಹ್ಯಾಕ್ ಮಾಡಿ ಅಶ್ಲೀಲ ವಿಷಯವನ್ನು ತೋರಿಸಲು ಪ್ರಾರಂಭಿಸಿದರು. ಅದನ್ನು ನಿಲ್ಲುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇರಲಿಲ್ಲ. ಇದೇನಾ ಪ್ರಜಾಪ್ರಭುತ್ವ? ಇದು ನ್ಯಾಯವೇ?' ಎಂದು ಸ್ಯಾಮ್ ಪಿತ್ರೋಡಾ ಟೀಕಿಸಿದರು. ವೀಡಿಯೊದಲ್ಲಿ ಪಿತ್ರೋಡಾ ತಪ್ಪಾಗಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT) ರಾಂಚಿಯನ್ನು IIT ರಾಂಚಿ ಎಂದು ಉಲ್ಲೇಖಿಸಿದ್ದಾರೆ.

'ಶಿಕ್ಷಣ ಸಂಸ್ಥೆಗಳು ತಮ್ಮ ಪ್ರಜಾಪ್ರಭುತ್ವದ ಸ್ವರೂಪವನ್ನು ಕಳೆದುಕೊಳ್ಳುತ್ತಿವೆ'

ಶಿಕ್ಷಣ ಸಂಸ್ಥೆಗಳು ಈಗ ತಮ್ಮ ಪ್ರಜಾಪ್ರಭುತ್ವ ಮತ್ತು ಸ್ವತಂತ್ರ ಸ್ವರೂಪವನ್ನು ಕಳೆದುಕೊಳ್ಳುತ್ತಿವೆ ಎಂಬುದನ್ನು ಈ ಘಟನೆ ತೋರಿಸುತ್ತದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದರು. ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಇಂತಹ ಘಟನೆಗಳು ಶೈಕ್ಷಣಿಕ ಚರ್ಚೆಗಳ ಸಮಗ್ರತೆ ಮತ್ತು ಮುಕ್ತ ವಿಚಾರ ವಿನಿಮಯವನ್ನು ಹಾಳು ಮಾಡುತ್ತವೆ ಎಂದು ಹೇಳಿದರು.

ಸ್ಯಾಮ್ ಪಿತ್ರೋಡಾ
ನಿಲ್ದಾಣದಲ್ಲಿ ನಿಂತಿದ್ದ ರಾಜ್ಯ ಸಾರಿಗೆ ಬಸ್ಸಿನೊಳಗೆ ಮಹಿಳೆ ಮೇಲೆ ಅತ್ಯಾಚಾರ; ಆರೋಪಿ ಪರಾರಿ!

ಆದಾಗ್ಯೂ, ಈ ವಿಷಯದಲ್ಲಿ ಪಿತ್ರೋಡಾ ಯಾವುದೇ ದೂರು ದಾಖಲಿಸಿದ್ದಾರೋ ಇಲ್ಲವೋ ಎಂಬುದರ ಕುರಿತು ವಿವರಣೆ ನೀಡಲಿಲ್ಲ. ಆದರೆ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅನೇಕ ಬಳಕೆದಾರರು ಪಿತ್ರೋಡಾ ಅವರ X ಕುರಿತಾದ ಹೇಳಿಕೆಗಳನ್ನು ಪ್ರಶ್ನಿಸಿದರು ಮತ್ತು IIIT ರಾಂಚಿಯನ್ನು IIT Ranch ಎಂದು ತಪ್ಪಾಗಿ ಉಲ್ಲೇಖಿಸಿದ್ದಕ್ಕಾಗಿ ಅವರನ್ನು ಅಪಹಾಸ್ಯ ಮಾಡಿದರು. ರಾಂಚಿಯಲ್ಲಿ ಐಐಐಟಿ ಇದೆ. ಆದರೆ ಐಐಟಿ ಇಲ್ಲ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com