ರೈತರ ಪ್ರತಿಭಟನೆ: ಕೇಂದ್ರದಿಂದ ನೋಡಲ್ ಅಧಿಕಾರಿ ನೇಮಕ; ಕನಿಷ್ಠ ಬೆಂಬಲ ಬೆಲೆ ಕುರಿತು ದಲ್ಲೆವಾಲ್ ಅರ್ಜಿ ಇಂದು ಸುಪ್ರೀಂ ಕೋರ್ಟ್ ವಿಚಾರಣೆ

ರಾಷ್ಟ್ರೀಯ ಸ್ವಯಂ ಸೇವಕ(RSS) ಸಂಘಕ್ಕೆ ಹತ್ತಿರವಿರುವ ರೈತ ಸಂಘಟನೆಗಳು, ಪ್ರತಿಭಟನೆ ಇತರ ರಾಜ್ಯಗಳಿಗೆ ಹರಡದಂತೆ ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಒತ್ತಾಯಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ರೈತರ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಖಾನೌರಿ ಗಡಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಚಾಲಕ ಜಗಿತ್ ಸಿಂಗ್ ದಲ್ಲೆವಾಲ್ ಅವರನ್ನು ರೈತ ಮುಖಂಡರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

Updated on

ನವದೆಹಲಿ: ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ರೈತರ ಪ್ರತಿಭಟನೆ ಕುರಿತು ಮೌಲ್ಯಮಾಪನ ಮಾಡಿ ನಿರ್ಣಯಿಸಲು, ಪ್ರತಿಭಟನೆಯಿಂದ ಉಂಟಾಗುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಪರಿಸ್ಥಿತಿ ಇತರ ರಾಜ್ಯಗಳಿಗೆ ಹರಡದಂತೆ ತಡೆಯಲು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ(RSS) ಸಂಘಕ್ಕೆ ಹತ್ತಿರವಿರುವ ರೈತ ಸಂಘಟನೆಗಳು, ಪ್ರತಿಭಟನೆ ಇತರ ರಾಜ್ಯಗಳಿಗೆ ಹರಡದಂತೆ ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಒತ್ತಾಯಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ವಿವಿಧ ರಾಜ್ಯಗಳಲ್ಲಿ ರೈತರಿಗೆ ಸಂಬಂಧಿಸಿದ ವಿಷಯಗಳ ಕುರಿತು ಮೇಲ್ವಿಚಾರಣೆ ಮಾಡಲು ಅಧಿಕೃತ ಸಮನ್ವಯ ತಂಡದ ಅವಶ್ಯಕತೆಯಿದೆ ಎಂದು ಮೂಲವೊಂದು ತಿಳಿಸಿದೆ. ಪ್ರಸ್ತುತ, ಹಿರಿಯ ಅಧಿಕಾರಿಗಳು ತಮ್ಮ ತಮ್ಮ ವಿಭಾಗಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡು ರಾಜ್ಯ ಸರ್ಕಾರಗಳೊಂದಿಗೆ ಸಂವಹನ ನಡೆಸುತ್ತಾರೆ. ಜಂಟಿ ಕಾರ್ಯದರ್ಶಿಗಳು, ಹೆಚ್ಚುವರಿ ಕಾರ್ಯದರ್ಶಿಗಳು, ಸಲಹೆಗಾರರು ಮತ್ತು ಆಯುಕ್ತರು ಸೇರಿದಂತೆ ಸುಮಾರು 20 ಹಿರಿಯ ಅಧಿಕಾರಿಗಳಿಗೆ ತಲಾ ಒಂದು ಅಥವಾ ಎರಡು ರಾಜ್ಯಗಳ ಜವಾಬ್ದಾರಿಗಳನ್ನು ವಹಿಸಲಾಗಿದೆ.

ಈ ಅಧಿಕಾರಿಗಳು ನಿಯಮಿತವಾಗಿ ರಾಜ್ಯ ಅಧಿಕಾರಿಗಳೊಂದಿಗೆ ಸಂವಹನ ನಡೆಸುತ್ತಾರೆ ಮತ್ತು ಆಯಾ ಯೋಜನೆಗಳ ಮೂಲಕ ಉದಯೋನ್ಮುಖ ರೈತರ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ಈ ಕಾರ್ಯಗಳಿಗೆ ನಿಯೋಜಿಸಲಾದ ಅಧಿಕಾರಿಗಳಲ್ಲಿ ಒಬ್ಬರು ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಹೆಚ್ಚುವರಿ ಕಾರ್ಯದರ್ಶಿ ಫೈಜ್ ಅಹ್ಮದ್ ಕಿದ್ವಾಯಿ. ಆದರೆ ಕಿದ್ವಾಯ್ ಅವರನ್ನು ಈಗ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ.

ಗುಜರಾತ್ ಮತ್ತು ಒಡಿಶಾ ರಾಜ್ಯಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಮತ್ತೊಬ್ಬ ಹೆಚ್ಚುವರಿ ಕಾರ್ಯದರ್ಶಿ ಮಣೀಂದರ್ ಕೌರ್ ದ್ವಿವೇದಿ ಅವರಿಗೆ ವಹಿಸಲಾಗಿದೆ. ಮಧ್ಯಪ್ರದೇಶ ಮತ್ತು ತಮಿಳುನಾಡನ್ನು ನೋಡಿಕೊಳ್ಳಲು ನೋಡಲ್ ಅಧಿಕಾರಿಯಾಗಿ ಮುಕ್ತನಾದ್ ಅಗರ್ವಾಲ್, ಐಎಎಸ್, ಜಂಟಿ ಕಾರ್ಯದರ್ಶಿ ಸ್ಯಾಮ್ಯುಯೆಲ್ ಪಿ ಕುಮಾರ್, ಅಸ್ಸಾಂಗೆ ನೋಡಲ್ ಅಧಿಕಾರಿಯಾಗಿ; ತೆಲಂಗಾಣಕ್ಕೆ ಸಲಹೆಗಾರರಾದ ರುಚಿಕಾ ಗುಪ್ತಾ; ಕೇರಳಕ್ಕೆ ಸಲಹೆಗಾರರಾದ ಸಿ ಎಫ್ ಜೋಸೆಫ್. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಕ್ಕೆ ನೋಡಲ್ ಅಧಿಕಾರಿಯಾಗಿ ಮತ್ತೊಬ್ಬ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿ ಪ್ರಿಯ ರಂಜನ್ ಅವರನ್ನು ನೇಮಿಸಲಾಗಿದೆ.

ರೈತರ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಖಾನೌರಿ ಗಡಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಚಾಲಕ ಜಗಿತ್ ಸಿಂಗ್ ದಲ್ಲೆವಾಲ್ ಅವರನ್ನು ರೈತ ಮುಖಂಡರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ರೈತರ ಪ್ರತಿಭಟನೆ: ದಲ್ಲೆವಾಲ್ ಗೆ ಹೃದಯಾಘಾತದ ಭೀತಿ, ತೀವ್ರ ರೀತಿಯಲ್ಲಿ ಹದಗೆಟ್ಟ ಆರೋಗ್ಯ!

ಕನಿಷ್ಠ ಬೆಂಬಲ ಬೆಲೆ: ಜನವರಿ 18 ರ ಸಭೆಯ ನಂತರ ಎಲ್ಲಾ ರೈತ ಸಂಘಗಳು ಒಂದೇ ವೇದಿಕೆಗೆ ಬಂದು ಕನಿಷ್ಠ ಬೆಂಬಲ ಬೆಲೆ ಘೋಷಿಸಿದರೆ ಪಂಜಾಬ್‌ನಲ್ಲಿ ರೈತರ ಪ್ರತಿಭಟನೆಯನ್ನು ಬೆಂಬಲಿಸಲು ಹರಿಯಾಣ ಖಾಪ್ ಪಂಚಾಯತ್‌ಗಳು ನಿರ್ಧರಿಸಿವೆ.

ಪ್ರತಿಭಟನೆಗಳನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಒಟ್ಟಾಗಿ ಸೇರಿ ಕನಿಷ್ಠ ಬೆಂಬಲ ಬೆಲೆ ಕಾರ್ಯಸೂಚಿಯನ್ನು ಘೋಷಿಸುವ ಮೂಲಕ ಕೇಂದ್ರವನ್ನು ಒಟ್ಟಾಗಿ ಎದುರಿಸಬೇಕಾಗಿದೆ.

ಜನವರಿ 18 ರ ಸಭೆಯಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕು. ನಂತರ ನಮ್ಮ ಹರಿಯಾಣ ಖಾಪ್ ಪಂಚಾಯತ್‌ಗಳ ಸಮಿತಿಯು ಜನವರಿ 19 ಅಥವಾ 20 ರಂದು ಸಭೆ ಸೇರಿ ಮುಷ್ಕರವನ್ನು ಬೆಂಬಲಿಸುವ ಬಗ್ಗೆ ನಿರ್ಧರಿಸುತ್ತದೆ ಎಂದು 102 ಖಾಪ್ ಪಂಚಾಯತ್‌ಗಳ 11 ಸದಸ್ಯರ ಸಮಿತಿಯ ಸಂಯೋಜಕ ಸತೀಶ್ ಸಿಂಗ್ ಹೇಳಿದರು.

2020-21ರ ಅವಧಿಯಲ್ಲಿ ದೆಹಲಿ ಗಡಿಗಳಲ್ಲಿ ರೈತರ ಮುಷ್ಕರವನ್ನು ಬಲಪಡಿಸುವಲ್ಲಿ ಹರಿಯಾಣ ಖಾಪ್ ಪಂಚಾಯತ್‌ಗಳು ಪ್ರಮುಖ ಪಾತ್ರ ವಹಿಸಿವೆ. ಜನವರಿ 15 ರಂದು ದಲ್ಲೆವಾಲ್ ಆರೋಗ್ಯ, ಎಂಎಸ್‌ಪಿ ಕಾನೂನಿನ ಮೇಲಿನ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.

ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ನೇತೃತ್ವದ ನ್ಯಾಯಾಲಯದ ದ್ವಿಸದಸ್ಯ ಪೀಠವು ಇಂದು ದಲ್ಲೆವಾಲ್ ಅವರ ಆರೋಗ್ಯದ ಕುರಿತಾದ ಅರ್ಜಿಯನ್ನು ಮತ್ತು 2021 ರಲ್ಲಿ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರ ಪ್ರತಿಭಟನಾ ನಿರತ ರೈತರಿಗೆ ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಯ ಕಾನೂನುಬದ್ಧ ಖಾತರಿ ಸೇರಿದಂತೆ ಪ್ರಸ್ತಾವನೆಯನ್ನು ಜಾರಿಗೆ ತರಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ರೈತ ನಾಯಕ ಸಲ್ಲಿಸಿದ ಮನವಿಯನ್ನು ವಿಚಾರಣೆ ನಡೆಸಲಿದೆ. ಜಗ್ಜಿತ್ ಸಿಂಗ್ ದಲ್ಲೆವಾಲ್ 50 ದಿನಗಳಿಗೂ ಹೆಚ್ಚು ಕಾಲ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com