ಪ್ರಬಲ ಭೂಕಂಪ: ಟಿಬೆಟ್ ನಲ್ಲಿ 53 ಮಂದಿ ಸಾವು; ನೇಪಾಳದ ಕಠ್ಮಂಡು, ಉತ್ತರ ಭಾರತ ಮೇಲೆ ಪ್ರಭಾವ

ಈ ಪ್ರದೇಶದಲ್ಲಿ ಭೂಕಂಪಗಳು ಸಾಮಾನ್ಯವಾಗಿದ್ದರೂ, ಇಂದಿನ ಭೂಕಂಪವು ಕಳೆದ ಐದು ವರ್ಷಗಳಲ್ಲಿ 200-ಕಿಲೋಮೀಟರ್ ತ್ರಿಜ್ಯದಲ್ಲಿ ದಾಖಲಾದ ಅತ್ಯಂತ ಶಕ್ತಿಶಾಲಿ ಕಂಪನವಾಗಿದೆ.
ನೇಪಾಳದ ಕಠ್ಮಂಡುವಿನಲ್ಲಿ ಇಂದು ಭೂಕಂಪದ ಅನುಭವವಾಗಿ ನೇಪಾಳದ ಜನರು ಮನೆಗಳಿಂದ ಹೊರಬಂದರು.
ನೇಪಾಳದ ಕಠ್ಮಂಡುವಿನಲ್ಲಿ ಇಂದು ಭೂಕಂಪದ ಅನುಭವವಾಗಿ ನೇಪಾಳದ ಜನರು ಮನೆಗಳಿಂದ ಹೊರಬಂದರು.
Updated on

ಕಠ್ಮಂಡು: ಮಂಗಳವಾರ ಬೆಳಗ್ಗೆ ಟಿಬೆಟ್ ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 53 ಮಂದಿ ಮೃತಪಟ್ಟು 62 ಮಂದಿ ಗಾಯಗೊಂಡಿದ್ದಾರೆ. ಚೀನಾದ ಮಾಧ್ಯಮಗಳ ಪ್ರಕಾರ, ಭೂಕಂಪವು ನೆರೆಯ ನೇಪಾಳದ ರಾಜಧಾನಿ ಕಠ್ಮಂಡು ಮತ್ತು ಭಾರತದ ಉತ್ತರ ಭಾಗಗಳಲ್ಲಿ ಭೂಕಂಪನದೊಂದಿಗೆ ಟಿಬೆಟ್‌ನಲ್ಲಿ ಅನೇಕ ಕಟ್ಟಡಗಳ ಕುಸಿತಕ್ಕೆ ಕಾರಣವಾಯಿತು.

ಚೀನಾ ಭೂಕಂಪ ನೆಟ್‌ವರ್ಕ್ ಸೆಂಟರ್ (ಸಿಇಎನ್‌ಸಿ) ಪ್ರಕಾರ, ನೇಪಾಳದ ಗಡಿಯ ಸಮೀಪ 7.1 ರ ತೀವ್ರತೆಯೊಂದಿಗೆ ಡಿಂಗ್ರಿ ಕೌಂಟಿಯಲ್ಲಿ ಬೆಳಿಗ್ಗೆ 6:35 ಕ್ಕೆ ಭೂಕಂಪ ಸಂಭವಿಸಿದೆ. ಬಿಹಾರದಲ್ಲಿಯೂ ಭೂಮಿ ಕಂಪಿಸಿದ ಅನುಭವ ಜನತೆಗೆ ಆಗಿದೆ. ಜನರು ತಮ್ಮ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳ ಹೊರಗೆ ಓಡುತ್ತಿರುವ ದೃಶ್ಯ ಕಂಡುಬಂತು. ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಈ ಪ್ರದೇಶದಲ್ಲಿ ಭೂಕಂಪಗಳು ಸಾಮಾನ್ಯವಾಗಿದ್ದರೂ, ಇಂದಿನ ಭೂಕಂಪವು ಕಳೆದ ಐದು ವರ್ಷಗಳಲ್ಲಿ 200-ಕಿಲೋಮೀಟರ್ ತ್ರಿಜ್ಯದಲ್ಲಿ ದಾಖಲಾದ ಅತ್ಯಂತ ಶಕ್ತಿಶಾಲಿ ಕಂಪನವಾಗಿದೆ. ನೇಪಾಳವು ಪ್ರಮುಖ ಭೌಗೋಳಿಕ ದೋಷದ ರೇಖೆಯ ಮೇಲೆ ನೆಲೆಸಿದೆ, ಅಲ್ಲಿ ಭಾರತೀಯ ಟೆಕ್ಟೋನಿಕ್ ಪ್ಲೇಟ್ ಯುರೇಷಿಯನ್ ಪ್ಲೇಟ್‌ಗೆ ತಳ್ಳಿ ಹಿಮಾಲಯವನ್ನು ರೂಪಿಸುತ್ತದೆ.

ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ, ಹಲವು ಕಟ್ಟಡಗಳು ನೆಲಕ್ಕುರುಳಿವೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಚೀನಾದ ಕ್ಸಿನ್‌ಹುವಾ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಭೂಕಂಪದ ನಂತರದ ಅವಶೇಷಗಳ ನಡುವೆ ಟಿಬೆಟ್‌ನಲ್ಲಿ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಮನೆಗಳಲ್ಲಿ ಸಿಲುಕಿಕೊಂಡಿದ್ದಾರೆ.

ಅವರನ್ನು ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ. ಮತ್ತೊಂದೆಡೆ, ಚೀನಾದ ಸ್ಟೇಟ್ ಕೌನ್ಸಿಲ್, ಟಿಬೆಟ್ ಪ್ರದೇಶಕ್ಕೆ ರಾಷ್ಟ್ರೀಯ ಕಾರ್ಯಪಡೆಯನ್ನು ಕಳುಹಿಸಿದೆ ಮತ್ತು ಲೆವೆಲ್-3 ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಚೀನಾದ ಸಿಸಿಟಿವಿ ಸುದ್ದಿ ವೆಬ್‌ಸೈಟ್ ಹೇಳಿದೆ.

ಒಟ್ಟು ಆರು ಬಾರಿ ಭೂಕಂಪನ

ಒಂದೂವರೆ ಗಂಟೆ ಅವಧಿಯೊಳಗೆ ಆರು ಬಾರಿ ಭೂಕಂಪ ಸಂಭವಿಸಿವೆ. ಬೆಳಗ್ಗೆ 6:35ಕ್ಕೆ ಸಂಭವಿಸಿದ 7.1 ತೀವ್ರತೆಯ ಭೂಕಂಪದ ನಂತರವೂ ಕಂಪನಗಳು ನಿಂತಿಲ್ಲ. ಒಂದರ ಹಿಂದೆ ಒಂದರಂತೆ ಭೂಕಂಪನದಿಂದ ಜನರು ಭಯಭೀತರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com