Rahul Gandhi at Jai Bapu, Jai Bhim, Jai Samvidhan' public meeting
ಜೈಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ರಾಹುಲ್ ಗಾಂಧಿ

ದೆಹಲಿ ಚುನಾವಣೆ: ಕಾಂಗ್ರೆಸ್ ಪ್ರಚಾರಕ್ಕೆ ರಾಹುಲ್ ಚಾಲನೆ; ಕೇಜ್ರಿವಾಲ್, ಮೋದಿ ವಿರುದ್ಧ ಟೀಕಾ ಪ್ರಹಾರ!

ಮೋದಿ ಅಥವಾ ಕೇಜ್ರಿವಾಲ್ ಅದಾನಿ ವಿರುದ್ಧ ಮಾತನಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ?
Published on

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಕಾಂಗ್ರೆಸ್ ಪ್ರಚಾರಕ್ಕೆ ಚಾಲನೆ ನೀಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಟೀಕಾ ಪ್ರಕಾರ ನಡೆಸಿದರು. ಪ್ರಚಾರ ಮತ್ತು ಸುಳ್ಳು ಭರವಸೆ ನೀಡುವುದರಲ್ಲಿ ಇಬ್ಬರೂ ಒಂದೇ ಎಂದು ಆರೋಪಿಸಿದರು.

ಸೀಲಾಂಪುರದಲ್ಲಿ ಬೃಹತ್ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದೆಹಲಿಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ರಣಕಹಳೆ ಊದಿದರು. ಕೇಜ್ರಿವಾಲ್ ಮತ್ತು ಮೋದಿಯವರು ಚುನಾವಣೆಯ ಸಮಯದಲ್ಲಿ ಭರಪೂರ ಭರವಸೆ ನೀಡುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ಚುನಾವಣೆ ನಂತರ ಕಣ್ಮರೆಯಾಗುತ್ತಾರೆ. ಕಾಂಗ್ರೆಸ್ ಸತತವಾಗಿ ಅಗತ್ಯವಿರುವ ಸಮಯದಲ್ಲಿ ಜನರ ಪರವಾಗಿ ನಿಂತಿದೆ ಎಂದು ಪ್ರತಿಪಾದಿಸಿದರು.

ಜಾತಿ ಆಧಾರಿತ ಜನಗಣತಿ, ಮೀಸಲಾತಿ ಮಿತಿ ಹೆಚ್ಚಳ ಅದಾನಿಯನ್ನು ಒಳಗೊಂಡ ಕ್ರೋನಿ ಕ್ಯಾಪಿಟಲಿಸಂ ಆರೋಪಗಳಂತಹ ರಾಷ್ಟ್ರೀಯ ವಿಷಯಗಳನ್ನು ಮರುಪರಿಶೀಲಿಸುವುದರೊಂದಿಗೆ ಭಾಷಣ ಆರಂಭಿಸಿದ ರಾಹುಲ್ ಗಾಂಧಿ, ಹಣದುಬ್ಬರ ಮತ್ತು ಹೆಚ್ಚುತ್ತಿರುವ ಸಂಪತ್ತಿನ ಅಂತರವನ್ನು ಪರಿಹರಿಸುವಲ್ಲಿ ಮೋದಿ ಮತ್ತು ಕೇಜ್ರಿವಾಲ್ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಹಣದುಬ್ಬರವು ಬಡವರ ಬೆನ್ನು ಮುರಿಯುತ್ತಿದೆ. ಆದರೆ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಅಂಬಾನಿ ಮತ್ತು ಅದಾನಿ ಪ್ರಧಾನಿ ಮೋದಿಯ ಮಾರ್ಕೆಟಿಂಗ್ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೋದಿ ಅಥವಾ ಕೇಜ್ರಿವಾಲ್ ಅದಾನಿ ವಿರುದ್ಧ ಮಾತನಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ? ಅವರಿಬ್ಬರೂ ಒಂದೇ ಸ್ಕ್ರೀಪ್ಟ್ ಹಂಚಿಕೊಳ್ಳುವುದರಿಂದ ಮೌನವಾಗಿದ್ದಾರೆ ಎಂದು ಟೀಕಿಸಿದರು.

Rahul Gandhi at Jai Bapu, Jai Bhim, Jai Samvidhan' public meeting
ದೆಹಲಿ ಚುನಾವಣೆ: ಮಾಜಿ ಸಂಸದ ರಮೇಶ್ ಬಿಧುರಿ ಬಿಜೆಪಿ ಸಿಎಂ ಅಭ್ಯರ್ಥಿ ಎಂದ ಕೇಜ್ರಿವಾಲ್! ಬಹಿರಂಗ ಚರ್ಚೆಗೆ ಸವಾಲು

ಜಾತಿ ಗಣತಿ ಮತ್ತು ಮೀಸಲಾತಿ ಹೆಚ್ಚಳದಂತಹ ಪ್ರಮುಖ ಬೇಡಿಕೆಗಳಿಗೆ ಅವರ ಬದ್ಧತೆಯನ್ನು ಪ್ರಶ್ನಿಸುವ ಮೂಲಕ ಇಂಡಿಯಾ ಬಣದ ಮೈತ್ರಿ ಪಕ್ಷದ ನಾಯಕ ಕೇಜ್ರಿವಾಲ್ ವಿರುದ್ಧ ರಾಹುಲ್ ಗಾಂಧಿ ನೇರವಾಗಿ ವಾಗ್ದಾಳಿ ನಡೆಸಿದರು.

'ನಾನು ಜಾತಿ ಗಣತಿಯ ಬಗ್ಗೆ ಮಾತನಾಡುವಾಗ, ಮೋದಿಯವರಾಗಲಿ, ಕೇಜ್ರಿವಾಲ್ ಆಗಲಿ ಒಂದೇ ಒಂದು ಮಾತನ್ನೂ ಹೇಳುವುದಿಲ್ಲ. ಏಕೆಂದರೆ ಹಿಂದುಳಿದ ವರ್ಗಗಳು, ದಲಿತರು, ಬುಡಕಟ್ಟುಗಳು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಇಬ್ಬರೂ ಬಯಸುತ್ತಾರೆ. ಕೇಜ್ರಿವಾಲ್, ಮೋದಿ ಅವರು ಜಾತಿ ಗಣತಿ ಪರ ಇದ್ದಾರಾ ಎಂಬುದನ್ನು ಕೇಳಿ ಎಂದು ಜನತೆಗೆ ತಿಳಿಸಿದರು.

X

Advertisement

X
Kannada Prabha
www.kannadaprabha.com