ಅಕ್ರಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ಗಡುವು ವಿಸ್ತರಿಸಿದ ಮಣಿಪುರ ರಾಜ್ಯಪಾಲ
ಗುವಾಹಟಿ: ಲೂಟಿ ಮಾಡಿದ ಮತ್ತು ಅಕ್ರಮವಾಗಿ ಹೊಂದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಏಳು ದಿನಗಳ ಒಳಗೆ ಸ್ವಯಂಪ್ರೇರಿತವಾಗಿ ಸರ್ಕಾರಕ್ಕೆ ಒಪ್ಪಿಸುವಂತೆ ಗಡುವು ನೀಡಿದ್ದ ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಶುಕ್ರವಾರ ಗಡುವನ್ನು ಮತ್ತೊಂದು ವಾರ ವಿಸ್ತರಿಸಿದ್ದಾರೆ.
ಮಾರ್ಚ್ 6 ರಂದು ಸಂಜೆ 4 ಗಂಟೆಯೊಳಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಬೇಕು. ಈ ವಿಸ್ತೃತ ಗಡುವು ಮುಗಿದ ನಂತರ ಪೊಲೀಸರು ಮತ್ತು ಭದ್ರತಾ ಪಡೆಗಳು ವ್ಯಾಪಕ ಕಾರ್ಯಾಚರಣೆಗಳನ್ನು ಪ್ರಾರಂಭಿಸುತ್ತಾರೆ ಎಂದು ಭಲ್ಲಾ ಎಚ್ಚರಿಸಿದ್ದಾರೆ.
ಗುರುವಾರ ಕೊನೆಗೊಂಡ ಹಿಂದಿನ ಏಳು ದಿನಗಳ ಗಡುವಿನ ಕೊನೆಯ ದಿನದಂದು, ವಿವಿಧ ಕಣಿವೆ ಮತ್ತು ಬೆಟ್ಟದ ಜಿಲ್ಲೆಗಳಲ್ಲಿ ಒಟ್ಟು 355 ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಗ್ರೆನೇಡ್‌ಗಳು, ಗುಂಡು ನಿರೋಧಕಗಳು, ಹೆಲ್ಮೆಟ್‌ಗಳು ಮತ್ತು ಇತರ ಉಪಕರಣಗಳನ್ನು ಒಪ್ಪಿಸಲಾಗಿದೆ.
ಫೆಬ್ರವರಿ 20 ರಂದು ಎಲ್ಲಾ ಸಮುದಾಯಗಳ ಜನರು, ವಿಶೇಷವಾಗಿ ಕಣಿವೆ ಮತ್ತು ಬೆಟ್ಟಗಳಲ್ಲಿರುವ ಯುವಕರು ಲೂಟಿ ಮಾಡಿದ ಮತ್ತು ಅಕ್ರಮವಾಗಿ ಹಿಡಿದಿರುವ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸ್ವಯಂಪ್ರೇರಿತವಾಗಿ ಪೊಲೀಸರಿಗೆ ಒಪ್ಪಿಸುವಂತೆ ಮನವಿ ಮಾಡಿದ ನಂತರ ಸಕಾರಾತ್ಮಕ ಫಲಿತಾಂಶ ನೀಡಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
"ಸ್ವಯಂಪ್ರೇರಿತವಾಗಿ ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ನೀಡಲಾದ ಏಳು ದಿನಗಳ ಗಡುವು ಮುಗಿದ ನಂತರ, ಕಣಿವೆ ಮತ್ತು ಬೆಟ್ಟ ಪ್ರದೇಶಗಳಿಂದ ಶಸ್ತ್ರಾಸ್ತ್ರ ಒಪ್ಪಿಸುವ ಅವಧಿಯನ್ನು ವಿಸ್ತರಿಸುವಂತೆ ಕೇಳಿಕೊಳ್ಳಲಾಗಿದೆ. ನಾನು ವಿನಂತಿಯನ್ನು ಪರಿಗಣಿಸಿದ್ದೇನೆ ಮತ್ತು ಅಂತಹ ಶಸ್ತ್ರಾಸ್ತ್ರಗಳನ್ನು ಸ್ವಯಂಪ್ರೇರಿತವಾಗಿ ಒಪ್ಪಿಸಲು ಮಾರ್ಚ್ 06, 2025 ರ ಸಂಜೆ 4 ಗಂಟೆಯವರೆಗೆ ಗಡುವು ವಿಸ್ತರಿಸಲು ನಿರ್ಧರಿಸಿದ್ದೇನೆ" ಎಂದು ಭಲ್ಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ