
ನವದೆಹಲಿ: ಅಂತಾರಾಷ್ಟ್ರೀಯ ಬಾಕ್ಸರ್ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಸವೀತಿ ಬೂರಾ ತಮ್ಮ ಪತಿ, ಕಬಡ್ಡಿ ತಂಡದ ಮಾಜಿ ನಾಯಕ ದೀಪಕ್ ಹೂಡಾ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ.
ದೀಪಕ್ ಹೂಡ ವರದಕ್ಷಿಣೆ ಕಿರುಕುಳವಷ್ಟೇ ಅಲ್ಲದೇ ದೈಹಿಕವಾಗಿಯೂ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸವೀತಿ ಬೂರಾ ದೂರು ನೀಡಿದ್ದಾರೆ.
ವಿವಾಹದ ಸಂದರ್ಭದಲ್ಲಿ ದೀಪಕ್ ಹೂಡಾ ಕುಟುಂಬಕ್ಕೆ 1 ಕೋಟಿ ರೂಪಾಯಿ, ಫಾರ್ಚೂನರ್ ಕಾರನ್ನು ವರದಕ್ಷಿಣೆಯಾಗಿ ನೀಡಲಾಗಿದೆ. ಇಷ್ಟಾದರೂ ಇನ್ನೂ ಹೆಚ್ಚು ವರದಕ್ಷಿಣೆಗೆ ದೀಪಕ್ ಹೂಡಾ ಪೀಡಿಸುತ್ತಿದ್ದು, ಹಲ್ಲೆ ಮಾಡುತ್ತಿದ್ದಾರೆ ಎಂದು ಬೂರಾ ಆರೋಪಿಸಿದ್ದಾರೆ. ದೀಪಕ್ ಹೂಡಾ- ಸವೀತಿ ಬೂರಾ 3 ವರ್ಷಗಳ ಹಿಂದೆ ವಿವಾಹವಾಗಿದ್ದರು.
ಸವೀತಿ ಬೂರಾ ದೂರಿನ ಆಧಾರದಲ್ಲಿ ದೀಪಕ್ ಹೂಡಾ, ಹೂಡಾ ಸಹೋದರಿ ಪೂನಮ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪೊಲೀಸ್ ಮಾಹಿತಿಯ ಪ್ರಕಾರ ಹೂಡಾ ಅವರಿಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿಲ್ಲ. ಬೂರಾ ಕೋರ್ಟ್ ನಲ್ಲಿ ವಿಚ್ಛೇದನ ಪ್ರಕರಣವನ್ನೂ ಸಲ್ಲಿಸಿದ್ದಾರೆ.
Advertisement