ಜಾರ್ಖಂಡ್: ಪತಿ-ಪತ್ನಿ ಜಗಳ, ಬಾವಿಗೆ ಹಾರಿದ ವ್ಯಕ್ತಿ ರಕ್ಷಿಸಲು ಹೋದ ನಾಲ್ಕು ಮಂದಿ ಸೇರಿ ಐವರು ಸಾವು
ಜಾರ್ಖಂಡ್ : ಹೆಂಡತಿ ಜೊತೆ ಜಗಳದ ನಂತರ ಕೋಪದಿಂದ ಪತಿ ಬಾವಿಗೆ ಹಾರಿದ ವ್ಯಕ್ತಿಯನ್ನು ರಕ್ಷಿಸಲು ಹೋದ ನಾಲ್ವರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ನಡೆದಿದೆ.
ಸುಂದರ್ ಕುರ್ಮಾಲಿ (27) ಮೃತ ವ್ಯಕ್ತಿ. ಈತ ತನ್ನ ಪತ್ನಿ ರೂಪಾ ದೇವಿಯೊಂದಿಗೆ ಮನೆಯಲ್ಲಿ ಜಗಳವಾಡಿದ್ದ. ಕುಪಿತಗೊಂಡ ಸುಂದರ್ ತನ್ನ ಬೈಕ್ ವೇಗವಾಗಿ ಚಲಾಯಿಸಿ ಬೈಕ್ ಅನ್ನು ಬಾವಿಗೆ ತಳ್ಳಿದ್ದಾನೆ. ಸ್ವಲ್ಪ ಹೊತ್ತಿನ ನಂತರ ಬೈಕ್ ತೆಗೆಯಲು ಬಾವಿಗೆ ಇಳಿದ. ಆದರೆ ಅವನು ಮರಳಿ ಬರಲೇ ಇಲ್ಲ.
ಗಾಬರಿಗೊಂಡ ಪತ್ನಿ ರೂಪಾ ಪತಿಯನ್ನು ರಕ್ಷಿಸುವಂತೆ ಕಿರುಚಿದ್ದಾರೆ. ನೆರೆಮನೆಯವರು ಸುಂದರ್‌ನನ್ನು ರಕ್ಷಿಸಲು ನಾಲ್ವರು ಒಬ್ಬರ ಹಿಂದೆ ಒಬ್ಬರು ಬಾವಿಗೆ ಇಳಿದಿದ್ದಾರೆ. ಈ ಐವರು ಬಾವಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ರಾಹುಲ್ ಕರ್ಮಾಲಿ, ವಿನಯ್ ಕರ್ಮಾಲಿ, ಪಂಕಜ್ ಕರ್ಮಾಲಿ ಮತ್ತು ಸೂರಜ್ ಭುಯಾನ್ ಎಂದು ಪೊಲೀಸರು ಗುರುತಿಸಿದ್ದಾರೆ. ಮೃತರೆಲ್ಲರೂ 25 ರಿಂದ 28 ವರ್ಷದೊಳಗಿನವರು.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತ ದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತನಿಖೆಯ ವೇಳೆ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ