
ಟಿಬೆಟ್: ಇಂದು ಮಂಗಳವಾರ ಬೆಳಗ್ಗೆ ಟಿಬೆಟ್ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಮೃತಪಟ್ಟವರ ಸಂಖ್ಯೆ 126ಕ್ಕೆ ಏರಿಕೆಯಾಗಿದ್ದು 188 ಜನರು ಗಾಯಗೊಂಡಿದ್ದಾರೆ.
ರಿಕ್ಟರ್ ಮಾಪಕದಲ್ಲಿ 6.8 ರ ತೀವ್ರತೆ ದಾಖಲಾಗಿದ್ದು, 10 ಕಿಮೀ (6.2 ಮೈಲುಗಳು) ಆಳದಲ್ಲಿ ಸ್ಥಳೀಯ ಕಾಲಮಾನ ಬೆಳಗ್ಗೆ 9:05 ಗಂಟೆಗೆ (01:05 GMT) ಭೂಕಂಪ ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ ಭೂಕಂಪದ ತೀವ್ರತೆ 7.1 ಆಗಿದೆ. ಇಂದು ಮಧ್ಯಾಹ್ನ ವೇಳೆಗೆ ಮೃತಪಟ್ಟವರ ಸಂಖ್ಯೆ 126ಕ್ಕೆ ಏರಿಕೆಯಾಗಿದ್ದು, 188 ಜನರು ಗಾಯಗೊಂಡಿದ್ದಾರೆ ಎಂದು ಚೀನಾ ರಾಜ್ಯ ಮಾಧ್ಯಮ ವರದಿ ಮಾಡಿದೆ.
ಭೂಕಂಪದ ಪ್ರಭಾವವಾಗಿ, ನೆರೆಯ ನೇಪಾಳದ ರಾಜಧಾನಿ ಕಠ್ಮಂಡು ಮತ್ತು ಭಾರತದ ಉತ್ತರ ಭಾಗಗಳಲ್ಲಿ, ವಿಶೇಷವಾಗಿ ಬಿಹಾರದಲ್ಲಿ ಕಂಪನಗಳು ಕಂಡುಬಂದವು, ಅಲ್ಲಿ ಜನರು ತಮ್ಮ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳಿಂದ ಹೊರಗೆ ಓಡುತ್ತಿರುವುದನ್ನು ಕಾಣಬಹುದು. ಆದರೆ, ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಬಿಹಾರ ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ, ಭಾರತ-ನೇಪಾಳ ಗಡಿಯಲ್ಲಿರುವ ಪಾಟ್ನಾ, ಮಧುಬನಿ, ಶೆಯೋಹರ್, ಮುಂಗೇರ್, ಸಮಸ್ತಿಪುರ್, ಮುಜಾಫರ್‌ಪುರ್, ಕತಿಹಾರ್, ದರ್ಬಂಗಾ, ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್ ಮತ್ತು ಹಲವಾರು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ. ಭೂಕಂಪ ಸಂಭವಿಸಿದಾಗ ಕತಿಹಾರ್, ಪೂರ್ಣೆಯಾ, ಶಿಯೋಹರ್, ದರ್ಬಂಗಾ ಮತ್ತು ಸಮಸ್ತಿಪುರದಲ್ಲಿ ಜನರು ಮನೆಗಳಿಂದ ಹೊರಬಂದಿದ್ದಾರೆ.
ಭೂಕಂಪನವು ಬೆಳಗ್ಗೆ 6:35 ಕ್ಕೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿದೆ. 4.7 ರ ತೀವ್ರತೆಯ ಎರಡನೇ ಭೂಕಂಪವು 10 ಕಿಮೀ ಆಳದಲ್ಲಿ 7:02 ಕ್ಕೆ ದಾಖಲಾಗಿದ್ದರೆ, 7:07 ಕ್ಕೆ 4.9ರ ತೀವ್ರತೆಯ ಮೂರನೇ ಭೂಕಂಪವು 30 ಕಿಮೀ ಆಳದಲ್ಲಿ ದಾಖಲಾಗಿದೆ.
ಟಿಬೆಟ್ ಪ್ರದೇಶದ ಎತ್ತರದ ಕೌಂಟಿಯು ಸುಮಾರು 62,000 ಜನರಿಗೆ ನೆಲೆಯಾಗಿದೆ ಮತ್ತು ಮೌಂಟ್ ಎವರೆಸ್ಟ್‌ನ ಚೀನಾದ ಬದಿಯಲ್ಲಿದೆ. ಈ ಪ್ರದೇಶದಲ್ಲಿ ಭೂಕಂಪಗಳು ಸಾಮಾನ್ಯವಾಗಿದ್ದರೂ, ಇಂದಿನ ಭೂಕಂಪವು ಕಳೆದ ಐದು ವರ್ಷಗಳಲ್ಲಿ 200-ಕಿಲೋಮೀಟರ್ ತ್ರಿಜ್ಯದಲ್ಲಿ ದಾಖಲಾದ ಅತ್ಯಂತ ಶಕ್ತಿಶಾಲಿಯಾಗಿದೆ ಎಂದು ಸಿಇಎನ್ ಸಿ ಹೇಳಿದೆ.
ನೇಪಾಳವು ಪ್ರಮುಖ ಭೌಗೋಳಿಕ ದೋಷದ ರೇಖೆಯ ಮೇಲೆ ನೆಲೆಸಿದ್ದು, ಅಲ್ಲಿ ಭಾರತೀಯ ಟೆಕ್ಟೋನಿಕ್ ಪ್ಲೇಟ್ ಯುರೇಷಿಯನ್ ಪ್ಲೇಟ್‌ಗೆ ತಳ್ಳುತ್ತದೆ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪ್ರತಿಕ್ರಿಯಿಸಿದ್ದಾರೆ. ಅವಶೇಷಗಳಡಿ ಸಿಲುಕಿರುವ ಜನರನ್ನು ಹುಡುಕಲು ಸುಮಾರು 1,500 ಅಗ್ನಿಶಾಮಕ ಮತ್ತು ರಕ್ಷಣಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ ಎಂದು ತುರ್ತು ನಿರ್ವಹಣಾ ಸಚಿವಾಲಯ ತಿಳಿಸಿದೆ.
ಪ್ರವಾಸಿಗರಿಗಾಗಿ ಮೌಂಟ್ ಕೊಮೊಲಾಂಗ್ಮಾ ಎಂದು ಕರೆಯಲ್ಪಡುವ ಮೌಂಟ್ ಎವರೆಸ್ಟ್‌ನ ತನ್ನ ಬದಿಯ ರಮಣೀಯ ಪ್ರದೇಶಗಳನ್ನು ಚೀನಾ ಮುಚ್ಚಿದೆ.
2015 ರಲ್ಲಿ, ನೇಪಾಳದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದಾಗ ಸುಮಾರು 9,000 ಜನರು ಮೃತಪಟ್ಟು, 22,000 ಕ್ಕೂ ಹೆಚ್ಚು ಜನರು ಗಾಯಗೊಂಡರು, ಅರ್ಧ ಮಿಲಿಯನ್ ಮನೆಗಳು ನಾಶವಾಗಿದ್ದವು. ಕಳೆದ ವರ್ಷ ಜನವರಿಯಲ್ಲಿ ಪರ್ವತಮಯ ಚೀನಾ-ಕಿರ್ಗಿಸ್ತಾನ್ ಗಡಿಯಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿ ಮೂವರು ಮೃತಪಟ್ಟು ಡಜನ್ ಗಟ್ಟಲೆ ಮಂದಿ ಗಾಯಗೊಂಡಿದ್ದರು.
ವಾಯುವ್ಯ ಚೀನಾದಲ್ಲಿ ಡಿಸೆಂಬರ್ 2023 ರಲ್ಲಿ ಸಂಭವಿಸಿದ ಭೂಕಂಪವು 148 ಜನರನ್ನು ಬಲಿತೆಗೆದುಕೊಂಡಿತ್ತು. ನೈಋತ್ಯ ಯುನ್ನಾನ್ ಪ್ರಾಂತ್ಯದಲ್ಲಿ 600 ಕ್ಕೂ ಹೆಚ್ಚು ಜನರು ಮೃತಪಟ್ಟಿತ್ತು. 2014 ರಿಂದ ಚೀನಾದ ಅತ್ಯಂತ ಮಾರಕವಾಗಿದೆ.
ಡಿಂಗ್ರಿಯು ವಿಶ್ವದ ಅತಿ ಎತ್ತರದ ಶಿಖರದ ಮೂಲ ಶಿಬಿರಕ್ಕೆ ನೆಲೆಯಾಗಿದೆ. ಪ್ರೇಕ್ಷಣೀಯ ಪ್ರದೇಶದಲ್ಲಿ ಹೊಟೇಲ್ ಕಟ್ಟಡಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಹಾಗೇ ಉಳಿದಿವೆ ಎಂದು ಡಿಂಗ್ರಿ ಕಲ್ಚರ್ ಮತ್ತು ಟೂರಿಸಂ ಬ್ಯೂರೋವನ್ನು ಉಲ್ಲೇಖಿಸಿ ಸರ್ಕಾರಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆದಾಗ್ಯೂ, ಡಿಂಗ್ರಿಯಲ್ಲಿರುವ ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ವಾತಾವರಣ ಮತ್ತು ಪರಿಸರ ಸಂಶೋಧನೆಗಾಗಿ ಕೊಮೊಲಾಂಗ್ಮಾ ನಿಲ್ದಾಣವು ವಿದ್ಯುತ್ ಕಡಿತವನ್ನು ಅನುಭವಿಸುತ್ತಿದೆ.
Advertisement