Meta: ದೇಶದ ಚುನಾವಣೆ ಕುರಿತು ಜುಕರ್‌ಬರ್ಗ್ ಹೇಳಿಕೆಯಿಂದ ಸಂಕಷ್ಟ; ಸಂಸದೀಯ ಸಮಿತಿಯಿಂದ ಸಮನ್ಸ್ ಎಚ್ಚರಿಕೆ!

ಭಾರತದ ಚುನಾವಣೆಗಳ ಕುರಿತು ಮಾರ್ಕ್ ಜುಕರ್‌ಬರ್ಗ್ ಹೇಳಿಕೆ ಮೆಟಾ ಸಂಕಷ್ಟಕ್ಕೆ ಸಿಲುಕಿರುವಂತೆ ತೋರುತ್ತಿದೆ. ಈಗ ಸಂಸದೀಯ ಸಮಿತಿಯು ಸಂಸ್ಥೆ ವಿರುದ್ಧ ಸಮನ್ಸ್ ಜಾರಿ ಮಾಡುವ ಎಚ್ಚರಿಕೆ ನೀಡಿದೆ.
Mark Zuckerberg
ಮಾರ್ಕ್ ಜುಕರ್‌ಬರ್ಗ್PTI
Updated on

ನವದೆಹಲಿ: ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಮೆಟಾ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸಂಸದ ಮತ್ತು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ನಿಶಿಕಾಂತ್ ದುಬೆ ಹೇಳಿದ್ದಾರೆ. ಈ ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಸಮಿತಿಯು ಮೆಟಾವನ್ನು ಖಂಡಿಸುತ್ತದೆ. ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ತಪ್ಪು ಮಾಹಿತಿಯು ದೇಶದ ಘನತೆಯನ್ನು ಹಾಳು ಮಾಡುತ್ತದೆ. ಈ ತಪ್ಪಿಗಾಗಿ ಆ ಸಂಸ್ಥೆ ಭಾರತೀಯ ಸಂಸತ್ ಮತ್ತು ಇಲ್ಲಿನ ಜನರಲ್ಲಿ ಕ್ಷಮೆಯಾಚಿಸಬೇಕಾಗುತ್ತದೆ ಎಂದು ಹೇಳಿದರು.

ಭಾರತದ ಚುನಾವಣೆಗಳ ಕುರಿತು ಮಾರ್ಕ್ ಜುಕರ್‌ಬರ್ಗ್ ಹೇಳಿಕೆ ಮೆಟಾ ಸಂಕಷ್ಟಕ್ಕೆ ಸಿಲುಕಿರುವಂತೆ ತೋರುತ್ತಿದೆ. ಈಗ ಸಂಸದೀಯ ಸಮಿತಿಯು ಸಂಸ್ಥೆ ವಿರುದ್ಧ ಸಮನ್ಸ್ ಜಾರಿ ಮಾಡುವ ಎಚ್ಚರಿಕೆ ನೀಡಿದೆ. ಇನ್ನು ನಿನ್ನೆ ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಅವರು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ವಿರುದ್ಧ ವಾಗ್ದಾಳಿ ನಡೆಸಿದ್ದ ಬೆನ್ನಲ್ಲೇ ಸಮನ್ಸ್ ಕುರಿತ ಸುದ್ದಿ ಬಂದಿದೆ. ವಾಸ್ತವವಾಗಿ, ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ, ಭಾರತ ಸೇರಿದಂತೆ ಹೆಚ್ಚಿನ ದೇಶಗಳ ಪ್ರಸ್ತುತ ಸರ್ಕಾರಗಳು 2024ರಲ್ಲಿ ಚುನಾವಣಾ ಸೋಲನ್ನು ಎದುರಿಸಬೇಕಾಯಿತು ಎಂದು ಜುಕರ್‌ಬರ್ಗ್ ಹೇಳಿಕೊಂಡಿದ್ದರು.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು 2024ರ ಸಾರ್ವತ್ರಿಕ ಚುನಾವಣೆಗಳನ್ನು ಆಯೋಜಿಸಿದೆ ಎಂದು ವೈಷ್ಣವ್ 'X' ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ 64 ಕೋಟಿಗೂ ಹೆಚ್ಚು ಮತದಾರರು ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಮೇಲೆ ದೇಶದ ಜನರು ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು ಮತ್ತು ಸತತ ಮೂರನೇ ಬಾರಿಗೆ ಅದನ್ನು ಅಧಿಕಾರಕ್ಕೆ ತಂದರು. ಕೋವಿಡ್ ಸಾಂಕ್ರಾಮಿಕ ರೋಗದ ನಂತರ 2024 ರ ಚುನಾವಣೆಯಲ್ಲಿ ಭಾರತ ಸೇರಿದಂತೆ ಹೆಚ್ಚಿನ ಅಧಿಕಾರದಲ್ಲಿರುವ ಸರ್ಕಾರಗಳು ಸೋಲನ್ನು ಎದುರಿಸಿದವು ಎಂಬ ಜುಕರ್‌ಬರ್ಗ್ ಅವರ ಹೇಳಿಕೆ ವಾಸ್ತವಿಕವಾಗಿ ತಪ್ಪು ಎಂದು ಮಾಹಿತಿ ಮತ್ತು ಪ್ರಸಾರ ಸಚಿವರು ಹೇಳಿದರು.

Mark Zuckerberg
Facebook ಸ್ಥಾಪಕ ಝುಕರ್ಬರ್ಗ್ ಹೇಳಿಕೆಗೆ Ashwini Vaishnaw fact check; ಕೇಂದ್ರ ಸಚಿವರಿಂದ ಭರ್ಜರಿ ಕೌಂಟರ್!

ಕೋವಿಡ್-19 ಸಮಯದಲ್ಲಿ 80 ಕೋಟಿ ಜನರಿಗೆ ಉಚಿತ ಆಹಾರ, 2.2 ಬಿಲಿಯನ್ ಲಸಿಕೆಗಳು ಮತ್ತು ಪ್ರಪಂಚದಾದ್ಯಂತದ ದೇಶಗಳಿಗೆ ಸಹಾಯವನ್ನು ಒದಗಿಸುವುದರಿಂದ ಹಿಡಿದು ಭಾರತವನ್ನು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುನ್ನಡೆಸುವವರೆಗೆ, ಪ್ರಧಾನಿ ಮೋದಿಯವರ ಮೂರನೇ ಅವಧಿ ನಿರ್ಣಾಯಕವಾಗಿದೆ ಎಂದು ವೈಷ್ಣವ್ ಹೇಳಿದರು. ಈ ಗೆಲುವು ಅದಕ್ಕೆ ಸಾಕ್ಷಿಯಾಗಿದೆ. ಮೆಟಾವನ್ನು ಟ್ಯಾಗ್ ಮಾಡಿದ ವೈಷ್ಣವ್, ಜುಕರ್‌ಬರ್ಗ್ ಸ್ವತಃ ತಪ್ಪು ಮಾಹಿತಿಯನ್ನು ಹರಡುತ್ತಿರುವುದು ನಿರಾಶಾದಾಯಕವಾಗಿದೆ ಎಂದು ಹೇಳಿದರು. ಅವರು ಸತ್ಯ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಕೆಲಸ ಮಾಡಬೇಕು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com