2025 'ಸುಧಾರಣೆಗಳ ವರ್ಷ': ರಕ್ಷಣಾ ಸಚಿವಾಲಯ ಘೋಷಣೆ

2025 ರಲ್ಲಿ ಸೈಬರ್ ಮತ್ತು ಬಾಹ್ಯಾಕಾಶದಂತಹ ಹೊಸ ಕ್ಷೇತ್ರಗಳು, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಹೈಪರ್‌ಸಾನಿಕ್ ಮತ್ತು ರೊಬೊಟಿಕ್ಸ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಲಾಗುವುದು ಎಂದು ಸಚಿವಾಲಯ ಹೇಳಿದೆ.
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: 2025ನೇ ವರ್ಷವನ್ನು ಸುಧಾರಣೆಗಳ ವರ್ಷವೆಂದು ರಕ್ಷಣಾ ಸಚಿವಾಲಯ ಘೋಷಿಸಿದೆ. ಭಾರತೀಯ ಸೇನೆಯ ಮೂರು ಸೇವೆಗಳ ನಡುವೆ ಜಂಟಿಯಾಗಿ ದೃಢೀಕರಿಸಲು ಸಂಯೋಜಿತ ಥಿಯೇಟರ್ ಕಮಾಂಡ್‌ಗಳ ಸ್ಥಾಪನೆಯನ್ನು ಸುಲಭಗೊಳಿಸುವುದು ಸಚಿವಾಲಯದ ಗುರಿಯಾಗಿದೆ.

ಸುಧಾರಣಾ ಕ್ರಮಗಳನ್ನು ಸಶಸ್ತ್ರ ಪಡೆಗಳನ್ನು ತಾಂತ್ರಿಕವಾಗಿ-ಸುಧಾರಿತ ಯುದ್ಧ-ಸಿದ್ಧ ಪಡೆಯನ್ನಾಗಿ ಪರಿವರ್ತಿಸಲು ಬಹು-ಆಯಾಮದ ಸಮಗ್ರ ಕಾರ್ಯಾಚರಣೆಗಳ ಸಾಮರ್ಥ್ಯವನ್ನು ಹೊಂದಿದೆ ಎಂದು ಅದು ಹೇಳಿದೆ.

2025 ರಲ್ಲಿ ಸೈಬರ್ ಮತ್ತು ಬಾಹ್ಯಾಕಾಶದಂತಹ ಹೊಸ ಕ್ಷೇತ್ರಗಳು, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಹೈಪರ್‌ಸಾನಿಕ್ ಮತ್ತು ರೊಬೊಟಿಕ್ಸ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಲಾಗುವುದು ಎಂದು ಸಚಿವಾಲಯ ಹೇಳಿದೆ.

Representational image
ಮುನ್ನೋಟ 2025: ಹೊಸ ವರ್ಷ ಜಾಗತಿಕ ವಿತ್ತ ಜಗತ್ತಿನ ಮುಂದೆ ಹೊತ್ತು ತರಲಿದೆ ಸವಾಲು ಮತ್ತು ಅವಕಾಶ! (ಹಣಕ್ಲಾಸು)

"ಸುಧಾರಣೆಗಳ ವರ್ಷ" ಸಶಸ್ತ್ರ ಪಡೆಗಳ ಆಧುನೀಕರಣದ ಪಯಣದಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇದು ದೇಶದ ರಕ್ಷಣಾ ಸನ್ನದ್ಧತೆಯಲ್ಲಿ ಅಭೂತಪೂರ್ವ ಪ್ರಗತಿಗೆ ಅಡಿಪಾಯವನ್ನು ಹಾಕುತ್ತದೆ, ಹೀಗಾಗಿ 21 ನೇ ಶತಮಾನದ ಸವಾಲುಗಳ ನಡುವೆ ರಾಷ್ಟ್ರದ ಭದ್ರತೆ ಮತ್ತು ಸಾರ್ವಭೌಮತ್ವವನ್ನು ಖಚಿತಪಡಿಸಿಕೊಳ್ಳಲು ತಯಾರಿ ನಡೆಸುತ್ತದೆ ಎಂದು ಹೇಳಿದರು.

2025ನೇ ವರ್ಷವನ್ನು ಸುಧಾರಣೆಗಳ ವರ್ಷವಾಗಿ ಆಚರಿಸುವ ನಿರ್ಧಾರವನ್ನು ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾದ ಉನ್ನತ ಮಟ್ಟದ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com