ಮೀರತ್‌: ದಂಪತಿ, ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ!

ಮನೆಗೆ ಹೊರಗಿನಿಂದ ಬೀಗ ಹಾಕಲಾಗಿದ್ದು ಛಾವಣಿ ಮೂಲಕ ಒಳಗೆ ಹೋಗಿ ನೋಡಿದಾಗ ಮೃತ ದೇಹಗಳು ಪತ್ತೆಯಾದವು. ಮೂರು ಮಕ್ಕಳ ಶವಗಳನ್ನು ಮಂಚದ ಬಾಕ್ಸ್‌ನಲ್ಲಿ ಇಡಲಾಗಿತ್ತು.
Police personnel conduct an investigation after at least five members of a family were found dead
ಶವಪತ್ತೆಯಾದ ಮನೆಯಲ್ಲಿ ಪೊಲೀಸರ ಪರಿಶೀಲನೆ
Updated on

ಮೀರತ್ : ಉತ್ತರ ಪ್ರದೇಶದ ಮೀರತ್‌ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಲಿಸಾರಿ ಗೇಟ್ ಪ್ರದೇಶದ ಸೊಹೈಲ್ ಗಾರ್ಡನ್‌ ನಲ್ಲಿರುವ ಮನೆಯಲ್ಲಿ ಒಂದೇ ಕುಟುಂಬದ ಐವರ ಶವ ಪತ್ತೆಯಾಗಿವೆ.

ಒಬ್ಬ ಪುರುಷ, ಒಬ್ಬ ಮಹಿಳೆ ಮತ್ತು ಅವರ ಮೂವರು ಹೆಣ್ಣುಮಕ್ಕಳನ್ನು ಒಳಗೊಂಡ ಕುಟುಂಬವನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ, ಆದಾಗ್ಯೂ, ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಮೃತರನ್ನು ಮೊಯಿನ್, ಅವರ ಪತ್ನಿ ಅಸ್ಮಾ, ಮೂವರು ಹೆಣ್ಣು ಮಕ್ಕಳಾದ ಅಫ್ಸಾ (8), ಅಜೀಜಾ (4) ಮತ್ತು ಅಡಿಬಾ (1) ಎಂದು ಗುರುತಿಸಲಾಗಿದೆ. ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಮೃತದೇಹಗಳನ್ನು ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಮನೆಗೆ ಹೊರಗಿನಿಂದ ಬೀಗ ಹಾಕಲಾಗಿದ್ದು ಛಾವಣಿ ಮೂಲಕ ಒಳಗೆ ಹೋಗಿ ನೋಡಿದಾಗ ಮೃತ ದೇಹಗಳು ಪತ್ತೆಯಾದವು. ಮೂರು ಮಕ್ಕಳ ಶವಗಳನ್ನು ಮಂಚದ ಬಾಕ್ಸ್‌ನಲ್ಲಿ ಇಡಲಾಗಿತ್ತು. ಮೊಹಿನ್‌ ಕಾಲುಗಳನ್ನು ಬೆಡ್‌ಶೀಟ್‌ನಿಂದ ಕಟ್ಟಲಾಗಿತ್ತು ಎಂದು ಹಿರಿಯ ಪೊಲೀಸ್ ಅಧೀಕ್ಷಕ ವಿಪಿನ್ ತಾಡ ತಿಳಿಸಿದ್ದಾರೆ.

Police personnel conduct an investigation after at least five members of a family were found dead
ಛತ್ತೀಸ್‌ಗಢದ ಸುಕ್ಮಾದಲ್ಲಿ ಎನ್​ಕೌಂಟರ್: ಮೂವರು ನಕ್ಸಲರ ಹತ್ಯೆ

ಮನೆಗೆ ಬೀಗ ಜಡಿದಿರುವುದನ್ನು ನೋಡಿದರೆ ಇದು ಹತ್ಯೆ ಎಂದು ತೋರುತ್ತದೆ, ಕುಟುಂಬಕ್ಕೆ ಪರಿಚಿತರಾದವರು ಅಥವಾ ಹಳೆಯ ವೈಷಮ್ಯ ಈ ಘಟನೆಗೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದು, ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಾವಿಗೆ ಕಾರಣ ಇನ್ನೂ ಪತ್ತೆಯಾಗಿಲ್ಲ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ನಿಖರವಾದ ಕಾರಣವನ್ನು ದೃಢಪಡಿಸಲಾಗುವುದು ಎಂದು ಮೀರತ್‌ನ ಎಸ್‌ಎಸ್‌ಪಿ ತಿಳಿಸಿದ್ದಾರೆ.

ಕುಟುಂಬವು ಇತ್ತೀಚೆಗೆ ಇಲ್ಲಿಗೆ ಸ್ಥಳಾಂತರಗೊಂಡಿದ್ದರು, ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಮೊಯಿನ್ ಮತ್ತು ಅವರ ಪತ್ನಿ ಅಸ್ಮಾ ಬುಧವಾರದಿಂದ ಕಾಣೆಯಾಗಿದ್ದರು. ತನ್ನ ಸಹೋದರನ ಬಗ್ಗೆ ತೀವ್ರ ಕಳವಳಗೊಂಡ ಸಲೀಂ ತನ್ನ ಪತ್ನಿಯೊಂದಿಗೆ ಮೊಯಿನ್ ಮನೆಗೆ ಬಂದಿದ್ದರು. ಬಾಗಿಲು ತೆರೆಯಲು ಹಲವು ರೀತಿಯ ಪ್ರಯತ್ನ ಮಾಡಲಾಯಿತು, ಅವರು ನೆರೆಹೊರೆಯವರ ಸಹಾಯದಿಂದ ಮನೆಯೊಳಗೆ ಪ್ರವೇಶಿಸಿದರು. ಮೊಯಿನ್ ಮತ್ತು ಅಸ್ಮಾ ಅವರ ಶವಗಳು ನೆಲದ ಮೇಲೆ ಬಿದ್ದಿರುವುದನ್ನು ಮತ್ತು ಮಕ್ಕಳ ಶವಗಳನ್ನು ಹಾಸಿಗೆಯ ಪೆಟ್ಟಿಗೆಯಲ್ಲಿ ಮರೆಮಾಡಿರುವುದನ್ನು ಅವರು ತಿಳಿದುಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com